ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
ಅಗ್ನಿವೀರ್ ಮೂರು ಪರೀಕ್ಷೆಯಲ್ಲಿ ಪಾಸಾದ್ರೂ..ದೈಹಿಕ ಪರೀಕ್ಷೆಯಲ್ಲಿ ಅದೊಂದು ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು. ಸೇನೆ ಪೊಲೀಸ್ ಸೇರುವ ಅಭ್ಯ.ರ್ಥಿಗಳು ಓದಲೇ ಬೇಕಾದ ಸ್ಟೋರಿ ಇದು.
ಅಗ್ನಿವೀರ್ ಮೂರು ಪರೀಕ್ಷೆಯಲ್ಲಿ ಪಾಸಾದ್ರೂ..ದೈಹಿಕ ಪರೀಕ್ಷೆಯಲ್ಲಿ ಅದೊಂದು ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು. ಸೇನೆ ಪೊಲೀಸ್ ಸೇರುವ ಅಭ್ಯ.ರ್ಥಿಗಳು ಓದಲೇ ಬೇಕಾದ ಸ್ಟೋರಿ ಇದು.
ಹೌದು ಇಂತಹ ಮನಕಲುಕುವ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು, ಶಿವಮೊಗ್ಗದಲ್ಲಿ ನೆಹರು ಮೈದಾನದಲ್ಲಿ ನಡೆಯುತ್ತಿರುವ ಅಗ್ನಿವೀರ್ ಆಯ್ಕೆಯ ಸನ್ನಿವೇಶದಲ್ಲಿ. ಆಗಸ್ಟ್ 22 ರಿಂದ 25 ರವರೆಗೆ ನಡೆದ ಅಗ್ನಿವೀರ್ ತಾಂತ್ರಿಕ ಕ್ಲರ್ಕ್ , ಟ್ರೇಡ್ ಮನ್,ಹುದ್ದೆಗಳಿಗೆ ಪರೀಕ್ಷೆಗಳು ನಡೆದಿತ್ತು. ಸ್ಪರ್ಧೆಯಲ್ಲಿ 1600 ಮೀಟರ್ ಓಟ, ಲಾಂಗ್ ಜಂಪ್, ಪುಷ್ ಅಪ್ ಮತ್ತು ಝಿಗ್ ಜ್ಯಾಗ್ ವಾಕಿಂಗ್ ಸ್ಪರ್ಧೆಗಳು ನಡೆದಿತ್ತು. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರೆಗೆ ಮೂರು ದಿನ ಫಿಸಿಕಲ್ ಟೆಸ್ಟ್ ಪರೀಕ್ಷೆ ನಡೆಸಲಾಗುತ್ತಿತ್ತು. ವಿಪರ್ಯಾಸವೆಂದರೆ ಮೂರು ಸ್ಪಾರ್ದಾ ಪರೀಕ್ಷೆಗಳಲ್ಲಿ ಪಾಸಾದ ನೂರಾರು ವಿದ್ಯಾರ್ಥಿಗಳು ಫಿಸಿಕಲ್ ಟೆಸ್ಟ್ ವಿಂದ ತಪ್ಪದಲ್ಲದ ತಪ್ಪಿಗೆ ಹೊರಬರಬೇಕಾಯಿತು.
ಕನಸು ನುಚ್ಚು ನೂರು ಮಾಡಿದ ಟ್ಯಾಟು ಹಚ್ಚೆ ಗುರುತುಗಳು
ಆಯ್ಕೆ ಯಿಂದ ದೂರ ಉಳಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕಣ್ಣೀರ ಕೊಡಿಯೇ ಹರಿಸಿದರು.. ಆ ಕ್ಷಣಕ್ಕೆ ಆಗಸವೇ ಕಳಚಿ ಬಿದ್ದಂತಾಯಿತು. ಕಣ್ಣ ಎದುರಿದ್ದ ಭವಿಷ್ಯ ನುಚ್ಚು ನೂರಾದಂತಾಯಿತು. ಹೌದು ಇದಕ್ಕೆ ಕಾರಣವಾಗಿದ್ದು, ಅವರ ಕೈ ಕುತ್ತಿಗೆ ಹಾಗು ಎದೆ ಭಾಗದಲ್ಲಿ ಹಾಕಿಸಿಕೊಂಡಿದ್ದ ಕೃತಕ ಟ್ಯಾಟು ಗುರುತುಗಳಾಗಿದ್ದವು.
ಯಾವ್ಯಾವ ಅಭ್ಯರ್ಥಿಗಳು ಟ್ಯಾಟು ಹಾಕಿಸಿಕೊಂಡಿದ್ದರೋ ಅವರೆಲ್ಲಾ ದೈಹಿಕ ಪರೀಕ್ಷ|ಯಲ್ಲಿ ಫೇಲಾದರು. ಮಿಲಿಟರಿ ಅಥವಾ ಪೊಲೀಸ್ ಇಲಾಖೆ ಸೇರಬೇಕಾದರೆ ಅಭ್ಯರ್ಥಿಗಳು ಟ್ಯೂಟು ಹಾಕಿಸಿಕೊಳ್ಳುವುದನ್ನು ಕೈಬಿಡಬೇಕು. ಅದರಲ್ಲೂ ಅಗ್ನಿವೀರ್ ಪರೀಕ್ಷೆಯಲ್ಲಿ ಟ್ಯಾಟು ಹಾಕಿಸಿಕೊಂಡ ಹಾಕಣಕ್ಕೆ ನೂರಾರು ಅಭ್ಯರ್ಥಿಗಳು ಭವಿಷ್ಯವನ್ನೇ ಕಳೆದುಕೊಳ್ಳಬೇಕಾಯಿತು. ಮುಂದಿನ ದಿನಗಳಲ್ಲಿ ಅಗ್ನಿವೀರ್ ಇಲ್ಲವೇ ಸೇನೆಯನ್ನು ಸೇರುವ ಕನಸು ಹೊತ್ತಿರುವ ಭವಿಷ್ಯದ ಅಭ್ಯರ್ಥಿಗಳು ತಮ್ಮ ದೇಹದ ಯಾವುದೇ ಭಾಗಕ್ಕೂ ಟ್ಯೂಟು ಹಾಕಿಸಿಕೊಳ್ಳಬಾರದು ಎಂಬುದಕ್ಕೆ ಇಂದಿನ ಪರೀಕ್ಷೆ ಸ್ಪಷ್ಟ ಸಂದೇಶ ನೀಡಿದೆ. ಅಗ್ನಿವೀರ್ ಕನಸು ಹೊತ್ತ ಭವಿಷ್ಯದ ಪ್ರತಿಭೆಗಳು ಟ್ಯಾಟು ಹಾಕಿಸಿಕೊಳ್ಳುವುದನ್ನು ಕೈ ಬಿಡಬೇಕಿದೆ. ಇಲ್ಲವಾದಲ್ಲಿ ಎಂತಹ ಪರೀಕ್ಷೆ ಪಾಸಾದ್ರೂ, ದೈಹಿಕ ಪರೀಕ್ಷೆಯಲ್ಲಿ ಟ್ಯಾಟು ಕಾರಣಕ್ಕೆ ಕೆಲಸವನ್ನೇ ಕಳೆದು ಕೊಳ್ಳಬೇಕಾಗುತ್ತದೆ. ಇದು ನಿಮ್ಮ ಕಾಳಜಿಯಿಂದ ಹಾಗು ಜಾಗೃತಿ ಮೂಡಿಸುವ ಸಲುವಾಗಿ ಹೇಳುತ್ತಿದ್ದೇವೆ. ಶೋಕಿಯ ಟ್ಯಾಟು ವಿನಿಂದ ಭವಿಷ್ಯದ ಬಾಗಿಲನ್ನು ಮಪಚ್ಚಿಸಿಕೊಳ್ಳುವ ಪ್ರಸಂಗ ಯಾವ ಯುವ ಪ್ರತಿಭೆಗೂ ಎದುರಾಗಬಾರದು ಎಂಬುದು ಮಲೆನಾಡು ಟುಡೆ ಕಾಳಜಿ ಅಷ್ಟೆ.