fortunate day / ಮಲೆನಾಡು ಟುಡೆ ಸುದ್ದಿ / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ , ಶುಕ್ಲ ಪಕ್ಷದ ದ್ವಾದಶಿ ತಿಥಿಯು ಬೆಳಿಗ್ಗೆ 7.40 ರವರೆಗೆ ಇರಲಿದ್ದು, ತದನಂತರ ತ್ರಯೋದಶಿ ಆರಂಭವಾಗಲಿದೆ. ಅಮೃತ ಘಳಿಗೆಯು ಮಧ್ಯಾಹ್ನ 12.56 ರಿಂದ 2.31 ರವರೆಗೆ ಲಭ್ಯವಿರಲಿದೆ.. ಬೆಳಿಗ್ಗೆ 7.30 ರಿಂದ 9.00 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 10.30 ರಿಂದ 12.00 ರವರೆಗೆ ಯಮಗಂಡ ಕಾಲ ಇರಲಿದೆ.
ಇವತ್ತಿನ ರಾಶಿಫಲ /Who will have a fortunate day according to todays daily horoscope
ಮೇಷ / ಕೈಗೊಳ್ಳುವ ಕಾರ್ಯಗಳಲ್ಲಿ ವಿಘ್ನ ಎದುರಾಗಲಿವೆ. ಶ್ರಮಕ್ಕೆ ತಕ್ಕ ಪ್ರತಿಫಲ. ಸಂಬಂಧಿಕರೊಂದಿಗೆ ಮನಸ್ತಾಪ ಸಾಧ್ಯತೆ ಇದ್ದು, ಕುಟುಂಬ ಸದಸ್ಯರಿಂದ ಒತ್ತಡ ಹೆಚ್ಚಾಗಲಿದೆ. ಉದ್ಯೋಗ ಹಾಗೂ ವ್ಯಾಪಾರ ರಂಗಗಳಲ್ಲಿ ಸಾಧಾರಣ ವಾತಾವರಣ ಇರಲಿದೆ.
ವೃಷಭ / ದೈನಂದಿನ ವ್ಯವಹಾರಗಳಲ್ಲಿ ಅಡೆತಡೆ ಕಂಡುಬರಲಿವೆ. ಅನಿರೀಕ್ಷಿತ ಧನವ್ಯಯ, ಪ್ರಯಾಣದ ಬದಲಾವಣೆ ಆಗಬಹುದು. ದೈಹಿಕ ಹಾಗೂ ಮಾನಸಿಕ ಆಯಾಸ, ಪುಣ್ಯಕ್ಷೇತ್ರಗಳ ದರ್ಶನ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಣ್ಣಪುಟ್ಟ ಕಿರಿಕಿರಿ ಎದುರಾಗಲಿವೆ.
ಮಿಥುನ / ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು, ಆಸ್ತಿ ವಿವಾದ ಸುಖಾಂತ್ಯ ಕಾಣಲಿವೆ. ಶುಭ ಸುದ್ದಿ ಕಿವಿಗೆ ಬೀಳಲಿದ್ದು, ಆರ್ಥಿಕ ಲಾಭವಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಭರವಸೆಯ ವಾತಾವರಣ ನೆಲೆಸಲಿದೆ.
ಕರ್ಕಾಟಕ / ವಾಗ್ವಾದ ಸಾಧ್ಯತೆ ಇದೆ. ಅನಗತ್ಯ ಖರ್ಚು ಹೆಚ್ಚಾಗಲಿದ್ದು, ದೂರ ಪ್ರಯಾಣ ಬೆಳೆಸಬೇಕಾಗಬಹುದು. ದೇವರ ದರ್ಶನ ಪಡೆಯಲಿದ್ದೀರಿ ಹಾಗೂ ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರಾಸಕ್ತಿ ಮೂಡಲಿದೆ.
ಸಿಂಹ / ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಆರ್ಥಿಕ ಸ್ಥಿತಿಗತಿ ಉತ್ತಮವಾಗಿರಲಿದ್ದು, ಹೊಸ ವಾಹನ ಹಾಗೂ ಜಮೀನು ಖರೀದಿಸುವ ಯೋಗವಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಿದ್ದು, ಉದ್ಯೋಗ ಮತ್ತು ವ್ಯಾಪಾರಗಳು ಸುಗಮವಾಗಿ ಸಾಗಲಿವೆ.

ಕನ್ಯಾ / ಕೆಲಸದ ಒತ್ತಡ ಅಧಿಕವಾಗಿರಲಿದೆ. ದಿಢೀರ್ ಪ್ರಯಾಣ. ಕುಟುಂಬದಲ್ಲಿ ಹಾಗೂ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದ್ದು, ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ ಮೂಡಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಈ ದಿನ ಮಂದಗತಿಯ ಪ್ರಗತಿ ಇರಲಿದೆ.
ತುಲಾ / ಅಪರಿಚಿತರೊಂದಿಗೆ ಒಡನಾಟ. ಸಮಾಜದಲ್ಲಿ ಗೌರವ, ಆಸ್ತಿಯಿಂದ ಲಾಭ. ಧಾರ್ಮಿಕ ಕಾರ್ಯ, ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರಲಿದೆ ಮತ್ತು ವ್ಯಾಪಾರಗಳಲ್ಲಿ ಉತ್ಸಾಹ ತುಂಬಿರಲಿದೆ.
ವೃಶ್ಚಿಕ /ನೂತನ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ಸಂಬಂಧಿಕರೊಂದಿಗೆ ಸಂತೋಷದಿಂದ ಕಾಲ ಕಳೆಯಲಿದ್ದು,. ಉದ್ಯೋಗಕ್ಕಾಗಿ ಸಂದರ್ಶನಗಳನ್ನು ಎದುರಿಸುವ ಸಾಧ್ಯತೆ ಇದೆ. ವೃತ್ತಿ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇರಲಿದೆ.
ಧನುಸ್ಸು / ಕುಟುಂಬದಲ್ಲಿ ಕಿರಿಕಿರಿ ಉಂಟಾಗಲಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಲಿದ್ದು, ಪುಣ್ಯಕ್ಷೇತ್ರಗಳ ದರ್ಶನ ಮಾಡಲಿದ್ದೀರಿ. ಸಂಬಂಧಿಕರೊಂದಿಗೆ ಮಾತಿನ ಚಕಮಕಿ ನಡೆಯುವ ಸಂಭವವಿದ್ದು, ದೂರದ ಊರುಗಳಿಗೆ ಪ್ರಯಾಣ ಮಾಡಲಿದ್ದೀರಿ. ಉದ್ಯೋಗ ಹಾಗೂ ವ್ಯಾಪಾರಗಳಲ್ಲಿ ಏರಿಳಿತ ಕಂಡುಬರಲಿವೆ.
ಮಕರ /ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಕಾಡಲಿದ್ದು, ಅನಾರೋಗ್ಯದ ಸಮಸ್ಯೆ ಬಾಧಿಸಬಹುದು, ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಲಿದ್ದೀರಿ ಹಾಗೂ ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯದಿನ
ಕುಂಭ / ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ಹೊಸ ಯೋಜನೆಗ ಆರಂಭಿಸಲು ಇದು ಸಕಾಲ, ಶುಭ ಸುದ್ದಿ ಕೇಳಿಬರಲಿವೆ. ಹಠಾತ್ ಧನಲಾಭ, ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ. ವ್ಯಾಪಾರದಲ್ಲಿ ಉತ್ತಮ ಲಾಭ ಸಿಗಲಿದ್ದು, ಉದ್ಯೋಗಿಗಳಿಗೆ ಸಿಹಿಸುದ್ದಿ ಸಿಗಲಿದೆ.

ಮೀನ / ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ. ಮನಸ್ಸಿನ ಯೋಜನೆಗಳು ಕಾರ್ಯರೂಪಕ್ಕೆ ಬರಲಿದ್ದು, ಪ್ರತಿಭೆ ಜಗತ್ತಿಗೆ ಪರಿಚಯವಾಗಲಿದೆ. ದೇವರ ದರ್ಶನ, ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ನಿರಂತರವಾದ ಅಭಿವೃದ್ಧಿ
ಶಿವಮೊಗ್ಗ : ಅಸಲಿಗೆ ಅಡಿಕೆ ರೇಟು ಕರೆಕ್ಟ್ ಆಗಿ ಎಷ್ಟಿದೆ!? ಏನಾಗ್ತಿದೆ?
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.