ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಶಿವಮೊಗ್ಗ ಸಿಟಿಯಲ್ಲಿಯೇ ಸಿಕ್ಕಿಬಿದ್ದ ಹೊರಜಿಲ್ಲೆಯ ಮಂದಿ

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ಪೊಲೀಸರು ಇತ್ತೀಚೆಗೆ ಭದ್ರಾವತಿಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ರೇಡ್ ಮಾಡಿದ್ದರು. ಇದರ ನಡುವೆ ಶಿವಮೊಗ್ಗದಲ್ಲಿಯು ಇದೇ ಮಾದರಿಯ ರೇಡ್ ನಡೆದಿದ್ದು, ವಿಷಯ ತಡವಾಗಿ ಗೊತ್ತಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ಸಹ ದಾಖಲಾಗಿದೆ. IMMORAL TRAFFIC PREVENTION ACT, 1956 (U/s-3,4,5) ಅಡಿಯಲ್ಲಿ ದಾಖಲಾಗಿರುವ ಕೇಸ್​ನ ವಿವರ ಹೀಗಿದೆ.

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ

ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿ.ವೈ.ಎಸ್.ಪಿ ನೇತೃತ್ವದ ತಂಡ, ಮಹಿಳಾ ಆರೋಪಿಯೊಬ್ಬರನ್ನು ಬಂಧಿಸಿ, ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದ ಮತ್ತೋರ್ವ ಮಹಿಳೆಯನ್ನು ರಕ್ಷಿಸಿದ್ದಾರೆ.

ಮೇ 19, 2026 ರಂದು ಈ ಕಾರ್ಯಾಚರಣೆ ನಡೆದಿದೆ. ಪಂಚರೊಂದಿಗೆ ತೆರಳಿ ರೇಡ್ ನಡೆಸಿದ ಪೊಲೀಸರಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 43 ವರ್ಷದ ಮಹಿಳೆ, ಗ್ರಾಹಕ ಹಾಗೂ ನೊಂದ ಮಹಿಳೆ ಪತ್ತೆಯಾಗಿದ್ದಾರೆ.

ಕಳೆದ 3 ತಿಂಗಳಿನಿಂದ ಮನೆಯನ್ನು ಬಾಡಿಗೆಗೆ ಪಡೆದಿದ್ದ ಆರೋಪಿ ಮಹಿಳೆಯು, ಬೇರೆ ಕಡೆಯಿಂದ ಯುವತಿಯರನ್ನು ಕರೆಸಿ ಗ್ರಾಹಕರಿಂದ 2000 ರೂಪಾಯಿ ಹಣ ಪಡೆದು, ಯುವತಿಯರಿಗೆ 1000 ರೂಪಾಯಿ ನೀಡಿ ಉಳಿದ ಹಣವನ್ನು ತಾನೇ ಇಟ್ಟುಕೊಳ್ಳುತ್ತಿದ್ದಳು ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಾರ್ಯಾಚರಣೆ ವೇಳೇ ಧಾರವಾಡ ಜಿಲ್ಲೆಯ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor