ಇಂದು ಶುಭ ಯೋಗ, ಧನ ಲಾಭ, ರಿಯಲ್​ ಎಸ್ಟೇಟ್​ ನಲ್ಲಿದೆ ವಿಶೇಷ! 12 ರಾಶಿಗಳ ದಿನಭವಿಷ್ಯ

ajjimane ganesh

Real Estate Vehicle Gain :  ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 31, 2025:  ಇಂದು ಶುಭ ಯೋಗ, ಧನ ಲಾಭ: 12 ರಾಶಿಗಳ ದಿನಭವಿಷ್ಯ

ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸದ ಶುಕ್ಲ ದಶಮಿ ಇಂದು. ನಂತರ ಏಕಾದಶಿ ತಿಥಿ ಇದೆ. ಧನಿಷ್ಠ ನಕ್ಷತ್ರವು ಮಧ್ಯಾಹ್ನ 2.39 ರವರೆಗೆ ಇರಲಿದ್ದು, ನಂತರ ಶತಭಿಷ ನಕ್ಷತ್ರ ಆರಂಭವಾಗಲಿದೆ. ರಾಹುಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ ಇದ್ದರೆ, ಯಮಗಂಡವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ. 

- Advertisement -

ಎಷ್ಟಿದೆ ಕೃಷಿ ಮಾರುಕಟ್ಟೆಗಳಲ್ಲಿ ಅಡಿಕೆ ದರ!

ದಿನಭವಿಷ್ಯ

ಮೇಷ  : ಆದಾಯದ ಹೆಚ್ಚುವರಿ ಮೂಲಗಳು ಕಂಡುಬರಲಿವೆ. ಸಂತೋಷದ ಸಮಯ ಕಳೆಯಲಿದ್ದೀರಿ.ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸೂಕ್ತ ದಿನ. ವೃತ್ತಿಪರ ಕಾರ್ಯಗಳಲ್ಲಿ ಯಶಸ್ಸು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣುವಿರಿ.

ವೃಷಭ : ಉದ್ಯೋಗ ಅವಕಾಶ ದೊರೆಯುವ ಸಾಧ್ಯತೆಗಳು ಹೆಚ್ಚಿವೆ.ಕೈಗೊಳ್ಳುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಔತಣಕೂಟದಲ್ಲಿ ಭಾಗವಹಿಸುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ.  

COTPA ಕಾಯ್ದೆ ಉಲ್ಲಂಘನೆ : ಶಿವಮೊಗ್ಗದಲ್ಲಿ 50 ಕ್ಕೂ ಹೆಚ್ಚು ಪ್ರಕರಣ ದಾಖಲು : ಸಂಗ್ರಹವಾದ ದಂಡವೆಷ್ಟು ಗೊತ್ತಾ..?

ಮಿಥುನ: ಕೆಲಸ ನಿಧಾನಗತಿಯಲ್ಲಿ ಸಾಗಲಿವೆ. ಕೌಟುಂಬಿಕ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಧಾರ್ಮಿಕ ಚಿಂತನೆ ಹೆಚ್ಚಲಿದೆ. ಭೂಮಿಗೆ ಸಂಬಂಧಿಸಿದ ವಿವಾದ ತಲೆದೋರಬಹುದು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲವು ತೊಡಕು

ಕರ್ಕಾಟಕ  : ಆಸ್ತಿ ಸಂಬಂಧಿಸಿದ ವಿವಾದ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರೀಕ್ಷಿತ ಮಟ್ಟದಲ್ಲಿಲ್ಲದೇ ನಿರಾಸೆ ಮೂಡಿಸಬಹುದು. ಮಾನಸಿಕ ನೆಮ್ಮದಿ. ಕೆಲವು ಒಪ್ಪಂದ ರದ್ದುಪಡಿಸುವ ಸಾಧ್ಯತೆ ಇದೆ.

Real Estate Vehicle Gain
Real Estate Vehicle Gain

ಸಿಂಹ : ಸಾಮರ್ಥ್ಯ ಮತ್ತು ಸತ್ವವನ್ನು ಸಾಬೀತುಪಡಿಸಲು ಇಂದು ಉತ್ತಮ ಅವಕಾಶಗಳು ದೊರೆಯಲಿವೆ.. ಹೊಸ ಒಪ್ಪಂದ. ಆಸ್ತಿ ವಿವಾದದ ಸಮಸ್ಯೆಗಳು ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿಮ್ಮ ಗುರಿ ತಲುಪುವಿರಿ

ಕನ್ಯಾ :  ಕೈಗೆತ್ತಿಕೊಂಡ ಕೆಲಸದಲ್ಲಿ ಖಚಿತವಾದ ಯಶಸ್ಸು ಸಿಗಲಿದೆ. ಅನಿರೀಕ್ಷಿತವಾಗಿ ಧನಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪರಿಸ್ಥಿತಿ ಆಶಾದಾಯಕ. ವಾಹನ ಖರೀದಿಯ ಯೋಗವಿದೆ.

ತುಲಾ : ದೂರ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿಧಾನಗತಿಯಲ್ಲಿ ಸಾಗಲಿವೆ. ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯದಿರಬಹುದು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ಧನವ್ಯಯ ಆಗುವ ಸಾಧ್ಯತೆ ಇದೆ. 

ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್

ವೃಶ್ಚಿಕ : ಕೆಲಸ ಮುಂದೂಡಲ್ವಪಡುವುದು. ಜವಾಬ್ದಾರಿ ಜಾಸ್ತಿ. ಆದಾಯವು ನಿರೀಕ್ಷೆಗಿಂತ ಕಡಿಮೆ. ಆರೋಗ್ಯದ ಸಮಸ್ಯೆ. ಮನೆ ಮತ್ತು ಹೊರಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು. ವ್ಯಾಪಾರ ಮತ್ತು ಉದ್ಯೋಗದ ಪರಿಸ್ಥಿತಿ ಸಾಮಾನ್ಯವಾಗಿರಲಿದೆ.

Real Estate Vehicle Gain
Real Estate Vehicle Gain

ಧನು : ವ್ಯಾಪಾರ ಮತ್ತು ಉದ್ಯೋಗದದಲ್ಲಿ ಈ ದಿನ ಉತ್ಸಾಹದಿಂದ ಸಾಗಲಿವೆ. ಕೈಗೊಳ್ಳುವ ಕೆಲಸಗಳಲ್ಲಿ ಖಂಡಿತ ಯಶಸ್ಸು ಸಿಗಲಿದೆ. ಆಸ್ತಿ ವಿವಾದ. ಶುಭಕಾರ್ಯ ನಡೆಯಲಿದೆ.

ಮಕರ: ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಬಹುದು. ಸಂಬಂಧಿಕರನ್ನು ಭೇಟಿ ಮಾಡುವ ಅವಕಾಶವಿದೆ. ಕೆಲಸ ಕಾರ್ಯಗಳಲ್ಲಿ ಅಡಚಣೆ ಎದುರಾಗಬಹುದು. ದೇವಸ್ಥಾನಗಳಿಗೆ ಭೇಟಿ 

ಶಿವಮೊಗ್ಗ: ಗೋಂಧಿ ಚಟ್ನಳ್ಳಿ ಬಳಿ ಭೀಕರ ಅಪಘಾತ, ದಾವಣಗೆರೆ ಓರ್ವ , ಉತ್ತರ ಪ್ರದೇಶದ ಇಬ್ಬರ ದುರ್ಮರಣ

ಕುಂಭ : ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಆಕಸ್ಮಿಕವಾಗಿ ಪ್ರಯಾಣ ಕೈಗೊಳ್ಳಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಿಗೆ ಅನುಕೂಲಕರ ದಿನ.

ಮೀನ : ಕುಟುಂಬದೊಳಗೆ ಸಣ್ಣಪುಟ್ಟ ಗೊಂದಲ,  ದಿನವಿಡಿ ಕಿರಿಕಿರಿ. ಅನಿರೀಕ್ಷಿತ ಖರ್ಚು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಬದಲಾವಣೆ.ಅನಾರೋಗ್ಯದ ಲಕ್ಷಣ. ಸಹೋದರರೊಂದಿಗೆ ಕಲಹ. 

Real Estate Vehicle Gain
Real Estate Vehicle Gain

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Real Estate Vehicle Gain Full Panchang Details October 31 Horoscope, Panchang Oct 31, Real Estate Gain Yoga, Vehicle Purchase Yoga, #DailyHoroscope, #RashiBhavishya, #KanyaRashi, #MalenaduToday.
Share This Article
Leave a Comment

Leave a Reply

Your email address will not be published. Required fields are marked *