ಕಮಿಟಿಗಳಿಗೆ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಕಡ್ಡಾಯ ಸೇರಿದಂತೆ ಎಸ್​ಪಿ 13 ಸೂಚನೆ

shivamogga sp instruction to festival ಶಿವಮೊಗ್ಗ, malenadu today news : August 20 2025 : ಶಿವಮೊಗ್ಗ ಪೊಲೀಸ್ ಇಲಾಖೆ ಹಬ್ಬಗಳಿಗೆ ನಿರಂತರ ಸಿದ್ದತೆಗಳನ್ನು ನಡೆಸಿದೆ. ಇದರ ನಡುವೆ ಸರಣಿಯಾಗಿ ನಡೆಸ್ತಿರುವ ಶಾಂತಿಸಭೆಯಲ್ಲಿ ಪೊಲೀಸ್ ಇಲಾಖೆ ಒಂದಲ್ಲ ಒಂದು ಹೊಸ ವಿಚಾರಗಳನ್ನು ಹೇಳುತ್ತಿದೆ. ಈ ನಡುವೆ ಇವತ್ತು ದಿನಾಂಕಃ 20-08-2025 ರಂದು ಡಿಎಆರ್​ ಸಭಾಂಗಣದಲ್ಲಿ ನಡೆಸಿದ ಪ್ರಮುಖ ಸಭೆಯಲ್ಲಿ ಎಸ್​ಪಿ ಮಿಥುನ್ ಕುಮಾರ್ ಮಹತ್ವದ ಮತ್ತೊಂದು ಸೂಚನೆ ನೀಡಿದ್ದಾರೆ. 

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

ಇದನ್ನು ಸಹ ಓದಿ : 15 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪೇಪರ್​ ಬ್ಲಾಷ್ಟಿಂಗ್​ ಹಾಗೂ ಸಿಡಿಮದ್ದು ನಿಷೇಧ https://malenadutoday.com/ganesh-chaturthi/ 

shiralakoppa police raid and sp statement  bommanakatte murder case sp mithun kumar
bommanakatte murder case sp mithun kumar

ಎಸ್​ಪಿ ಮಿಥುನ್ ಕೂಡ್ ನೀಡಿರುವ ಸೂಚನೆ  /shivamogga sp instruction to festival

  1. ಶಿವಮೊಗ್ಗ  ಜಿಲ್ಲೆಯಾದ್ಯಂತ ಶಾಂತಿಸಭೆಗಳನ್ನು ನಡೆಸಲಾಗುತ್ತಿದ್ದು, ಜನರ ಸಹಕಾರ ಎಂದಿನಂತೆ ನಿರೀಕ್ಷಿಸುತ್ತೇವೆ 
  2. ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸಮಾಜದ ಪ್ರಮುಖ ಮುಖಂಡರುಗಳಿಗೆ ನಾಯಕಯತ್ವವನ್ನು ನೀಡಲಾಗಿದೆ.  
  3. ಯಾವುದೇ ಸಮಸ್ಯೆಗಳಾಗದಂತೆ ಸ್ಥಳೀಯ ಮುಖಂಡರು ಮುಂದಾಳತ್ವ ವಹಿಸುತ್ತಾರೆ ಎಂಬ ನಂಬಿಕೆ ಇದೆ  
  4. ಯಾವುದೇ ನಿರ್ಬಂಧಗಳನ್ನು ಹಾಕುವುದು ನಮ್ಮ ಉದ್ದೇಶ ಅಲ್ಲ , ಬದಲಾಗಿ ಸಾಮೂಹಿಕವಾಗಿ ಹಬ್ಬವನ್ನು ಆಚರಣೆ ಸಂಬಂಧ ಸೂಚನೆಗಳನ್ನು ನೀಡುತ್ತಿದ್ದೇವೆ 
  5. ಈದ್ -ಮಿಲಾದ್ ನಲ್ಲಿ ಪ್ರತ್ಯೇಕವಾಗಿ Rally ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪ್ರತೀ ಮೆರವಣಿಗೆಗೂ ಸಿಬ್ಬಂದಿ ನಿಯೋಜಿಸಲಾಗುತ್ತದೆ.
  6. ಹಿಂದೂ ಮಹಾಸಭಾ ಗಣಪತಿ ಮೆರೆವಣಿಗೆ ಸಮಯದಲ್ಲಿ ಮಫ್ತಿಯಲ್ಲಿ ಸಿಬ್ಬಂದಿ ಇರುತ್ತಾರೆ. 
  7. ಮೆರವಣಿಗೆ ವೇಳೆ ಕೆಲವರು ಕಟ್ಟಡಗಳ ಮೇಲೆ ಹತ್ತುವ ಇಳಿಯುವ ಪ್ರಯತ್ನ ಮಾಡುತ್ತಾರೆ ಅಂತವರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಬೇಕಾಗುತ್ತದೆ
  8. ಈದ್-ಮಿಲಾದ್ ಕಮಿಟಿಯಿಂದ ಅಥವಾ ಗಣಪತಿ ಮಂಡಳಿಯಿಂದ ಪ್ರತೀ ಬಾರಿ 5 ರಿಂದ 6 ಜನ ಸ್ವಯಂಸೇವಕರನ್ನು ನೀವು ನಿಯೋಜನೆ ಮಾಡಲಾಗುತ್ತದೆ. 
  9. ಈಸಲವೂ ಸ್ವಯಂಸೇವಕರನ್ನು ನಿಯೋಜಿಸಲಾಗುತ್ತಿದ್ದು, ಅವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ
  10. ಆರ್ಗನೈಸ್ ಮಾಡುವ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ( ಮೈಕ್ ಸಿಸ್ಟಮ್) ನಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದಂತೆ ನೋಡಿಕೊಳ್ಳಬೇಕು
  11. ನಮ್ಮ ಇಲಾಖೆಯ ಅಧಿಕಾರಿಗಳೂ ಸಹ  ಮೈಕ್ ಸಿಸ್ಟಮ್  ಬಳಕೆ ಮಾಡಿಕೊಳ್ಳುವ ಹಾಗೆ ಇರಬೇಕು ನಾವು ಕೊಡುವ ಸಲಹೆ ಸೂಚನೆಗಳು 200 ರಿಂದ 300 ಮೀಟರ್ ವರೆಗೂ ಕೇಳಿಸುವ ಹಾಗೆ ಇರಬೇಕು.
  12. ಈ ಬಾರಿ ಕಡ್ಡಾಯವಾಗಿ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅನ್ನು ಅಳವಡಿಕೆ ಮಾಡಿಕೊಳ್ಳಬೇಕು 
  13. ರಾಜ್ಯದ ವಿವಿಧ ಭಾಗಗಳಿಂದ ಅಧಿಕಾರಿ ಹಾಗೂ ಸಿಬ್ಬಂಧಿಗಳನ್ನು ನೇಮಕ ಮಾಡಲಾಗುತ್ತಿದೆ. 

Malenadu Today

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ.

shivamogga sp instruction to festival

Leave a Comment