ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಚಿತ್ರಹಿಂಸೆ, ಮಹಿಳೆ ಸಾವು – ಆತಂಕಕಾರಿ ಘಟನೆ! /Woman Dies After Exorcism Torture in Holehonnur 08
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ದಿಗಿಲು ಹುಟ್ಟಿಸುವ ಘಟನೆಯೊಂದು ವರದಿಯಾಗಿದೆ. ‘ದೆವ್ವ ಬಿಡಿಸುತ್ತೇನೆ’ ಎಂದು ಹೇಳಿ ಮಹಿಳೆಯೊಬ್ಬರಿಗೆ ಚಿತ್ರಹಿಂಸೆ ನೀಡಿ ಕೊನೆಗೆ ಆಕೆಯ ಸಾವಿಗೆ ಕಾರಣವಾದ ಆಘಾತಕಾರಿ ಪ್ರಸಂಗ ನಡೆದಿದೆ.
Woman Dies After Exorcism Torture in Holehonnur 08
ದೆವ್ವ ಬಿಡಿಸುವ ನೆಪದಲ್ಲಿ ಹಿಂಸೆ

ಹೊಳೆಹೊನ್ನೂರು ವ್ಯಾಪ್ತಿಯ ಜಂಬರಗಟ್ಟೆ ನಿವಾಸಿ 50 ವರ್ಷದ ಗೀತಮ್ಮ ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಇವವ ಮಗ ಗೀತಮ್ಮ ಅವರಿಗೆ ‘ದೆವ್ವ ಹಿಡಿದಿದೆ’ ಎಂದು ನಂಬಿದ್ದ. ಹಾಗಾಗಿ ದೆವ್ವ ಬಿಡಿಸುವ ಸಲುವಾಗಿ,ಗೀತಮ್ಮ ಅವರನ್ನು ಹೊಳೆಹೊನ್ನೂರಿನ ಹಳೆಜಂಬರಗಟ್ಟೆಯಲ್ಲಿರುವ ಶಾಂತಮ್ಮ ಎಂಬ ಮಹಿಳೆಯ ಬಳಿಗೆ ಕರೆದುಕೊಂಡು ಹೋಗಿದ್ದ. ಶಾಂತಮ್ಮನ ಮೈಮೇಲೆ ದೇವರು ಬರುತ್ತದೆ. ಆಕೆ ದೆವ್ವ ಬಿಡಿಸುತ್ತಾಳೆ ಎಂಬ ನಂಬಿಕೆಯಡಿಯಲ್ಲಿ ಇಷ್ಟೆಲ್ಲಾ ಮಾಡಿದ್ದ.
ಚಿತ್ರಹಿಂಸೆಯಿಂದ ಆರೋಗ್ಯ ಏರುಪೇರು, ಸಾವು
ಶಾಂತಮ್ಮ, ದೆವ್ವ ಬಿಡಿಸುವ ನೆಪದಲ್ಲಿ ಗೀತಮ್ಮ ಅವರಿಗೆ ಸಿಕ್ಕಾಪಟ್ಟೆ ಹಿಂಸೆ ನೀಡಿದ್ದಾಳೆ. ಎಸ್ಪಿ ಮಿಥುನ್ ಕುಮಾರ್ ವಾಟ್ಸಾಪ್ ಸಂದೇಶದ ಪ್ರಕಾರ, ಘಟನೆ ನಡೆದ ದಿನ ರಾತ್ರಿ 9.30 ರಿಂದ ಮಧ್ಯರಾತ್ರಿ 1.30 ರವರೆಗೂ ಶಾಂತಮ್ಮ, ಅನಾರೋಗ್ಯಕ್ಕೆ ಈಡಾಗಿದ್ದ ಗೀತಮ್ಮರಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಈ ಚಿತ್ರಹಿಂಸೆಯಿಂದ ಗೀತಮ್ಮ ಅವರ ಆರೋಗ್ಯ ಏರುಪೇರಾಗಿ ಸಾವನ್ನಪ್ಪಿದ್ದಾಳೆ
ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ Woman Dies After Exorcism Torture
ಈ ಅಮಾನವೀಯ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ‘ದೆವ್ವ ಬಿಡಿಸುವ’ ಹೆಸರಿನಲ್ಲಿ ನಡೆಯುವ ಇಂತಹ ಅಂಧಶ್ರದ್ಧೆಯ ಕೃತ್ಯಗಳು ಸಮಾಜದಲ್ಲಿ ಆತಂಕ ಮೂಡಿಸಿದೆ.
distressing incident has been reported from Holehonnur, Shivamogga district, where a 50-year-old woman, Geethamma, has tragically died after allegedly being subjected to severe torture under the guise of an exorcism.
Shivamogga, Holehonnur, exorcism, torture, woman dead, black magic, superstition, Geethamma, Shanthamma, Jambaragatte, police case, Karnataka news, tragic incident.