ನೈಜೀರಿಯಾದಿಂದ ಗಿಫ್ಟ್​ ಬಂತೆಂದು ನಂಬಿ ಆಯ್ತು ಎಡವಟ್ಟು, ನಿಮಗೂ ಹೀಗಾಗ್ಬೋದು ಹುಷಾರ್​

This Article Written by / Prathapa thirthahalli / ಡಿಸೆಂಬರ್ 27, 2025

Shikaripura Man Loses Rs 2.8 Lakh in Nigeria Gift Scam

ಶಿವಮೊಗ್ಗ : ಮನುಷ್ಯನ ಆಸೆಗೆ ಮಿತಿಯೇ ಇರೋದಿಲ್ಲ ಇದೇ ಕಾರಣಕ್ಕೆ ಭಗವಾನ್​ ಬುದ್ದ ಅತಿ ಆಸೆ ಗತಿ ಗೇಡು ಎಂದು ಸಹ ಹೇಳಿದ್ದಾರೆ. ಆದರೂ ನಾವು ಆಸೆ ಪಡೋದನ್ನ ಬಿಡೋದಿಲ್ಲ. ಇಲ್ಲಿಯೂ ಸಹ ಗಿಫ್ಟ್​ ಆಸೆಗಾಗಿ ವ್ಯಕ್ತಿಯೊಬ್ಬರು ಬರೋಬ್ಬರಿ 2,80,590 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

Shikaripura Man Loses Rs 2.8 Lakh in Nigeria Gift Scam
Shikaripura Man Loses Rs 2.8 Lakh in Nigeria Gift Scam

ಶಿವಮೊಗ್ಗದ ನಿರಂಜನಿ ರವೀಂದ್ರ ಅವರಿಗೆ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್

ಹೌದು ಸಾಮಾನ್ಯವಾಗಿ ನಮಗೆ ಪರಿಚಿತರೇ ಗಿಫ್ಟ್ ಕಳುಹಿಸುತ್ತಾರೆ ಎಂದರೆ ಅದು ಬರುವವರೆಗೂ ಕುತೂಹಲ ತಡೆಯಲು ಸಾಧ್ಯವಾಗುವುದಿಲ್ಲ. ಯಾವಾಗ ಬರುತ್ತೆ, ಅದರಲ್ಲಿ ಏನಿರಬಹುದು ಎಂಬ ಕಾತರ ಒಂದೆಡೆಯಾದರೆ, ಅದನ್ನು ಪಡೆಯಲು ನಾವು ಏನು ಬೇಕಾದರೂ ಮಾಡಲು ಸಿದ್ಧರಿರುತ್ತೇವೆ. ಇದೇ ದೌರ್ಬಲ್ಯವನ್ನು ವಂಚಕರು ಬಂಡವಾಳ ಮಾಡಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವ್ಯಕ್ತಿಯೊಬ್ಬರಿಗೆ ಕಳೆದ ಸೆಪ್ಟೆಂಬರ್ 26ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ದೂರುದಾರರ ತಂಗಿ ಈ ಕರೆಯನ್ನು ಸ್ವೀಕರಿಸಿದ್ದು, ವಂಚಕನು ತಾನು ‘ಮುಂಬೈ ಕಸ್ಟಮ್ಸ್ ಇಲಾಖೆಯ ಅಧಿಕಾರಿ’ ಎಂದು ಪರಿಚಯಿಸಿಕೊಂಡಿದ್ದಾನೆ.

ನಿಮಗೆ ನೈಜೀರಿಯಾದಿಂದ ಬೆಲೆಬಾಳುವ ಗಿಫ್ಟ್ ಬಂದಿದೆ. ಅದನ್ನು ಪಡೆಯಬೇಕಾದರೆ ನೀವು ಸರ್ವೀಸ್ ಚಾರ್ಜ್ ಹಾಗೂ ಟ್ಯಾಕ್ಸ್ ಪಾವತಿಸಬೇಕು ಎಂದು ವಂಚಕ ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಶಿಕಾರಿಪುರದ ವ್ಯಕ್ತಿ, ಮನೆಯವರೊಂದಿಗೆ ಚರ್ಚಿಸಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2 ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 2,80,590/- ರೂ. ಹಣವನ್ನು ವರ್ಗಾಯಿಸಿದ್ದಾರೆ. 

ಇಷ್ಟಕ್ಕೆ ನಿಲ್ಲದ ವಂಚಕರು, ಮತ್ತೆ ಕರೆ ಮಾಡಿ ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಇನ್ನೂ 2,95,499/- ರೂ. ಪಾವತಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಹಂತದಲ್ಲಿ ದೂರುದಾರರಿಗೆ ಅನುಮಾನ ಬಂದಿದ್ದು, ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಹಿಂದೆ ಶಿವಮೊಗ್ಗದ ಶ್ರೀರಾಮಪುರದ ಮಹಿಳೆಯೊಬ್ಬರಿಗೂ ಇದೇ ರೀತಿ ಗಿಫ್ಟ್ ಆಸೆ ತೋರಿಸಿ 2.35 ಲಕ್ಷ ರೂ. ವಂಚಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Shikaripura Man Loses Rs 2.8 Lakh in Nigeria Gift Scam

Shikaripura Man Loses Rs 2.8 Lakh in Nigeria Gift Scam
Shikaripura Man Loses Rs 2.8 Lakh in Nigeria Gift Scam

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Malenadu Today.,shikaripura news

ಮುಂದಿನ ಸುದ್ದಿ ಒದಿ