stars predict for your zodiac sign / ಮಲೆನಾಡು ಟುಡೆ ಸುದ್ದಿ / ಪಂಚಾಂಗ/ ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸದ ಚತುರ್ದಶಿ ತಿಥಿಯು ಬೆಳಿಗ್ಗೆ 7.50 ರವರೆಗೆ ಇರಲಿದೆ. ಈ ನಂತರ ಅಮಾವಾಸ್ಯೆ ಆರಂಭವಾಗಲಿದೆ. ಇನ್ನೂ ಪೂರ್ವಭಾದ್ರ ನಕ್ಷತ್ರ ಮುಂಜಾನೆ 5.48 ರವರೆಗೆ, ತದನಂತರ ಉತ್ತರಭಾದ್ರ ನಕ್ಷತ್ರ ವಿರಲಿದೆ. ಅಮೃತ ಗಳಿಗೆ: ರಾತ್ರಿ 9.37 ರಿಂದ 11.11 ರವರೆಗೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ. ಯಮಗಂಡ ಬೆಳಿಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
ಮೇಷ / ಒಡನಾಟ ಬೆಳೆಯಲಿದೆ. ವಿಶೇಷ ಮನ್ನಣೆ ದೊರೆಯಲಿದ್ದು, ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ. ಕೈಗೊಂಡ ಕಾರ್ಯಗಳಲ್ಲಿ ಜಯಶೀಲರಾಗುವಿರಿ. ಹಳೆಯ ಬಾಕಿ ಹಣ ಕೈಸೇರಲಿದೆ. ವ್ಯಾಪಾರ ವಹಿವಾಟು ಚೇತರಿಕೆ ಕಾಣಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವಿರಿ.
ವೃಷಭ / ಮಂಗಳ ಕಾರ್ಯ ನಡೆಯಲಿದೆ. ಹಳೆಯ ಸಾಲ ಮರಳಿ ಬರಲಿವೆ. ದೈವಿಕ ಚಿಂತನೆ. ಪ್ರಮುಖ ಕೆಲಸ ಮುಗಿವುದು, ನಿಗದಿತ ಸಮಯದಲ್ಲಿ ಹೊಸ ವಿಚಾರ ಕೇಳುವುದು. ವ್ಯಾಪಾರ ಹಾಗೂ ಉದ್ಯೋಗ ರಂಗದಲ್ಲಿ ಗಮನಾರ್ಹ ಪ್ರಗತಿ.
ಮಿಥುನ / ಭಿನ್ನಾಭಿಪ್ರಾಯ ತಲೆದೋರಬಹುದು. ಆರ್ಥಿಕ ಮುಗ್ಗಟ್ಟು. ಕೆಲಸ ಮುಂದೂಡುವ ಪರಿಸ್ಥಿತಿ. ಅನಿರೀಕ್ಷಿತ ಪ್ರಯಾಣ, ಪುಣ್ಯಕ್ಷೇತ್ರಗಳ ದರ್ಶನ. ವ್ಯಾಪಾರ ವ್ಯವಹಾರ ಸಾಮಾನ್ಯ, ಉದ್ಯೋಗದಲ್ಲಿ ಸಣ್ಣ ಬದಲಾವಣೆ.
ಕರ್ಕಾಟಕ / ಶ್ರಮಕ್ಕೆ ತಕ್ಕ ಪ್ರತಿಫಲ, ಖರ್ಚು ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳತ್ತ ಮನಸ್ಸು ವಾಲಲಿದೆ. ದೈನಂದಿನ ಕೆಲಸಗಳಲ್ಲಿ ಅಲ್ಪ ಅಡೆತಡೆ. ಅನಾರೋಗ್ಯ, ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಾಮಾನ್ಯ ದಿನ.
ಸಿಂಹ / ಅಂದುಕೊಂಡ ಕೆಲಸ ನಿಗದಿತ ವೇಳೆಗೆ ಮುಕ್ತಾಯಗೊಳ್ಳುವುದು, ಸಮಾಜದಲ್ಲಿ ಗೌರವ ಆದರಗಳು ವೃದ್ಧಿಸಲಿವೆ. ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಲಾಭದಾಯಕ ವಾತಾವರಣ, ಉದ್ಯೋಗಿಗಳಿಗೆ ಅನುಕೂಲಕರ ಸಮಯ.
ಕನ್ಯಾ / ಸ್ನೇಹಿತರ ಸಂಪರ್ಕ. ಶುಭ ಸಮಾಚಾರ. ಅಚ್ಚರಿಯ ಘಟನೆ. ಮಹತ್ವದ ಒಪ್ಪಂದ ಏರ್ಪಡಲಿವೆ. ಆಕಸ್ಮಿಕ ಧನಲಾಭದ ಯೋಗ, ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಆಶಾದಾಯಕ ವಾತಾವರಣ.
ತುಲಾ / ಆರ್ಥಿಕ ಸ್ಥಿತಿ ಆಶಾದಾಯಕವಾಗಿರುವುದಿಲ್ಲ. ಅಲೆದಾಟ ಹಾಗೂ ಶ್ರಮ ಹೆಚ್ಚಾಗಲಿದೆ. ಸಂಬಂಧಿಕರೊಂದಿಗೆ ಮನಸ್ತಾಪ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಒತ್ತಡ
ವೃಶ್ಚಿಕ / ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕುಟುಂಬದ ಸದಸ್ಯರಿಂದ ಹೆಚ್ಚಿನ ಒತ್ತಡ ನಿರ್ಮಾಣವಾಗಲಿದೆ. ದೇವಸ್ಥಾನಗಳಿಗೆ ಭೇಟಿ. ದಿಢೀರ್ ಪ್ರಯಾಣ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಸಾಧಾರಣ ಅಡಚಣೆ.

ಧನುಸ್ಸು / ವಿಶೇಷ ಆಮಂತ್ರಣ ಬರಲಿವೆ. ಔತಣಕೂಟ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕೈಗೊಂಡ ಕೆಲಸ ಯಶಸ್ವಿಯಾಗಲಿವೆ. ನೂತನ ಉದ್ಯೋಗಾವಕಾಶ. ಭೂವಿವಾದ ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ
ಮಕರ / ಕೌಟುಂಬಿಕ ವಲಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರೋಗ್ಯದ ಕಡೆ ಗಮನಹರಿಸುವುದು ಸೂಕ್ತ. ಅತಿಯಾದ ಶ್ರಮ. ಕೆಲಸಕಾರ್ಯಗಳಲ್ಲಿ ಆತುರ ಬೇಡ. ವ್ಯಾಪಾರ ಹಾಗೂ ಉದ್ಯೋಗದ ಸ್ಥಿತಿಗತಿ ಸಾಧಾರಣವಾಗಿರಲಿವೆ.
ಕುಂಭ / ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಶೈಕ್ಷಣಿಕ ಅವಕಾಶ ತೆರೆದುಕೊಳ್ಳಲಿವೆ. ಪ್ರಭಾವಿ ವ್ಯಕ್ತಿಗಳ ಪರಿಚಯ.ಕೆಲಸಗಳು ಚುರುಕಾಗಿ ಸಾಗಲಿದ್ದು, ವ್ಯಾಪಾರ ವಿಸ್ತರಣೆ. ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿ.
ಮೀನ / ಕೆಲಸಗಳನ್ನು ಅನಿವಾರ್ಯವಾಗಿ ಮುಂದೂಡುವಿರಿ. ಆಕಸ್ಮಿಕ ಪ್ರಯಾಣ,. ಅನಾರೋಗ್ಯ. ಸಹೋದರರನ್ನು ಭೇಟಿಯಾಗುವಿರಿ. ವ್ಯಾಪಾರ ವ್ಯವಹಾರ ಹಾಗೂ ಉದ್ಯೋಗದಲ್ಲಿ ಈ ದಿನ ಮಂದಗತಿಯಲ್ಲಿ ಸಾಗಲಿದೆ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
ಶಿವಮೊಗ್ಗ: ಮನೆಗೆ ಕ್ಯೂರಿಂಗ್ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾರೆ ಮೇಸ್ತ್ರಿ ಸಾವು
What do the stars predict for your zodiac sign today according to the latest astrological alignments, and how can the daily Panchangam details help you plan your day effectively?
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.