ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?

Shivamogga-Shiralakoppa toll gate | ಶಿವಮೊಗ್ಗದಲ್ಲಿ ಶಿವಮೊಗ್ಗ ಶಿರಾಳಕೊಪ್ಪ ನಡುವಿನ ಟೋಲ್‌ ಗೇಟ್‌ ಬಗ್ಗೆ ಮಾತನಾಡಿರುವ ಸಂಸದರು, ಈ ಟೋಲ್‌ ಗೇಟ್‌ ಅವೈಜ್ಞಾನಿಕ ಎಂದಿದ್ದಾರೆ

ಶಿವಮೊಗ್ಗ-ಶಿರಾಳಕೊಪ್ಪ ಟೋಲ್‌ ಗೇಟ್‌ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
ಶಿವಮೊಗ್ಗ ಶಿರಾಳಕೊಪ್ಪ ಟೋಲ್‌ ಗೇಟ್‌ , Shivamogga-Shiralakoppa toll gate

SHIVAMOGGA | MALENADUTODAY NEWS | Aug 27, 2024 ಮಲೆನಾಡು ಟುಡೆ  

ಶಿವಮೊಗ್ಗ ಶಿರಾಳಕೊಪ್ಪ ರಸ್ತೆಯಲ್ಲಿ ಹಾಕಿರುವ ಟೋಲ್‌ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಇದರ ನಡುವೆ ಟೋಲ್‌ ವಿಚಾರವಾಗಿ ಇವತ್ತು ಸಂಸದ ಬಿ ವೈ ರಾಘವೇಂದ್ರ ಮಾತನಾಡಿದ್ದಾರೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ಹೆದ್ದಾರಿಗೆ ಎರಡು ಟೋಲ್‌ ಗೇಟ್‌ ಅಳವಡಿಸಲಾಗಿದೆ. 

ಕನಿಷ್ಟ ಕಿಲೋಮೀಟರ್‌ಗೆ 60 ಒಂದು ಟೋಲ್ ಗೇಟ್ ಆಳವಡಿಸಬೇಕು. ಆದರೆ ಶಿವಮೊಗ್ಗ -ಶಿರಾಳಕೊಪ್ಪ ರಸ್ತೆಯಲ್ಲಿ 35 ಕಿಲೋಮೀಟರ್‌ಗೆ ಟೋಲ್‌ ಗೇಟ್ ಅಳವಡಿಸಲಾಗಿದೆ. ಹುಬ್ಬಳ್ಳಿ ಯಿಂದ ಶಿವಮೊಗ್ಗ ಬರುವವರಿಗೆ ಮಾತ್ರವಲ್ಲದೆ. ಸ್ಥಳೀಯರಿಗೆ ಇದರಿಂದ ತೊಂದರೆಯಾಗಿದೆ ಎಂದು ಆರೋಪಿಸಿದರು. 

ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವೈಜ್ಞಾನಿಕ ವಾಗಿ ಹಣ ಸುಲಿಗೆ ಮಾಡುತ್ತಿರುವ ಈ ಗೇಟ್ ಅನ್ನು ತಕ್ಷಣ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದಾರೆ 



ಇನ್ನಷ್ಟು ಸುದ್ದಿಗಳು