rahul gandhi birthday 19-06-25 : ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಹುಲ್​ ಗಾಂಧಿ ಹುಟ್ಟು ಹಬ್ಬ ಆಚರಣೆ

ಹಂಚಿಕೊಳ್ಳಿ
WhatsApp Facebook X Telegram
rahul gandhi birthday
rahul gandhi birthday

rahul gandhi birthday : ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ರಾಹುಲ್​ ಗಾಂಧಿ ಹುಟ್ಟು ಹಬ್ಬ ಆಚರಣೆ

ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ  ಸ್ತ್ರೀರೋಗ  ವಿಭಾಗದ ಗರ್ಭಿಣಿಯರ ವಾರ್ಡಿನಲ್ಲಿ ವಿವಿಧ ರೀತಿಯ  ಹಣ್ಣುಗಳನ್ನು  ವಿತರಿಸಲಾಯಿತು.

rahul gandhi birthday : ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಬ್ಲಾಕ್ ಅಧ್ಯಕ್ಷ  ಗಿರೀಶ್ ಅವರು ಮಾತನಾಡಿ, ರಾಹುಲ್ ಗಾಂಧಿಯವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪಾದಯಾತ್ರೆ ಮೂಲಕ ಭಾರತ್ ಜೋಡೋ  ಐತಿಹಾಸಿಕ ಕಾರ್ಯಕ್ರಮ ನೀಡಿ ಒಡೆದ ಮನಸ್ಸುಗಳ ಜೋಡಿಸುವ ಕೆಲಸ ಮಾಡಿದಂತಹ ಧೀಮಂತ  ನಾಯಕ ಎಂದರು.

ಹಾಗೆಯೇ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಮೇಲೆತ್ತುವ ಆಲೋಚನೆ ಹೊಂದಿರುವ ಬಡವರ ಬಂಧು ನಮ್ಮ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ನಮ್ಮ ದೇಶದ ಪ್ರಧಾನಿ ಆಗುವ ಎಲ್ಲಾ  ಗುಣಗಳು ಅವರಲ್ಲಿ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು ಗಳಾದ ಶಿವಕುಮಾರ್, ಕಲೀಂಪಾಶ, ಆಶ್ರಯ ಸಮಿತಿ ಸದಸ್ಯರಾದ ಯಮನಾರಂಗೇಗೌಡ, ಹಿಂದುಳಿದ ವರ್ಗದ ರಾಜ್ಯಪ್ರಧಾನ ಕಾರ್ಯದರ್ಶಿಯಾದ ಕಾಶಿ ವಿಶ್ವನಾಥ್, ಯುವ ಮುಖಂಡರುಗಳಾದ ಮಧುಸೂಧನ್, ಅಕ್ಬರ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್, NSUI ರಾಜ್ಯ ಕಾರ್ಯದರ್ಶಿ ಬಾಲಾಜಿ, ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಗಳಾದ ಗೌತಮ್, ಮಲಗೊಪ್ಪ ಶಿವು, ನಾಗೇಂದ್ರ ಹಾಗೂ ಯುವ ಕಾಂಗ್ರೆಸ್​ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor