ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಕಾಲೇಜು ವಿದ್ಯಾರ್ಥಿಗಳಿಗೆ ಹಣದ ಆಮೀಷ ಒಡ್ಡಿ ಆನ್ ಲೈನ್ ಬೆಟ್ಟಿಂಗ್ ಗೇಮಿಂಗ್ ಗೆ ಸೆಳೆಯುತ್ತಿರುವ ಜಾಲ ಜಿಲ್ಲೆಯಲ್ಲಿ ಸಕ್ರೀಯವಾಗಿದೆ ಎಂಬುದರ ಬಗ್ಗೆ ಮಲೆನಾಡು ಟುಡೆ ಎರಡು ವರ್ಷಗಳ ಹಿಂದೆಯೇ ಬೆಳಕು ಚೆಲ್ಲಿತ್ತು. ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್ ಇನ್ ವೆಸ್ಟ್ ಮೆಂಟ್ ನಲ್ಲಿ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದು, ಹಣ ತೀರಿಸಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರ ಮುಂದುವರೆದ ಭಾಗವೆಂಬಂತೆ ಆನ್ ಲೈನ್ ಗೇಮ್ ಸಾಲದ ಸುಳಿಗೆ ಸಿಲುಕಿ ತೀರ್ಥಹಳ್ಳಿಯ ಯುವಕ ನಾಪತ್ತೆಯಾಗಿದ್ದಾನೆ. ಈ ದಂಧೆಯ ಉರುಳಿಗೆ ಸಿಲುಕಿ ಬಹಳಷ್ಟು ಯುವಕರು ಸಾಲ ಮಾಡಿಕೊಂಡು ಉರುಗಳನ್ನೇ ತೊರೆದಿದ್ದಾರೆ. ಆದರೆ ಈ ಘಟನೆಗಳು ಬೆಳಕಿಗೆ ಬಾರದಿರುವುದೇ ನೋವಿನ ಸಂಗತಿ. ತೀರ್ಥಹಳ್ಳಿಯಲ್ಲಿ .ಯುವಕನೋರ್ವ ವಾಟ್ಸಾಪ್ ಸ್ಟೇಟಸ್ ನಲ್ಲಿ ಪ್ರೀತಿ ನಿರಾಕರಣೆ ಡೆತ್ ನೋಟ್ ಬರೆದಿಟ್ಟು ತುಂಗಾ ನದಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ಎದುರಾಗಿದೆ.
ತೀರ್ಥಹಳ್ಳಿಯ ತುಡಕಿಯ ಜಯದೀಪ್ ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಯುವಕನಾಗಿದ್ದಾನೆ, ಮೇಲ್ನೋಟಕ್ಕೆ ಇದೊಂದು ಪ್ರೇಮ ವೈಫಲ್ಯ ಎಂದು ಡೆತ್ ನೋಟ್ ಹೇಳುತ್ತಾದರೂ, ಅದರ ಹಿಂದಿನ ಮರ್ಮವೇ ಬೇರೆಯಾಗಿದೆ. ಜಯದೀಪ್ ಆನ್ ಲೈನ್ ಇನ್ ವೆಸ್ಟ್ ಮಾಡಿ ಕೈಗಡ 90 ಸಾವಿರ ಸಾಲವನ್ನು ಮಾಡಿಕೊಂಡಿದ್ದ ಎಂದು ನಂಬಲರ್ಹ ಮೂಲಗಳು ಹೇಳುತ್ತಿವೆ. ಮದುವೆಯಾಗಲು ಯುವತಿ ನಿರಾಕರಿಸಿದ್ದು, ಸಾವಿನ ಮನೆ ಕದ ತಟ್ಟಲು ಸಣ್ಣ ನೆಪವಾಗಿದ್ದರೂ, ಜಯದೀಪ್ ನನ್ನು ತುಂಬಾ ಕಾಡುತ್ತಿದ್ದದ್ದು ಮಾತ್ರ ಸಾಲದ ಭಾದೆ ಎನ್ನಲಾಗುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ತುಂಗಾನದಿಯಲ್ಲಿ ಜಯದೀಪ್ ಗಾಗಿ ತೀರ್ವ ಶೋಧಕಾರ್ಯ ಮುಂದುವೆರಸಿದ್ದಾರೆ.
ವಾಟ್ಸಾಪ್ ಸ್ಪೇಟಸ್ ನ ಡೆತ್ ನೋಟ್ ನಲ್ಲಿ ಏನಿದೆ ?.
ನನ್ನ ಒಂದು ಸಣ್ಣ ತುಪ್ಪು ಇವತ್ತು ನನ್ನನ್ನು ಸಾವಿನ ಕಡೆ ತಳ್ಳುತ್ತಿದೆ. Money thading investment ಕಳೆದ ಮೂರು ದಿನದಲ್ಲಿ ಸಿಕ್ಬಿದ್ದೆ. ನನ್ನಂತ ತಿಳುವಳಿಕೆ ಇದ್ದವನು ಹೇಗೆ ಸಿಕ್ಬಿದ್ದೆ ಎಂದು ನಂಬೊಕೆ ಆಕ್ತಿಲ್ಲ. ಎಲ್ಲರ ಬಳಿ ಸಾಲಕ್ಕೆ ಬೇಡಿಕೆ ಇಟ್ಟೆ. ಸುಮಾರು ಜನರ ಬಳಿ ಫೋನ್ ಪೇ ಗೂಗಲ್ ಪೇ ನಿಂದ 90 ಸಾವಿರ ಹಾಕಿಸಿಕೊಂಡೆ, ಪಾಪ ಅವರು ನನ್ನ ಮೇಲೆ ನಂಬಿಕೆ ಇಟ್ಟು ಕಳುಹಿಸಿದ್ರು. ಆದರೆ ಅವರ ನಂಬಿಕೆ ಉಳಿಸಿಕೊಳ್ಳಲು ನನಗೆ ಆಗಲಿಲ್ಲ. ಅವರು ಯಾರು ಹಣಕ್ಕಾಗಿ ಒತ್ತಾಯ ಮಾಡ್ಲಿಲ್ಲ. ಆದರೆ ನನಗೆ ಒಂದು ರೀತಿಯ ಜೀಗುಪ್ಸೆ ಉಂಟಾಗುತ್ತಿದೆ. ಈ ಸಣ್ಣ ಅಮೌಂಟ್ ಗಳು ನನಗೆ ದೊಡ್ಡ ವಿಷಯವೇನು ಆಗಿರಲಿಲ್ಲ. ಆದರೆ ಎಲ್ಲರ ನಂಬಿಕೆ ಉಳಿಸಿಕೊಳ್ಳುವುದು ನನಗೆ ಈ ಸಂದರ್ಭದಲ್ಲಿ ಕಷ್ಟುವಾಯ್ತು. ನಾನು ಬದುಕಿದ್ದರೆ, ಇನ್ನು ಸ್ವಲ್ಪ ದಿನಗಳಲ್ಲಿ ಡಿಗ್ರಿ ಮುಗಿತಿತ್ತು. ನಾನು ಒಬ್ಬ ಒಳ್ಳೆಯ ವಿದ್ಯಾರ್ಥಿ, ಈ ಸಲ ರ್ಯಾಂಕ್ ಬರೋ ಛಾನ್ಸ್ ಕೂಡ ಇತ್ತ. ಆದರೆ ಅದು ಇನ್ನು ನೆನಪು ಮಾತ್ರ. ಅಪ್ಪ ಅಮ್ಮ ಸಂಜಯ್ ನನ್ನ ಕ್ಷ|ಮಿಸಿಬಿಡಿ, ನಿಮ್ಮ ಆಸೆ ನಂಬಿಕೆ ಎಲ್ಲಾ ಹಾಳು ಮಾಡುತ್ತಾ ಇದೀನಿ ಅಂತಾ ಬೇಜಾರು ಆಗ್ಬೇಡಿ, ನನ್ನ ಸಾಲ ನಿಮ್ಮ ಮೇಲೆ ಹಾಕಿ ಹೋಗ್ತಾ ಇದ್ದಿನಿ ಅಂತಾ ಸಿಟ್ಟು ಮಾಡ್ಕೊಬೇಡಿ. ನನ್ನ ಬೈಕ್ ಮಾರಿ ಸ್ವಲ್ಪ ಅಡ್ಜೆಟ್ ಮಾಡಿ, ಎಲ್ಲರಿಗೂ ಕೊಡಿ. ನನ್ನ ಜೀವ ನಾನೇ ಒಂದು ರೀತಿ ಉಪ್ಪಿಲ್ಲದ ಊಟದ ರೀತಿ ಸುಮಾರು ಮೂರು ವರ್ಷದಿಂದ ಆಗಿದೆ. ನನ್ನ ಜೀವನದಲ್ಲಿ ವಯಸ್ಸು 24 ಆದರೂ ಹುಡುಗಿ ಅಂತಾ ಇಲ್ಲ. ಸಣ್ಣ ಸಣ್ಣ ಹುಡುಗರಿಗೆಲ್ಲಾ ಲವರ್ ಇದ್ರೂ, ನನಗೆ ಇಲ್ಲಾ ಅನ್ನೋ ಬೇಜಾರು. ಒನ್ ಸೈಡ್ ಅಲ್ಲಿ ನಾನು ಒಬ್ಬಳನ್ನು ಲವ್ ಮಾಡಿದ್ದೆ, ಅವಳು ಒಪ್ಪಿಲ್ಲ. ಒಳ್ಳೆಯ ಕೆಲಸ ಹುಡುಕುವುದರಲ್ಲಿ ವಿಫಲವಾದೆ, ಇತ್ತಿಚ್ಚಿನ ದಿನಗಳಲ್ಲಿ ಬರೀ ಸಾಲ, ಮಾನಸೀಕ ಖಿನ್ನತೆ, ನನ್ನ ಎಲ್ಲಾದರೂ ದೂರ ಹೋಗುವಂತೆ ಪ್ರೆರೇಪಿಸಿತು. ಊರು ಬಿಡೋಣ ಅಂತಾ ಮಾಡಿದೆ. ಆದರೆ ಊರು ಬಿಡುವುದಕ್ಕಿಂತ ಸಾವೇ ನನ್ನ ಮುನ್ನುಗ್ಗಿ ಕರೆಯಿತು. ಎಲ್ಲರಿಗೂ Sorry please ಕ್ಷಮಿಸಿಬಿಡಿ, ನನ್ನ ಸಾವಿಗೆ ನನ್ನ ಕೆಟ್ಟ ನಿರ್ಧಾರಗಳೇ ಕಾರಣ. ಇಂತಿ ನಿಮ್ಮವ, ಜಯದೀಪ್ ಕಿಚ್ಚಾ ..,
ತೀರ್ಥಹಳ್ಳಿ ಭಾಗದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆನ್ ಲೈನ್ ಗೇಮ್, ಆನ್ ಲೈನ್ ಇನ್ ವೆವ್ಟ್ ಮೆಂಟ್ ನಲ್ಲಿ ಹಣ ತೊಡಗಿಸುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಕೇವಲ ಕಾಡು ಮೇಡುಗಳಲ್ಲಿ ಅಂಕ ಇಸ್ಪೀಟ್ ಆಡುವವರನ್ನೇ ಕೇಂದ್ರಿಕರಿಸುವ ಪೊಲೀಸ್ ವ್ಯವಸ್ಥೆ ಆನ್ ಲೈನ್ ಗೇಮ್ ಮತ್ತು ಇನ್ ವೆಸ್ಚ್ ಮೆಂಟ್ ಮಾಡುತ್ತಿರುವ ಯುವಜನತೆಯತ್ತ ಗಮನ ಹರಿಸಿ,ಜಾಗೃತಿ ಮೂಡಿಸಬೇಕಿದೆ. ಸಣ್ಣ ಹೂಡಿಕೆಯಿಂದ ಆರಂಭವಾಗುವ ಈ ದಂಧೆಗೆ ಹದಿಹರೆಯದ ಯುವಕರು ಅಕ್ಕಪಕ್ಕದ ಸ್ನೇಹಿತರಿಂದಲೇ ಸಾಲ ಮಾಡುತ್ತಿದ್ದಾರೆ. ಸಾಲ ಹೆಚ್ಚಾದಾಗ ಮನೆ ಬಿಟ್ಟು ಹೋಗುತ್ತಾರೆ. ಕೆಲವರು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಕಳೆದ ಆರು ವರ್ಷದ ಹಿಂದೆ ಯುವಪತ್ರಕರ್ತನೊಬ್ಬ ಆನ್ ಲೈನ್ ಕ್ರಿಕೇಟ್ ಬೆಟ್ಟಿಂಗ್ ನಿಂದ ಮಾಡಿಕೊಂಡ ಸಾಲಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನು ಹಸಿರಾಗಿಯೇ ಇದೆ. ಪರಿಸ್ಥಿತಿ ಹೀಗಿರುವಾಗ ಪೋಷ|ಕರು ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸುವುದು ಸೂಕ್ತ.