ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸು ನಾಮ ಸಂವತ್ಸರದ, ದಕ್ಷಿಣಾಯನ ಹೇಮಂತ ಋತು, ಮಾರ್ಗಶಿರ ಮಾಸದ ಈ ದಿನ ಅಮಾವಾಸ್ಯೆಯು ಬೆಳಗ್ಗೆ 6.27 ರವರೆಗೆ ಇರಲಿದ್ದು ಆನಂತರ ಪುಷ್ಯ ಶುದ್ಧ ಪಾಡ್ಯಮಿ ಆರಂಭವಾಗಲಿದೆ. ನಕ್ಷತ್ರದ ವಿಚಾರಕ್ಕೆ ಬಂದರೆ ಜ್ಯೇಷ್ಠ ನಕ್ಷತ್ರವು ರಾತ್ರಿ 10.56 ರವರೆಗೆ ಇರಲಿದ್ದು ನಂತರ ಮೂಲ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆಯು ಬೆಳಗ್ಗೆ 1.06 ರಿಂದ 2.54 ರವರೆಗೆ ಇರಲಿದೆ ರಾಹುಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದ್ದು ಯಮಗಂಡ ಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ : ಆರ್ಥಿಕವಾಗಿ ಸ್ವಲ್ಪ ಹಿನ್ನಡೆ. ಆದಾಯದ ಮೂಲ ಕುಸಿಯುವುದರಿಂದ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು ಮತ್ತು ಅನಿವಾರ್ಯವಾಗಿ ಸಾಲ ಮಾಡಬೇಕಾದ ಸಂದರ್ಭ ಎದುರಾಗಲಿದೆ. ಮಾನಸಿಕವಾಗಿ ಆಲೋಚನೆಗಳು ಸ್ಥಿರವಾಗಿಲ್ಲದ ಕಾರಣ ಸ್ನೇಹಿತರೊಂದಿಗೆ ಅನಗತ್ಯವಾಗಿ ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಉಂಟಾಗಬಹುದು. ಉದ್ಯೋಗದಲ್ಲಿ ಅಥವಾ ವ್ಯವಹಾರದಲ್ಲಿ ಸಾಮಾನ್ಯ ದಿನ

ವೃಷಭ: ಹೊಸಬರ ಪರಿಚಯ. ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇರುತ್ತೀರಿ.ಬಾಕಿ ಹಣ ಇಂದು ವಸೂಲಿಯಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರೋತ್ಸಾಹದಾಯಕ ವಾತಾವರಣ ಇರಲಿದ್ದು, ಕೈಗೆ ಹೊಸ ಕೆಲಸ ಸಿಗುವ ಸಾಧ್ಯತೆ ಇದೆ.
ಮಿಥುನ : ದಿನವು ಅತ್ಯಂತ ಯಶಸ್ವಿಯಾಗಿರಲಿದೆ ಕೆಲಸ ಹುಡುಕುತ್ತಿರುವವರಿಗೆ ಇಂದು ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಗುರಿಗಳನ್ನು ಅತ್ಯಂತ ಲೀಲಾಜಾಲವಾಗಿ ಸಾಧಿಸುತ್ತೀರಿ. ಪ್ರಮುಖ ಮಾತುಕತೆಗಳು ಇಂದು ಸಫಲವಾಗಲಿವೆ
ಕರ್ಕಾಟಕ: ಮಾನಸಿಕ ಒತ್ತಡದ ದಿನವಾಗಿದೆ. ಮನೆಯ ಸದಸ್ಯರೊಂದಿಗೆ ಅಥವಾ ಹಿತೈಷಿಗಳೊಂದಿಗೆ ವೈಮನಸ್ಸು, ಮಾತಿನ ಮೇಲೆ ನಿಗಾ ಇರಲಿ. ಆದಾಯಕ್ಕಿಂತ ಖರ್ಚು ಜಾಸ್ತಿ, ಓಡಾಟ ಜಾಸ್ತಿ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ.ವ್ಯವಹಾರ, ಉದ್ಯೋಗದಲ್ಲಿ ಈ ದಿನ ಸಾಮಾನ್ಯ.
ಸಿಂಹ : ಅನಿರೀಕ್ಷಿತ ಅಡೆತಡೆ. ಹಣದ ವ್ಯಯ. ಆಸ್ತಿ ವಿವಾದ ಒಂದು ಹಂತಕ್ಕೆ ಬಂದು ಇತ್ಯರ್ಥವಾಗುವ ಲಕ್ಷಣಗಳಿವೆ. ಶತ್ರುಗಳ ಕಾಟ ಸ್ವಲ್ಪ ಹೆಚ್ಚಾಗಲಿದ್ದು, ಉದ್ಯೋಗ ಹಾಗೂ ವ್ಯವಹಾರದಲ್ಲಿ ಕಿರಿಕಿರಿ ಉಂಟಾಗಬಹುದು.
ಕನ್ಯಾ : ಒಲಿದು ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ. ಕಠಿಣ ಪರಿಶ್ರಮಕ್ಕೆ ಇಂದು ಫಲ ಸಿಗಲಿದೆ. ಗಣ್ಯ ವ್ಯಕ್ತಿಗಳ ಭೇಟಿಯಿಂದ ಲಾಭವಾಗಲಿದೆ ಮತ್ತು ಹೊಸ ಗುತ್ತಿಗೆ ಪಡೆಯುವಿರಿ, ಸಹೋದರರಿಂದ ಶುಭ ಸುದ್ಧಿಯನ್ನು ನಿರೀಕ್ಷಿಸಬಹುದು. ವ್ಯಾಪಾರ, ಉದ್ಯೋದಲ್ಲಿ ಈ ದಿನ ವಿಶೇಷವಾಗಿದೆ.

ತುಲಾ : ಈ ದಿನ ಆಶಾದಾಯಕವಾಗಿಲ್ಲ. ವ್ಯವಹಾರದ ಜವಾಬ್ದಾರಿಗಳು ತ್ತಡಕ್ಕೆ ದೂಡಲಿವೆ ಮತ್ತು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಸಾಲದ ಬಾಧೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಚ್ಚರಿ ಸಂಗತಿ ಎದುರಾಗಲಿದೆ.
ವೃಶ್ಚಿಕ : ಅನಿರೀಕ್ಷಿತವಾಗಿ ದೂರದ ಸಂಬಂಧಿಕರಿಂದ ಮಾತುಕತೆ, ಆಸ್ತಿ ಅಥವಾ ಧನ ಲಾಭವಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ ಮತ್ತು ಆಪ್ತರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತೀರಿ. ವ್ಯಾಪಾರಿಗಳಿಗೆ ಲಾಭದ ಪ್ರಮಾಣ ಹೆಚ್ಚಿದ್ದರೆ ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ ಲಭಿಸುವ ಸಾಧ್ಯತೆ ಇದೆ.
Prediction for All Zodiac Signs
ಧನಸ್ಸು : ದಿನವು ಸ್ವಲ್ಪ ಮಂದಗತಿಯಲ್ಲಿ ಸಾಗಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆ ವಹಿಸಿ. ಶಾರೀರಿಕ ದಣಿವು ಹೆಚ್ಚಾಗಲಿದ್ದು ಅನಗತ್ಯ ವೆಚ್ಚಗಳ ಬಗ್ಗೆ ನಿಗಾ ಇರಲಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ಮಕರ : ಮದುವೆಯಂತಹ ಶುಭ ಕಾರ್ಯಗಳ ಬಗ್ಗೆ ಪ್ರಸ್ತಾಪವಾಗುವ ಸಂಭವವಿದೆ. ನ್ಯಾಯಾಲಯದ ಕೆಲಸಗಳಲ್ಲಿ ಅಥವಾ ಆಸ್ತಿ ವಿವಾದಗಳಲ್ಲಿ ಜಯ ಸಿಗಲಿದೆ. ಸ್ನೇಹಿತರೊಂದಿಗೆ ಔತಣಕೂಟಗಳಲ್ಲಿ ಭಾಗವಹಿಸುವಿರಿ ಮತ್ತು ಇಂದಿನ ಯತ್ನ ಕಾರ್ಯಗಳು ಸಿದ್ಧಿಸಲಿವೆ. ದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ವಾತಾವರಣ ಇರುವುದು.
ಕುಂಭ : ಎಲ್ಲಾ ಕಾರ್ಯಗಳಲ್ಲಿ ಜಯ ಲಭಿಸಲಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುವಂತಹ ಪ್ರಮುಖ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಲಿದ್ದೀರಿ. ಉದ್ಯೋಗದಲ್ಲಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಲಿದೆ.
ಮೀನ : ಇಂದು ಸ್ವಲ್ಪ ನಿರುತ್ಸಾಹದ ದಿನವಾಗಿದೆ. ಅಂದುಕೊಂಡ ಕೆಲಸಗಳು ಸಕಾಲಕ್ಕೆ ಮುಗಿಯದೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ ಮತ್ತು ಕಷ್ಟಪಟ್ಟರೂ ಪ್ರತಿಫಲ ತಡವಾಗಿ ಸಿಗುವ ಸಾಧ್ಯತೆ ಇದೆ. ಉಳಿದಂತೆ ಈ ದಿನ ಸಾಮಾನ್ಯವಾಗಿರಲಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ,






