SHIVAMOGGA NEWS TODAY

ಸಂಕೇತ್ ಕೊಲೆ ಪ್ರಕರಣ: NIA ತನಿಖೆಗೆ ಕೆ.ಇ. ಕಾಂತೇಶ್ ಆಗ್ರಹ; ಸಮಾಧಿ ಧ್ವಂಸಕ್ಕೆ ಆಕ್ರೋಶ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ: ನಗರದ ಸಮೀಪದ ಊರಗಡೂರಿನಲ್ಲಿ ನಡೆದ ಬಾಲಕ ಸಂಕೇತ್ ಹತ್ಯೆ ಪ್ರಕರಣ ಹಾಗೂ ಆತನ ಸಮಾಧಿ ಧ್ವಂಸಗೊಳಿಸಿರುವ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಹಸ್ತಾಂತರಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯತ್​ ಸದಸ್ಯ ಕೆ ಇ  ಕಾಂತೇಶ್​ ಒತ್ತಾಯಿಸಿದ್ದಾರೆ.

ಶಿವಮೊಗ್ಗ ಏರ್​ಪೋರ್ಟ್ ಸಮಾಚಾರ! ತುಂಗಾ ಸ್ಟೇಷನ್​ನಲ್ಲಿ ಕೊಲೆಯತ್ನದ FIR!

ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕೇತ್‌ನ ಹತ್ಯೆಯಾದ ಬಳಿಕವೂ ಕೆಲವು ಸಮಾಜಘಾತುಕ ಶಕ್ತಿಗಳು ಆತನಿಗೆ ಶಾಂತಿ ಸಿಗದಂತೆ ವರ್ತಿಸುತ್ತಿವೆ. ಮೊನ್ನೆ ಕೆಲವು ದುಷ್ಕರ್ಮಿಗಳು ಆತನ ಸಮಾಧಿಯನ್ನು ಧ್ವಂಸಗೊಳಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಶಿವಮೊಗ್ಗದ ಪೊಲೀಸ್ ಅಧೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದಾಗಿ ಧ್ವಂಸಗೊಂಡಿದ್ದ ಸಮಾಧಿಯನ್ನು ರಾತ್ರೋರಾತ್ರಿ ಮರುನಿರ್ಮಾಣ ಮಾಡಲಾಗಿದೆ. ಆದರೆ, ಈ ವಿಚಾರವನ್ನು ಕೇವಲ ಸಮಾಧಿ ದುರಸ್ತಿಗೆ ಸೀಮಿತಗೊಳಿಸಬಾರದು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಮಾಧಿ ಸ್ಥಳದಲ್ಲಿ ತಕ್ಷಣವೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಈ ಪಿತೂರಿಯ ಹಿಂದೆ ಇರುವವರನ್ನು ಪತ್ತೆಹಚ್ಚಲು ಎನ್‌ಐಎ ತನಿಖೆ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ಸಂಕೇತ್ ಕುಟುಂಬದ ದಯನೀಯ ಸ್ಥಿತಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಕಾಂತೇಶ್, ಆ ಕುಟುಂಬದಲ್ಲಿ ಪ್ರಸ್ತುತ ಯಾರು ದುಡಿಯುವ ಶಕ್ತಿ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಮಾನವೀಯತೆಯ ದೃಷ್ಟಿಯಿಂದ ಸಂಕೇತ್ ತಾಯಿಗೆ ನಮ್ಮ ನಂದನಾ ಟ್ರಸ್ಟ್ ಕಾಲೇಜಿನಲ್ಲಿ ಉದ್ಯೋಗ ನೀಡಲು ನಿರ್ಧರಿಸಲಾಗಿದ್ದು, ಅವರಿಗೆ ಈಗಾಗಲೇ ಈ ಕುರಿತು ಭರವಸೆ ನೀಡಲಾಗಿದೆ ಎಂದು ತಿಳಿಸಿದರು.

Sanket Case Kantesh Demands NIA Probe in Shimoga

shivamogga car decor sun control house
shivamogga car decor sun control house
Sanket Case Kantesh Demands NIA Probe in Shimoga

Sanket Case Kantesh Demands NIA Probe in Shimoga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.