rapido driver hit woman : ಬೆಂಗಳೂರಿನ ಜಯನಗರದಲ್ಲಿ ರ್ಯಾಪಿಡೋ ಬೈಕ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಲಕ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಘಟನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
rapido driver hit woman : ಏನಿದು ಘಟನೆ
ಪೊಲೀಸರ ಮಾಹಿತಿಯಂತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಪ್ರಯಾಣಕ್ಕಾಗಿರ್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಚಾಲಕ ಬಂದು ಮಹಿಳೆಯನ್ನು ಪಿಕಪ್ ಮಾಡಿದ್ದಾನೆ. ಆಗ ಮಹಿಳೆ ವಾಹನವನ್ನು ಅತಿವೇಗವಾಗಿ ಚಲಾವಣೆ ಮಾಡುತ್ತಿದ್ದೀರಿ ನಿಲ್ಲಿಸಿ ಎಂದು ಚಾಲಕನಿಗೆ ಬೈಕನ್ನು ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಮಹಿಳೆ ಚಾಲಕನಿಗೆ ಪ್ರಯಾಣದ ದರವನ್ನು ಹಾಗೂ ಹೆಲ್ಮೆಟ್ನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಕೋಪಗೊಂಡ ಚಾಲಕ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ ರಬಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದಾರೆ.ಈ ಹಿನ್ನಲೆ ಚಾಲಕನ ಮೇಲೆ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
A #Rapido bike taxi driver in #Bengaluru allegedly slapped and assaulted a woman passenger after an argument over rash driving.
The incident, which occurred in #Jayanagar three days ago, was caught on camera and has since gone viral. pic.twitter.com/1x389U1sYg
— Hate Detector 🔍 (@HateDetectors) June 16, 2025