Car Hits Pedestrian / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದಲ್ಲಿ ನಿನ್ನೆ ದಿನ ನಡೆದ ಒಂದು ಘಟನೆ ಬಗ್ಗೆ ತಿಳಿದವರು, ಹೀಗಾದರೆ ಹೇಗಪ್ಪ ಎನ್ನುತ್ತಿದ್ದಾರೆ. ಏಕೆಂದರೆ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಗುದ್ದಿ ಕಾಲೇ ಕಟ್ ಆದರೇ ಆ ಮಹಿಳೆಯ ಪರಿಸ್ಥಿತಿ ಮುಂದೇನು? ಎಂಬುದು ಎಲ್ಲರ ಮನಸಲ್ಲೂ ತಲೆಯಲ್ಲೂ ಒಂದು ಸಣ್ಣ ಕನಿಕರದ ಜೊತೆಗೆ ಭವಿಷ್ಯ ಹಾಗೂ ಜೀವನದ ಕ್ಷಣಿಕತೆಯನ್ನು ತೆರೆದಿಡುತ್ತದೆ.
Whatsapp / https://chat.whatsapp.com/JrsZ8He4nN600n0r3tJItz
ಅಂದಹಾಗೆ ನಿನ್ನೆ ನಡೆದಿದ್ದು ಇಷ್ಟು, ಇಲ್ಲಿನ ಬ್ಲಡ್ ಬ್ಯಾಂಕ್ ಸಮೀಪ, ರೈಲ್ವೆ ಸ್ಟೇಷನ್ ಬಳಿಯಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿ ಮಹಿಳೆಯೊಬ್ಬರ ಪಾದವೇ ತುಂಡಾಗಿತ್ತು. (Car Hits Pedestrian) ವಿನಾಯಕ ನಗರದ ನಿವಾಸಿ ಲತಾ (43) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಕಾಲೇಜು ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ. ರೋಟರಿ ರಕ್ತನಿಧಿ ಕೇಂದ್ರದ ಸಮೀಪ ಬರುತ್ತಿದ್ದ ಕಾರು, ರಸ್ತೆ ಬದಿ ಸಾಗುತ್ತಿದ್ದ ಲತಾರಿಗೆ ಡಿಕ್ಕಿ ಹೊಡೆದಿದೆ. ಅಲ್ಲದೆ ಮುಂದುವರಿದು ಕಾರು ಫುಟ್‌ಪಾತ್‌ನ ಕಬ್ಬಿಣದ ರೇಲಿಂಗ್‌ಗೆ ಅಪ್ಪಳಿಸಿದೆ. ಪರಿಣಾಮವಾಗಿ ರೇಲಿಂಗ್ ಪುಡಿಪುಡಿಯಾಗಿದೆ. ರ್ಯಾಶ್ ಡ್ರೈವಿಂಗ್ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಇನ್ನೂ ಘಟನೆ ಬೆನ್ನಲ್ಲೆ ಸ್ಥಳೀಯರು ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಶಿವಮೊಗ್ಗದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.
