1 ಕೆಜಿ ನಂದಿನಿ ಬಕೆಟ್ ಮೊಸರು ಮಾರುಕಟ್ಟೆಗೆ, ಫಸ್ಟ್​ ಟೈಂ ಆಫರ್​ 10 ರೂಪಾಯಿ ಡಿಸ್ಕೌಂಟ್!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಈಗೆಲ್ಲಾ ಬಕೆಟ್ ಐಟಮ್​ಗಳು ಹೆಚ್ಚು ಟ್ರೆಂಡ್ ಆಗಿವೆ. ಇದಕ್ಕೆ ಪೂರಕವಾಗಿ ನಂದಿನಿ ಕೂಡ ಬಕೆಟ್ ಮೊಸರು ಮಾರಾಟಕ್ಕೆ ಮುಂದಾಗಿದೆ. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (ಶಿಮುಲ್), ಇದೀಗ 1 ಕೆಜಿ ನಂದಿನಿ ಮೊಸರು ಬಕೆಟ್ ನ್ನ (Nandini 1 KG Curd Bucket) ಮಾರುಕಟ್ಟೆಗೆ ಪರಿಚಯಿಸುತ್ತಿದೆ.ಸದ್ಯ ಮಾರ್ಕೆಟ್​ನಲ್ಲಿ 200 ಗ್ರಾಂ, 500 ಗ್ರಾಂ, 5 ಕೆಜಿ ಹಾಗೂ 10 ಕೆಜಿ ಬಕೆಟ್‌ಗಳಲ್ಲಿ ನಂದಿನಿ ಮೊಸರು ಸಿಗುತ್ತಿತ್ತು. ಇದೀಗ ಮಾರ್ಚ್​ ಒಂದರಿಂದ 1 ಕೆಜಿ ಬಕೆಟ್ ಮೊಸರನ್ನು ಅಧಿಕೃತವಾಗಿ ಸಿಗಲಿದೆ.

Nandini 1 KG Curd Bucket Launched by Shimul with Rs 10 Discount Offerಶಿಮುಲ್ ಒಕ್ಕೂಟದಿಂದ 1 ಕೆಜಿ ನಂದಿನಿ ಮೊಸರು ಬಕೆಟ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, 95 ರೂ. ಎಂಆರ್‌ಪಿ ಮೇಲೆ 10 ರೂ. ರಿಯಾಯಿತಿ ಘೋಷಿಸಲಾಗಿದೆ
Nandini 1 KG Curd Bucket Launched by Shimul with Rs 10 Discount Offerಶಿಮುಲ್ ಒಕ್ಕೂಟದಿಂದ 1 ಕೆಜಿ ನಂದಿನಿ ಮೊಸರು ಬಕೆಟ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, 95 ರೂ. ಎಂಆರ್‌ಪಿ ಮೇಲೆ 10 ರೂ. ರಿಯಾಯಿತಿ ಘೋಷಿಸಲಾಗಿದೆ

ಭದ್ರಾವತಿ ಶಿವಮೊಗ್ಗ ಸಾಗರ, ಇವತ್ತಿನ ಕ್ರೈಂ ಸುದ್ದಿ!

1 ಕೆಜಿ ಬಕೆಟ್ ಮೊಸರು ಬೆಲೆ/Nandini 1 KG Curd Bucket price

ಪ್ರತಿ 1 ಕೆಜಿ ಬಕೆಟ್‌ನ ಎಂಆರ್‌ಪಿ 95 ರೂಪಾಯಿ ಇದೆ. ಫಸ್ಟ್ ಟೈಮ್​ ಆಫರ್​ ಆಗಿ ಪ್ರತಿ ಬಕೆಟ್ ಮೇಲೆ 10 ರೂಪಾಯಿಗಳ ಡಿಸ್ಕೌಂಟ್ ನೀಡಲಾಗುತ್ತಿದೆ. ಹಾಗಾಗಿ 85 ರೂಪಾಯಿಗಳಿಗೆ ಒಂದು ಕೆಜಿ ಬಕೆಟ್ ಮೊಸರು ಖರೀದಿಸ ಬಹುದಾಗಿದೆ. ಈ ಬಗ್ಗೆ ಮಾಹಿತಿ ಪ್ರಕಟಣೆ ನೀಡಿರುವ  ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ ಶೇಖರ್ ನಂದಿನಿ ಹಾಲು ಮತ್ತು ಉತ್ಪನ್ನಗಳನ್ನು ಬಳಸುವ ಮೂಲಕ ರೈತರ ಸಹಕಾರ ಸಂಸ್ಥೆಯ ಬೆಳವಣಿಗೆಗೆ ಬೆಂಬಲ ನೀಡಬೇಕು ಎಂದು ಕೋರಿದ್ದಾರೆ. 

ಶಿಮುಲ್​ ಪ್ರಕಟಣೆಯಲ್ಲಿ ಏನಿದೆ?

ಶಿಮುಲ್ ಒಕ್ಕೂಟ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪಕ ಕಾರ್ಯವ್ಯಾಪ್ತಿಯನ್ನು ಹೊಂದಿದೆ. 3 ಜಿಲ್ಲೆಗಳಿಂದ ಒಟ್ಟು 1353 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ 02 ಪಾಳಿಗಳಲ್ಲಿ ಸರಾಸರಿ ಒಟ್ಟು 7.60 ಲಕ್ಷ ಕೆಜಿ ಹಾಲನ್ನು ಸಂಗ್ರಹಣೆ ಮಾಡಲಾಗುತ್ತಿದೆ. ಸಂಗ್ರಹಿಸಿದ ಹಾಲನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸಂಸ್ಕರಿಸಿ ನಾನಾ ಬಗೆಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ 1865 ಹಾಲಿನ ಡೀಲರ್ ಗಳು, 195 ಫ್ರಾಂಚೈಸಿ ಪಾರ್ಲರ್ ಗಳು ಹಾಗೂ 52 ಸ್ವಂತ ಪಾರ್ಲರ್‌ಗಳ ಜಾಲದ ಮೂಲಕ ಪ್ರತಿನಿತ್ಯ ಬರೋಬ್ಬರಿ 2.76 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 66 ಸಾವಿರ ಕೆಜಿ ಮೊಸರನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ. ಕೇವಲ ಹಾಲು ಹಾಗೂ ಮೊಸರು ಮಾತ್ರವಲ್ಲದೆ, ಇದರೊಂದಿಗೆ 150 ಕ್ಕೂ ಹೆಚ್ಚು ವಿವಿಧ ಹಾಲಿನ ಉತ್ಪನ್ನಗಳನ್ನು ಹಾಗೂ ಜನಪ್ರಿಯ ನಂದಿನಿ ಐಸ್‌ಕ್ರೀಮ್ ಅನ್ನು ಸಹ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ 

ಎಸ್.ಜಿ ಶೇಖರ್, ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು

Nandini 1 KG Curd Bucket Launched by Shimul with Rs 10 Discount Offerಶಿಮುಲ್ ಒಕ್ಕೂಟದಿಂದ 1 ಕೆಜಿ ನಂದಿನಿ ಮೊಸರು ಬಕೆಟ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, 95 ರೂ. ಎಂಆರ್‌ಪಿ ಮೇಲೆ 10 ರೂ. ರಿಯಾಯಿತಿ ಘೋಷಿಸಲಾಗಿದೆ
Nandini 1 KG Curd Bucket Launched by Shimul with Rs 10 Discount Offerಶಿಮುಲ್ ಒಕ್ಕೂಟದಿಂದ 1 ಕೆಜಿ ನಂದಿನಿ ಮೊಸರು ಬಕೆಟ್ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, 95 ರೂ. ಎಂಆರ್‌ಪಿ ಮೇಲೆ 10 ರೂ. ರಿಯಾಯಿತಿ ಘೋಷಿಸಲಾಗಿದೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.