SHIVAMOGGA | MALENADUTODAY NEWS | Sep 5, 2024
Shimoga news | ಮಕ್ಕಳು ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುವ ಅಪಾಯ ಇರುತ್ತದೆ. ಹಾಗಾಗಿ ಮಕ್ಕಳ ಮೇಲೆ ಸದಾ ನಿಗಾ ಇಡುವುದು ಅತಿ ಅಗತ್ಯ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮಗುವೊಂದು ಜ್ಯೂಸ್ ಬಾಟಲಿ ಮುಚ್ಚುಳ ನುಂಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಶಿಕಾರಿಪುರ ತಾಲ್ಲೂಕು
Shivamogga ಜಿಲ್ಲೆ , ಶಿಕಾರಿಪುರ ತಾಲ್ಲೂಕು ಹರಗುವಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ಬುಧವಾರ ಇಲ್ಲಿನ ನಿವಾಸಿ ವೇದಮೂರ್ತಿ ಎಂಬವರ ಮಗು ನಂದೀಸ್ ಮನೆಯ ಬಾಗಿಲಲ್ಲಿ ಆಟವಾಡುತ್ತಿತ್ತು.
ಈ ವೇಳೆ ಜ್ಯೂಸ್ ಬಾಟಲಿಯೊಂದರ ಮುಚ್ಚುಳ ಕೈಗೆ ಸಿಕ್ಕಿದೆ. ಆಡುತ್ತಾ ಆಡುತಾ ಮಗು ಮುಚ್ಚುಳವನ್ನ ನುಂಗಿದೆ. ಆ ಬಳಿಕ ಮಗುವಿನ ಗಂಟಲಿಗೆ ಮುಚ್ಚುಳ ಸಿಕ್ಕಿ, ಅದಕ್ಕೆ ಉಸಿರಾಡಲು ಸಹ ಕಷ್ಟವಾಗಿದೆ. ಅಸ್ವಸ್ಥಗೊಂಡ ಮಗುವನ್ನ ತಕ್ಷಣವೇ ಆಸ್ಪತ್ರೆ ಕರೆದೊಯ್ಯಲು ಮನೆಯವರು ಮುಂದಾಗಿದ್ದಾರೆ. ಅಷ್ಟರಲ್ಲಿ ಮಗು ದಾರಿ ಮಧ್ಯೆ ಸಾವನ್ನಪ್ಪಿದೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ