ಸಾಗರ : ಇಮ್ರಾನ್​ ಮತ್ತು ಇಮ್ತಿಯಾಜ್​ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್​ ತೀರ್ಪು

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025:  ಶಿವಮೊಗ್ಗ ಕೋರ್ಟ್​ ನಲ್ಲಿ ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಲಾಗಿದೆ. 

ಶಿವಮೊಗ್ಗ ಜಿಲ್ಲೆ ಸಾಗರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ  04-08-2021 ರಂದು ನಡೆದ ಪ್ರಕರಣ ಇದಾಗಿದೆ. ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಅಂದಿನ ಇನ್​ಸ್ಪೆಕ್ಟರ್ ಅಶೋಕ್ ಕುಮಾರ್  ನೇತೃತ್ವದ ತಂಡ ದಾಳಿ ನಡೆಸಿತ್ತು.

- Advertisement -

ಈ ವೇಳೆ  ಒಟ್ಟು 1 ಕೆ.ಜಿ 60 ಗ್ರಾಂ ಒಣ ಗಾಂಜಾ, ₹800 ರೂಪಾಯಿ ಕ್ಯಾಶ್​ ಹಾಗೂ  ಮಾರುತಿ ಓಮಿನಿ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಆರೋಪಿಗಳ ವಿರುದ್ಧ  ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ಪಿಎಸ್ಐ ಸಾಗರ್ ಕರ್ ಚಾರ್ಜ್​ ಶೀಟ್​ ಸಲ್ಲಿಸಿದ್ದರು. ಈ ಸಂಬಂಧ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ ದಲ್ಲಿ ವಿಚಾರಣೆ ನಡೆದಿತ್ತು. 

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸರ್ಕಾರಿ ವಕೀಲರು ಸುರೇಶ್ ಕುಮಾರ್ ಎ.ಎಂ ರವರು ವಾದ ಮಾಡಿದ್ದರು. ಇದೀಗ ವಿಚಾರಣೆ ಮುಗಿದು ನ್ಯಾಯಾಧೀಶರಾದ ಮಂಜುನಾಥ ನಾಯಕ್​ ರವರು ಪ್ರಕರಣ ತೀರ್ಪು ನೀಡಿದ್ದಾರೆ. ತಮ್ಮ ತೀರ್ಪಿನಲ್ಲಿ ಆರೋಪಿಗಳಾದ ಇಮ್ರಾನ್ ಖಾನ್ (25 ವರ್ಷ, ಸಾಗರ ಟೌನ್) ಮತ್ತು ಇಮ್ತಿಯಾಜ್ (28 ವರ್ಷ, ಸಾಗರ ಟೌನ್) ಇಬ್ಬರಿಗೂ ತಲಾ 3 ವರ್ಷಗಳ (3 Years Jail) ಕಠಿಣ ಕಾರಾವಾಸ ಶಿಕ್ಷೆ ಮತ್ತು ₹25,000 ದಂಡ ವಿಧಿಸಿ ಶಿಕ್ಷೆ ನೀಡಿದ್ದಾರೆ. 

Sagar Drug Traffickers Sentenced to 3 Years Jail by Shivamogga Court
Sagar Drug Traffickers Sentenced to 3 Years Jail by Shivamogga Court

Sagar Drug Traffickers Sentenced to 3 Years Jail by Shivamogga Court

Shivamogga Court Verdict,  Sagar Town Police Raid,  Find NDPS lawyer Shivamogga, Shivamogga Court Judgments, Sagar Police News Today, Malenadu Today News Crime, ಸಾಗರ ಗಾಂಜಾ ಪ್ರಕರಣ, ಶಿವಮೊಗ್ಗ ನ್ಯಾಯಾಲಯ ತೀರ್ಪು, ಎನ್.ಡಿ.ಪಿ.ಎಸ್ ಕಾಯ್ದೆ, 3 ವರ್ಷ ಜೈಲು, ಇಮ್ರಾನ್ ಖಾನ್, ಇಮ್ತಿಯಾಜ್, ಸಾಗರ ಟೌನ್ ಪೊಲೀಸ್, ಗಾಂಜಾ ಮಾರಾಟ ಶಿಕ್ಷೆ,  Sagar Ganja Case, Shivamogga Court Verdict, NDPS Act Sentence,  

 ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *