ಭದ್ರಾವತಿ ಎಲೆಕ್ಷನ್​ಗೆ ಶಿವಮೊಗ್ಗದಲ್ಲಿ ಕರಪತ್ರ ಪ್ರಿಂಟಿಂಗ್/ ಜೆಡಿಎಸ್​ ಅಭ್ಯರ್ಥಿ ವಿರುದ್ಧ ದೊಡ್ಡಪೇಟೆಯಲ್ಲಿ ಕೇಸ್ ಕಾರಣವೇನು!?

ಹಂಚಿಕೊಳ್ಳಿ
WhatsApp Facebook X Telegram
ಭದ್ರಾವತಿ ಎಲೆಕ್ಷನ್​ಗೆ ಶಿವಮೊಗ್ಗದಲ್ಲಿ ಕರಪತ್ರ  ಪ್ರಿಂಟಿಂಗ್/  ಜೆಡಿಎಸ್​ ಅಭ್ಯರ್ಥಿ ವಿರುದ್ಧ ದೊಡ್ಡಪೇಟೆಯಲ್ಲಿ ಕೇಸ್ ಕಾರಣವೇನು!?

KARNATAKA NEWS/ ONLINE / Malenadu today/ SHIVAMOGGA / Apr 23, 2023


ಭದ್ರಾವತಿ/ ಶಿವಮೊಗ್ಗ  /  ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೇ ಕರಪತ್ರಗಳನ್ನು ಪ್ರಿಂಟ್ ಮಾಡುತ್ತಿದ್ದ ಪ್ರಿಂಟರ್ಸ್​ ಅಂಗಡಿ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ಧಾರೆ. 

ಕೆ.ಆರ್.ಪುರಂನ ಸ್ಟಾರ್ ಪ್ರಿಂಟರ್ಸ್ನ ಮೇಲೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ  ಭದ್ರಾವತಿ ಜೆಡಿಎಸ್​ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡರಿಗೆ ಅನುಮತಿ ಇಲ್ಲದೇ ಕರಪತ್ರಗಳನ್ನು ಪ್ರಿಂಟ್ ಮಾಡಿ ನೀಡಲಾಗುತ್ತಿದೆ ಎಂದ ಮಾಹಿತಿ ಲಭ್ಯವಾಗಿದ್ದು, ಘಟನೆ ಸಂಬಂಧ ಎಫ್​ಐಆರ್​ ಆಗಿದೆ. 

ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಪ್ರಿಂಟ್ ಮಾಡಲಾಗುತ್ತಿದ್ದ ಕರಪತ್ರ ದಲ್ಲಿ  ಜಾತ್ಯಾತೀತ ಜನತಾದಳದ ಚಿಹ್ನೆ  ತೆನೆಹೊತ್ತ ಮಹಿಳೆ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರ ಸ್ವಾಮಿ, ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ಭದ್ರಾವತಿ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡರ ಭಾವಚಿತ್ರಗಳಿರುವುದು  ಪೊಲೀಸರ ತಪಾಸಣೆ ವೇಳೆ ಕಂಡು ಬಂದಿದೆ. 

ಸದ್ಯ ಈ ಸಂಬಂಧ ಎಫ್​ಐಆರ್ ದಾಖಲಿಸಿರುವ ಪೊಲೀಸರು ಶಾರದಾ ಅಪ್ಪಾಜಿಗೌಡ ಹಾಗೂ ಪ್ರಿಂಟಿಂಗ್​ ಪ್ರೆಸ್ ನ ವಿರುದ್ಧ ಕೇಸ್ ಮಾಡಿದ್ಧಾರೆ.  

Malenadutoday.com Social media

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor