ಬೆಟ್ಟೆ, ಗೊರಬಲು ರೇಟ್​​ ಏರ್ತು, ಇನ್ನುಳಿದ ಅಡಿಕೆ ರೇಟ್​ಗಳ ಕತೆ ಏನಾಯ್ತು, ಅಡಿಕೆ ರೇಟ್​ಗಳ ಸಂಪೂರ್ಣ ವಿವರ

ಹಂಚಿಕೊಳ್ಳಿ
WhatsApp Facebook X Telegram
Shivamogga arecanut
Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಪ್ರತಿನಿತ್ಯ ಅಡಿಕೆ ರೇಟು ಹಾವು ಏಣಿ ಆಟ ಆಡುತ್ತಿರುತ್ತದೆ. ಕೆಲವೊಮ್ಮೆ ರೇಟು ಆಮೆ ಸ್ಪೀಡ್​​ನಲ್ಲಿ ಏರಿದರೆ, ಇನ್ನೂ ಕೆಲವೊಮ್ಮೆ ಕುದುರೆ ಸ್ಪೀಡ್​​ನಲ್ಲಿ ಇಳಿಯುತ್ತದೆ. ಈ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಅಡಿಕೆ ಬೆಳೆಯುವಂತಹ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ನಮ್ಮ ಮಲೆನಾಡು ಟುಡೇ ಸುದ್ದಿ ಸಂಸ್ಥೆಯು ಪ್ರತಿನಿತ್ಯ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಕಟವಾಗುವ ಅಡಿಕೆ ರೇಟ್‌ ಅನ್ನು ತಿಳಿಸುವ ಕೆಲಸ ಮಾಡುತ್ತಿದೆ.

ಇವತ್ತು ಅಂದರೆ ಸೆಪ್ಟಂಬರ್​ 03 ರಂದು ಹಸ, ರಾಶಿ ಇಡಿ, ಗೊರಬಲು ಹಾಗೂ ಬೆಟ್ಟೆಗಳ ರೇಟ್​ಗಳು ಇಂತಿವೆ, ನಿನ್ನೆಗೆ ಹೋಲಿಸಿದರೆ ರಾಶಿ ಇಡಿ ಹಾಗೂ ಗೊರಬಲುಗಳ ರೇಟ್​ನಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದ್ದು, ಉಳಿದ ಹಸ ಹಾಗೂ ಬೆಟ್ಟೆಗಳ ರೇಟ್​​ನಲ್ಲಿ ಸ್ವಲ್ಪ ಕಡಿಮೆಯಾಗಿದೆ. ಇವತ್ತಿನ ಸಂಪೂರ್ಣ ರೇಟ್ ವಿವರ ಇಲ್ಲಿದೆ,

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಶಿವಮೊಗ್ಗ – ಇಂದಿನ ಧಾರಣೆ (03/09/2026)

ಸರಕು/ಹಸ:

ಕನಿಷ್ಠ: 56,099 | ಗರಿಷ್ಠ: 87,009 | ಮಾದರಿ: 79,739

ಬೆಟ್ಟೆ:

ಕನಿಷ್ಠ: 50,999 | ಗರಿಷ್ಠ: 62,300 | ಮಾದರಿ: 61,589

ರಾಶಿ ಇಡಿ:

ಕನಿಷ್ಠ: 48,009 | ಗರಿಷ್ಠ: 53,307 | ಮಾದರಿ: 50,089

ಗೊರಬಲು:

ಕನಿಷ್ಠ: 19,000 | ಗರಿಷ್ಠ: 43,730 | ಮಾದರಿ:40,699

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor