ಸಿಎಂ ಡಿಕೆ ಶಿವಕುಮಾರ್ ಜೊತೆ ಶಿವಮೊಗ್ಗ ನಿಯೋಗ ಸಮಾಲೋಚನೆ! ವಿವರ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Representation to CM for Establishment of High Court Circuit Bench

High Court Circuit Bench / ಮಲೆನಾಡು ಟುಡೆ ಶಿವಮೊಗ್ಗ / ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು, ಮಂಗಳೂರಿಗೆ ಪೀಠವನ್ನ ವರ್ಗಾಯಿಸಬಾರದು ಎಂಬ ವಿಚಾರದಲ್ಲಿ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ರವರು ಮೊನ್ನೆಯಷ್ಟೆ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಅವರಿಗೆ ಖುದ್ದು ಮನವಿ ಸಲ್ಲಿಸಿ ಶಿವಮೊಗ್ಗದಲ್ಲಿಯೇ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಒತ್ತಾಯಿಸಿದ್ದರು. ಇದೀಗ ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್​ರವರನ್ನ ಬಿ.ವೈ ರಾಘವೇಂದ್ರರವರ ನೇತೃತ್ವದ ನಿಯೋಗ ಭೇಟಿ ಮಾಡಿದೆ.

ಸಂಸದ ಬಿ.ವೈ.ರಾಘವೇಂದ್ರ, ನೇತೃತ್ವದ ನಿಯೋಗದಲ್ಲಿ ಶಾಸಕರಾದ ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಡಿ.ಎಸ್.ಅರುಣ್, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಬಸಪ್ಪ ಗೌಡ ಮತ್ತಿತರರು ಇದ್ದರು. ಇವರುಗಳು ನಿನ್ನೆ ದಿನ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರನ್ನು ಭೇಟಿಯಾಯಿತು. ನೂತನ ಸಿಎಂಗೆ ಶುಭಾಶಯಗಳನ್ನು ಕೋರಿದ ನಿಯೋಗದ ಸದಸ್ಯರು , ಅವರ ಮುಂದೆ ಹೈಕೋರ್ಟ್ ಸರ್ಕ್ಯೂಠ್ ಪೀಠದ ಅವಶ್ಯಕತೆಯನ್ನು ವಿವರಿಸಿದರು.

ಅಲ್ಲದೆ ಶಿವಮೊಗ್ಗದಲ್ಲಿ ಹೈಕೋರ್ಟ್​ ಪೀಠ ಸ್ಥಾಪನೆ ಆಗುವವರೆಗೆ ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಶಿವಮೊಗ್ಗ ಜಿಲ್ಲೆಯನ್ನು ಮುಂದುವರಿಸಬೇಕು

ಕರ್ನಾಟಕ ಹೈಕೋರ್ಟ್ ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಶಿವಮೊಗ್ಗದಲ್ಲಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು

ಮಲೆನಾಡು ಹಾಗೂ ಮಧ್ಯಕರ್ನಾಟಕ ಭಾಗದ ಜನರ ಅತ್ಯಂತ ನ್ಯಾಯಸಮ್ಮ-ತವಾದ ಈ ಬೇಡಿಕೆಯನ್ನು ಈಡೇರಿಸಿ ಕೊಡಬೇಕು ಎಂದಯು ಮನವಿ ಸಲ್ಲಿಸಿದ್ರು

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿ ಹಲವು ತಿಂಗಳುಗಳಿಂದ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಸಾಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ ಮತ್ತು ಭದ್ರಾವತಿ ವಕೀಲರ ಸಂಘಗಳು ಹಾಗೂ ಜಿಲ್ಲೆಯ ವಿವಿಧ ಸಾಮಾಜಿಕ, ನಾಗರಿಕ ಮತ್ತು ವೃತ್ತಿಪರ ಸಂಘಟನೆಗಳು ಒಗ್ಗೂಡಿ, ಶಾಂತಿಯುತ ಹೋರಾಟ ನಡೆಸುತ್ತಿವೆ. ಈ ಕುರಿತಾದ ನ್ಯಾಯಸಮ್ಮತವಾದ ಬೇಡಿಕೆಗಳ ಪರವಾಗಿ ನಾನು ಸಹ ಸಿಎಂರಿಗೆ ಒತ್ತಾಯ ಮಾಡಿದ್ದೇನೆ!

ಬಿ.ವೈ.ರಾಘವೇಂದ್ರ, ಸಂಸದ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor