Shivamogga | 30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ

Shivamogga jogfalls today video and news | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಜೋಗದ ಜಲಪಾತದಲ್ಲಿ ವರ್ಷಧಾರೆಯ ವೈಭವ ಮರುಕಳಿಸಿದೆ. ಲಿಂಗನಮಕ್ಕಿ ಜಲಾಶಯ ದಿಂದ 36 ಸಾವಿರ ಕ್ಯೂಸಕ್‌ ನೀರು ನದಿಗೆ ಬಿಡಲಾಗುತ್ತಿದೆ

Shivamogga |  30 ಸಾವಿರ ಕ್ಯೂಸೆಕ್‌ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಜೋಗ ಜಲಪಾತ, ಶರಾವತಿ, ಲಿಂಗನಮಕ್ಕಿ ಜಲಾಶಯ, ಚೈನಾಗೇಟ್‌ , ಸೀತಾಕಟ್ಟೆ ಸೇತುವೆ

SHIVAMOGGA | MALENADUTODAY NEWS | Aug 28, 2024 ಮಲೆನಾಡು ಟುಡೆ  

ಮಲೆನಾಡು ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲಿಯು ವಿಶೇಷವಾಗಿ ಶರಾವತಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಲಿಂಗನಮಕ್ಕಿ ಜಲಾಶಯಕ್ಕೆ ಭರಪೂರ ನೀರು ಹರಿದು ಬರುತ್ತಿದೆ. ನಿನ್ನೆದಿನ ಲಿಂಗನಮಕ್ಕಿ ಜಲಾಶಯದ ಗೇಟ್‌ಗಳನ್ನ ತೆರೆದು 20 ಸಾವಿರ ಕ್ಯೂಸೆಕ್‌ ನೀರು ನದಿಗೆ ಬಿಡಲಾಗಿತ್ತು. ಇವತ್ತು 32,980 ಕ್ಯುಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. 

ಲಿಂಗನಮಕ್ಕಿ ಜಲಾಶಯ

ಇದರಿಂದಾಗಿ ಜೋಗದ ಜಲಪಾತ ಮತ್ತೆ ನಯಾಗರ ಫಾಲ್ಸ್‌ ನಂತೆ ಕಾಣಲು ಆರಂಭಿಸಿದೆ. ಈ ವಿಕೇಂಡ್‌ಗೆ ಜಲಪಾತವನ್ನ ಕಣ್ತುಂಬಿಕೊಳ್ಳಲು ಜನರು ಮುಗಿಬೀಳುವ ಸಾಧ್ಯತೆ ಇದೆ. 



ಲಿಂಗನಮಕ್ಕಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿರುವ ಕಾರಣ ಜಲಾಶಯದಿಂದ 32,980 ಕ್ಯುಸೆಕ್ ನೀರನ್ನು 11 ರೇಡಿಯಲ್ ಗೇಟ್‌ಗಳ ಮೂಲಕ ನದಿ ಹರಿಸಲಾಗಿದೆ. 

ಜೋಗ ಜಲಪಾತ

ಚೈನಾಗೇಟ್‌ ಕೋಡಿ ಹರಿದು ಅಲೆಗಳು ಸೃಷ್ಟಿಯಾಗುತ್ತಿದ್ದರೇ , ಇತ್ತ ಸೀತಾಕಟ್ಟೆ ಸೇತುವೆ ಬಳಿಯಲ್ಲಿ ಶರಾವತಿ ಭಯ ಹುಟ್ಟಿಸುವಂತೆ ಹರಿಯುತ್ತಿದ್ದಾಳೆ.  

ಜೋಗದ ಜಲಪಾತದಲ್ಲಂತೂ ಅಬ್ಬರದ ಸದ್ದಿನ ಜೊತೆಗೆ ‍ಶ್ವೇತ ಸಾಗರದ ದೃಶ್ಯ ಕಾಣುತ್ತಿದೆ.  

 

ಇನ್ನಷ್ಟು ಸುದ್ದಿಗಳು