ಅನುಪಿನ ಕಟ್ಟೆ ಕಸ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಚ್ಚಾದ ಹಂದಿ ನಾಯಿ ಸೊಳ್ಳೆಗಳ ಹಾವಳಿ..ಸುತ್ತಮುತ್ತಲ ರೈತರ ಬೆಳೆ ಹಾನಿ ರೈತ ಮೊರೆ ಆಲಿಸುವುದೇ ಮಹಾನಗರ ಪಾಲಿಕೆ?

ಹಂಚಿಕೊಳ್ಳಿ
WhatsApp Facebook X Telegram

ಅನುಪಿನ ಕಟ್ಟೆ ಕಸ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಚ್ಚಾದ ಹಂದಿ ನಾಯಿ ಸೊಳ್ಳೆಗಳ ಹಾವಳಿ..ಸುತ್ತಮುತ್ತಲ ರೈತರ ಬೆಳೆ ಹಾನಿ ರೈತ ಮೊರೆ ಆಲಿಸುವುದೇ ಮಹಾನಗರ ಪಾಲಿಕೆ?

 

ಶಿವಮೊಗ್ಗ ನಗರದ ಹೊರವಲಯದಲ್ಲಿನ ಅನುಪಿನಕಟ್ಟೆ ಕಸವಿಲೆವಾರಿ  ಘಟಕದ ಒಳ ಆವರಣದಲ್ಲಿ  ಹಂದಿ, ಬೀದಿ ನಾಯಿ ಹಾಗೂ ಮತ್ತಿತರ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ತಮ್ಮ ಹೊಲಗದ್ದೆಗಳಲ್ಲಿ ಹಾಕಿದ್ದ ಫಸಲು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಈ ವ್ಯಾಪ್ತಿಯ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆಯನ್ನು ಹಂದಿಗಳು ಹಾಳುಗುತ್ತಿದೆ.. ಕಸವಿಲೆವಾರಿ  ಘಟಕದ ಹತ್ತಿರವಿರುವ ಪುರದಾಳು, ಹನುಮಂತಾಪುರ, ಅನುಪಿನ ಕಟ್ಟೆ, ಶಾಂತಿಪುರ, ಕಡ್ಲೆವೋಡ್ಡು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜಮೀನುಗಳಲ್ಲಿ ಈಗಾಗಲೇ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗಿದ್ದು ದಿನಂಪ್ರತಿ ಹಂದಿಗಳು ದಾಳಿಯಿಟ್ಟು ಬೆಳಗಳನ್ನು ಹಾಳುಮಾಡುತ್ತಿದೆ.. ಬೆಳಯನ್ನು ಹಾಳುಮಾಡುತ್ತಿರುವ ಪ್ರಾಣಿಗಳನ್ನು  ಕೂಡಲೆ ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ರು ಸಂಬಂಧ ಪಟ್ಟ ಇಲಾಖೆಯವರು ಜಾಣ ಮೌನವಹಿಸಿದ್ದಾರೆ.

ಅನುಪಿನ ಕಟ್ಟೆ ಕಸ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಚ್ಚಾದ ಹಂದಿ ನಾಯಿ ಸೊಳ್ಳೆಗಳ ಹಾವಳಿ..ಸುತ್ತಮುತ್ತಲ ರೈತರ ಬೆಳೆ ಹಾನಿ ರೈತ ಮೊರೆ ಆಲಿಸುವುದೇ ಮಹಾನಗರ ಪಾಲಿಕೆ?

ಗ್ರಾಮದ ಹೊರವಲಯದಲ್ಲಿ ಹಲವಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಶುಂಠಿ, ಕಬ್ಬು ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿದೆ. ಮೆಕ್ಕೆಜೋಳ ಈಗ ತೆನೆಬಿಡುತ್ತಲಿದ್ದು, ಹಂದಿಗಳು ಳೆದಿದ್ದ ಮೆಕ್ಕಿಜೋಳದ ತೆನೆಗಳನ್ನು ಸಂಪೂರ್ಣವಾಗಿ ತಿಂದು ಹಾಕಿವೆ. ನಾಡಿನ ಪ್ರಾಣಿಗಳಲ್ಲದೆ ಕಾಡಿನ ಪ್ರಾಣಿಗಳಿಂದಲೂ ಬೆಳೆ ರಕ್ಷಿಸಿಕೊಳ್ಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.

 

ಗ್ರಾಮದ ಹೊರವಲಯದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ರೈತರು ತಮ್ಮ ಬೆಳೆಯನ್ನು ಹಂದಿಗಳಿಂದ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಗ್ರಾಮದ ಬಹುತೇಕ ರೈತರು ಬೆಳೆದಿದ್ದ ಮೆಕ್ಕೆಜೋಳ, ಶುಂಠಿ ಬೆಳೆಗಳೆಲ್ಲ ಹಂದಿಗಳಿಂದ ನಾಶವಾಗಿ, ಭಾರಿ ನಷ್ಟವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಅನಪಿನಕಟ್ಟೆ ಕಸತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂತ್ರಸ್ಥ ರೈತರು ಬೀಗ ಹಾಕಿ ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು.

 

ಹಂದಿಗಳನ್ನು ನಿಯಂತ್ರಿಸುವ ಕುರಿತಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ನಿವಾರಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಅಳಲು ತೋಡಿಕೊಂಡರೆ ಅಧಿಕಾರಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor