sslc 2025 exam : 63 ನೇ ವಯಸ್ಸಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಪಾಸಾದ ತೀರ್ಥಹಳ್ಳಿ ನಿವಾಸಿ

ಹಂಚಿಕೊಳ್ಳಿ
WhatsApp Facebook X Telegram
sslc 2025 exam
sslc 2025 exam ತೀರ್ಥಹಳ್ಳಿ ಪೇಟೆಯ ನಿವಾಸಿಯಾಗಿರುವ ಪ್ರಮಿಳಾ ನಾಯಕ್​ 2024-25ನೇ ಸಾಲಿನ ಎಸ್​​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು.

sslc 2025 exam  : ನಿನ್ನೆದಿನ ಎಸ್​ಎಸ್​ಎಲ್​ಸಿ ರಿಸಲ್ಟ್ ಹೊರೆಬಿದ್ದಿದೆ. ಈ ಫಲಿತಾಂಶದಲ್ಲಿ ಶಿವಮೊಗ್ಗ ರಾಜ್ಯದಲ್ಲಿ ಒಂದು ಸ್ಥಾನ ಕಡಿಮೆಯಾಗಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು ರಾಜ್ಯದ ಟಾಪರ್​ಗಳಲ್ಲಿ ಸ್ಥಾನ ಪಡೆದಿದ್ದಾರೆ. 

ಈ ನಡುವೆ ಇನ್ನೊಂದು ಸುದ್ದಿ ಕುತೂಹಲಕಾರಿಯಾಗಿದೆ. ಶಿವಮೊಗ್ಗದ ನಿವಾಸಿ 63 ವರುಷದ ಮಹಿಳೆಯೊಬ್ಬರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಪ್ರಮಿಳಾ ನಾಯಕ್​ ಎಂಬವರು ತಮ್ಮ 63 ವಯಸ್ಸಿನಲ್ಲಿ ಪರೀಕ್ಷೆ ಬರೆದು ಪಾಸಾಗಿದ್ದು, ಅವರಿಗೆ ಹಲವರು ಶುಭಾಶಯ ತಿಳಿಸಿದ್ದಾರೆ.

sslc 2025 exam / ದಶಕಗಳ ಕನಸು

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೇಟೆಯ ನಿವಾಸಿಯಾಗಿರುವ ಪ್ರಮಿಳಾ ನಾಯಕ್​  2024-25ನೇ ಸಾಲಿನ ಎಸ್​​ಎಸ್​ಎಲ್​ಸಿ ಪರೀಕ್ಷೆ  ಬರೆದಿದ್ದರು. ತಮ್ಮ ಮದುವೆ ಬಳಿಕ ಶಿಕ್ಷಣಕ್ಕೆ ವಿದಾಯ ಹೇಳಿದ್ದ ಪ್ರಮಿಳಾ ನಾಯಕ್ ಮನೆ ಸಂಸಾರದ ಕಡೆ ಗಮನ ನೀಡಿದರು. ಇದರ ನಡುವೆ ಅವರಿಗೆ SSLC Exam ಬರೆಯಬೇಕು ಎನ್ನುವ ಇಚ್ಚೆ ಹಾಗೆಯೇ ಉಳಿದಿತ್ತು. 

ಇವರ ಪತಿ ನಿವೃತ್ತ ಸಿಂಡಿಕೇಟ್ ಉದ್ಯೋಗಿ, ಪುತ್ರ ಖಾಸಗಿ ಕಂಪನಿಯಲ್ಲಿ ಸಿಇಒ. ಈ ವರ್ಷ ಶತಾಯಗತಾಯ ಪರೀಕ್ಷೆ ಬರೆದು ಪಾಸಾಗಬೇಕು ಎಂದು ಕೊಂಡಿದ್ದ ಪ್ರಮಿಳಾ ನಾಯಕ್ ಅದರಂತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಪುತ್ರ ಹಾಗೂ ಸೊಸೆ ವಿದೇಶದಿಂದಲೇ ವಿಶ್ ಮಾಡಿದ್ದಾರೆ.  

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor