ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ: ಏಪ್ರಿಲ್ 16ರಂದು ಶಿವಮೊಗ್ಗದಲ್ಲಿ ಬೃಹತ್ ಸೈಕಲ್ ಮತ್ತು ವಾಹನ ಜಾಥಾ

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಶಿವಮೊಗ್ಗ : ಪಶ್ಚಿಮ ಘಟ್ಟಗಳ ಪರಿಸರಕ್ಕೆ ಮಾರಕವಾಗಿರುವಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆನ್ನು ಕೈಬಿಡಬೇಕೆಂದು ಒತ್ತಾಯಿಸಿ, ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳ ನೇತೃತ್ವದಲ್ಲಿ ಏಪ್ರಿಲ್ 16ರಂದು ನಗರದಲ್ಲಿ ಬೃಹತ್ ಸೈಕಲ್ ಹಾಗೂ ವಾಹನಗಳ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ: ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ನೇರ ಸಂದರ್ಶನ, ಎಲ್ಲಿ ಯಾವಾಗ 

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಾಜಿ ಡಿಸಿಎಂ ಹಾಗೂ ರಾಷ್ಟ್ರಭಕ್ತರ ಬಳಗದ ಸ್ಥಾಪಕ ಕೆ.ಎಸ್. ಈಶ್ವರಪ್ಪ, ಈ ಯೋಜನೆಯ ವಿರುದ್ಧ ಈಗಾಗಲೇ ನಿರಂತರ ಹೋರಾಟಗಳು ನಡೆಯುತ್ತಿವೆ. ಇದರ ಮುಂದುವರಿದ ಭಾಗವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಜಾಥಾ ಆಯೋಜಿಸಲಾಗಿದೆ ಎಂದು ತಿಳಿಸಿದರು. 

ಜಾಥಾವನ್ನು ಪ್ರಮುಖ ನರರೋಗ ತಜ್ಞರಾದ ಡಾ. ಶಿವರಾಮ ಕೃಷ್ಣ ಮತ್ತು ಶರಾವತಿ ನರ್ಸಿಂಗ್ ಹೋಂನ ಡಾ. ನಾರಾಯಣ್ ಉದ್ಘಾಟಿಸಿ, ಈ ಯೋಜನೆಯ ದುಷ್ಪರಿಣಾಮಗಳ ಬಗ್ಗೆ ಮುಖ್ಯ ಭಾಷಣ ಮಾಡಲಿದ್ದಾರೆ. ಅಣ್ಣಾ ಹಜಾರೆ ಹೋರಾಟ ಸಮಿತಿ, ಶಿವಮೊಗ್ಗ ಸೈಕಲ್ ಕ್ಲಬ್, ಸಾಹಸ ಮತ್ತು ಸಾಂಸ್ಕೃತಿಕ ಅಕಾಡೆಮಿ ಸೇರಿದಂತೆ ಮಲೆನಾಡಿನ ಹತ್ತಾರು ಪರಿಸರ ಪರ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದರು

ಕೆಪಿಸಿಎಲ್ ಉತ್ತರಕ್ಕೆ ಅಸಮಾಧಾನ

ಯೋಜನೆಯ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಕೆಪಿಸಿಎಲ್ (KPCL) ಸಂಸ್ಥೆಗೆ ಕೇಳಲಾಗಿದ್ದ 32 ಪ್ರಶ್ನೆಗಳಿಗೆ ಏಪ್ರಿಲ್ 9ರಂದು ಲಿಖಿತ ಉತ್ತರ ಬಂದಿದೆ. ಆದರೆ, ಕೆಪಿಸಿಎಲ್ ತಾಂತ್ರಿಕ ಮತ್ತು ಕಾನೂನಾತ್ಮಕ ಲೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ ಹಾರಿಕೆಯ ಉತ್ತರ ನೀಡಿದೆ ಎಂದು ಈಶ್ವರಪ್ಪ ದೂರಿದರು. ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಡಿಪಿಆರ್ (DPR) ನೀಡಲು ನಿರಾಕರಿಸಿದ್ದಾರೆ. ಈಗಾಗಲೇ ಹೈಕೋರ್ಟ್ ಈ ಯೋಜನೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರೂ ಕೆಪಿಸಿಎಲ್ ತನ್ನ ಹಠಮಾರಿ ಧೋರಣೆ ಮುಂದುವರಿಸಿದೆ ಎಂದು ಅವರು ಕಿಡಿಕಾರಿದರು.

Vehicle Rally Against Sharavathi Pumped Storage Project

shivamogga car decor sun control house
shivamogga car decor sun control house
Vehicle Rally Jio Tower Scam Shivamogga KFD Alert Collapse Canara Bank ತೀರ್ಥಹಳ್ಳಿ : ಬೈಕ್​ ತಗೊಂಡೋರು, ಕ್ಲಿಯರೆನ್ಸ್ ಲೆಟರ್​ ಕೇಳಿದ್ದಕ್ಕೆ ಏನೆಲ್ಲಾ ಆಯ್ತು ಓದಿ
Vehicle Rally

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor