Shivamogga | ಶಿವಮೊಗ್ಗ ಜೈಲ್‌ ಮೇಲೆ SP ಮಿಥುನ್‌ ಕುಮಾರ್‌ ರೇಡ್‌ ಗೆ ಕಾರಣ? | ಸಿಕ್ಕಿದ್ದೇನು? ಫೋಟೋ ಸ್ಟೋರಿ

13

SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ  

- Advertisement -

ಇವತ್ತು ಬೆಳ್ಳಂಬೆಳಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಎಸ್‌ಪಿ ಮಿಥುನ್‌ ಕುಮಾರ್‌ ಆಂಡ್‌ ಟೀಂ ರೇಡ್‌ ಮಾಡಿತ್ತು. ಈ ಬಗ್ಗೆ ಮಲೆನಾಡು ಟುಡೆ ತಂಡ ಮೊದಲಿಗರಾಗಿ ಸುದ್ದಿ ಬ್ರೇಕ್‌ ಮಾಡಿತ್ತು. ಆ ಬಗ್ಗೆಗಿನ ಇನ್ನೊಂದಿಷ್ಟು ಅಪ್‌ಡೇಟ್ಸ್‌ ಇಲ್ಲಿದೆ. 

Malenadu Today

ಸೋಗಾನೆಯಲ್ಲಿ ಶಿವಮೊಗ್ಗ ಸೆಂಟ್ರಲ್‌ ಜೈಲಿನ ಮೇಲೆ ಶಿವಮೊಗ್ಗ ಪೊಲೀಸರು ರೇಡ್‌ ನಡೆಸಿದ್ದು, ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ರೇಡ್‌ ನಡೆದಿದೆ. 

Malenadu Today

ಅಲ್ಲದೆ ಮೂಲಗಳ ಪ್ರಕಾರ, ಬರೋಬ್ಬರಿ ಐದು ಗಂಟೆಗಳ ಕಾಲ ಪೊಲೀಸ್‌ ರೇಡ್‌ ನಡೆದಿದ್ದು, ಜೈಲಿನಲ್ಲಿ ಪ್ರತಿಯೊಂದು ವಿಭಾಗದಲ್ಲಿಯು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

Malenadu Today

ಇತ್ತೀಚೆಗಷ್ಟೆ ಶಿವಮೊಗ್ಗ ಜೈಲಿನಿಂದ ಡಿಚ್ಚಿ ಮುಬಾರಕ್‌ ಭದ್ರಾವತಿ ಎಂಎಲ್‌ಎ ಸಂಗಮೇಶ್‌ರವರ ಪುತ್ರನ ಹತ್ಯೆ ಬಗ್ಗೆ ಫೋನ್‌ ಕರೆ ಮಾಡಿ ಡೀಲ್‌ ನೀಡಿದ್ದ ಎನ್ನಲಾಗಿತ್ತು. ಆ ಸಂಬಂಧ ಎಫ್‌ಐಆರ್‌ ಆಗಿತ್ತು. 

Malenadu Today

ಇದೇ ವಿಚಾರಕ್ಕೆ ಇವತ್ತು ಎಸ್‌ಪಿ ನೇತೃತ್ವದಲ್ಲಿ ರೇಡ್‌ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ದರ್ಶನ್‌ ಗ್ಯಾಂಗ್‌ನ ಆರೋಪಿಗಳು ಶಿವಮೊಗ್ಗಕ್ಕೆ ಶಿಫ್ಟ್‌ ಆಗುತ್ತಿರುವ ಕಾರಣವೂ ರೇಡ್‌ಗೆ ಹೊಂದಿಸಲಾಗುತ್ತಿದೆ. 

Malenadu Today

ಪೊಲೀಸ್‌ ಪ್ರಕಟಣೆಯಲ್ಲಿ ಏನಿದೆ

ಇನ್ನೂ ಈ ಸಂಬಂಧ ಪೊಲೀಸ್‌ ಇಲಾಖೆಯು ಸಹ ಪ್ರಕಟಣೆ ನೀಡಿದ್ದು, ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,  ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ಈ ರೇಡ್‌ ನಡೆದಿದೆ ಎಂದು ತಿಳಿಸಿದೆ. 

ಅಲ್ಲದೆ ಈ ತಂಡದಲ್ಲಿ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಎ ಜಿ ಕಾರ್ಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ, ಕೃಷ್ಣ ಮೂರ್ತಿ, ಡಿವೈಎಸ್.ಪಿ,  ಡಿ.ಎ.ಆರ್, ಶಿವಮೊಗ್ಗ, ಮಂಜುನಾಥ್ ಪೊಲೀಸ್ ನಿರೀಕ್ಷಕರು, ತುಂಗಾ ನಗರ ಪೊಲೀಸ್ ಠಾಣೆ, ರವಿ ಪಾಟೀಲ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ, ದೀಪಕ್ ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ, ಸತ್ಯ ನಾರಾಯಣ, ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಪ್ರಶಾಂತ್ ಸಶಸ್ತ್ರ ಪೊಲೀಸ್ ನಿರೀಕ್ಷಕರು, ಡಿಎಆರ್ ಶಿವಮೊಗ್ಗ ಹಾಗೂ 2 ಪಿಎಸ್ಐ  ಮತ್ತು 100 ಪೊಲೀಸ್ ಸಿಬ್ಬಂಧಿಗಳ ತಂಡ ಭಾಗವಹಿಸಿತ್ತು ಎಂದು ತಿಳಿಸಿದೆ. 

Malenadu Today

ಉಳಿದಂತೆ ದಾಳಿ ವೇಳೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. 

ಇನ್ನಷ್ಟು ಸುದ್ದಿಗಳು

Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ

ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ |‌ ನಾಲ್ವರು ಅರೆಸ್ಟ್

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

Share This Article
1 Comment

Leave a Reply

Your email address will not be published. Required fields are marked *