BEFORE : ಎಣ್ಣೆ ಏಟಲ್ಲಿ ಪೊಲೀಸರೊಂದಿಗೆ ಕಿರಿಕ್​ : AFTER ಏನಾಯ್ತು ಸುದ್ದಿ ಓದಿ

This Article Written by / Prathapa thirthahalli / ಸೆಪ್ಟೆಂಬರ್ 3, 2025

today news

today news :   BEFORE : ಎಣ್ಣೆ ಏಟಲ್ಲಿ ಪೊಲೀಸರೊಂದಿಗೆ ಕಿರಿಕ್​ : AFTER ಏನಾಯ್ತು ಸುದ್ದಿ ಓದಿ

ಸಾಗರ: ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಯುವಕನೊಬ್ಬನಿಗೆ ನ್ಯಾಯಾಲಯ 5,000 ದಂಡ ವಿಧಿಸಿ ಆದೇಶ ನೀಡಿದೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ನಗರದಲ್ಲಿ ನಡೆದಿದೆ.

ಕಳೆದ ಗುರುವಾರ ರಾತ್ರಿ, ಸಾಗರ ಟೌನ್ ಪೊಲೀಸ್ ಠಾಣೆಯ 112 ವಾಹನದಲ್ಲಿ ಪೊಲೀಸರು ಬಿ.ಹೆಚ್. ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ, ಪ್ರಿಯದರ್ಶಿನಿ ಬಾರ್ ಮತ್ತು ರೆಸ್ಟೋರೆಂಟ್ ಮುಂಭಾಗದಲ್ಲಿ ಕೆಲವು ಯುವಕರು ಗುಂಪು ಕಟ್ಟಿಕೊಂಡು ನಿಂತಿದ್ದರು. ಇದನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಮೀರಾಬಾಯಿ ಎಂಬುವವರು ಯುವಕರಿಗೆ ಬುದ್ಧಿ ಹೇಳಿ ಕಳುಹಿಸಲು ಮುಂದಾದರು.

ಈ ವೇಳೆ, ಯುವಕರ ಗುಂಪಿನಲ್ಲಿದ್ದ ಓರ್ವ ಯುವಕ ಮದ್ಯಪಾನದ ಅಮಲಿನಲ್ಲಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ಸಂಬಂಧ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಯುವಕನ ತಪ್ಪನ್ನು ಖಚಿತಪಡಿಸಿ, ₹5,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

today news

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ

Leave a Comment