Malenadu Morning Bulletin ಹಸಿರುಮಕ್ಕಿ ಲಾಂಚ್? ಅರ್ಧ ಕೆಜಿ ಚಿನ್ನದ ರಿಯಲ್​ ಸಿನಿಮಾ!,ಮೇಗರವಳ್ಳಿ ಕಳ್ತನ ಕೇಸ್! ಅಡಿಕೆ ಮೂಟೆ ಕಣ್ಮರೆ ರಹಸ್ಯ! ಇವತ್ತಿನ ಮಾರ್ನಿಂಗ್ ಬುಲೆಟಿನ್

Malenadu Morning Bulletin: ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತಿನ ಮಾರ್ನಿಂಗ್​ ಸುದ್ದಿಯ ಪ್ರಮುಖಾಂಶ : ಮಳೆಯ ಕೊರತೆಯಿಂದಾಗಿ ಶರಾವತಿ ಹಿನ್ನೀರಿನ ಮಟ್ಟ ಕುಸಿದಿರುವುದರಿಂದ ಸ್ಥಗಿತಗೊಂಡಿರುವ ಹಸಿರುಮಕ್ಕಿ ಲಾಂಚ್. ಕಳ್ಳತನ ಹಾಗೂ ವಂಚನೆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಅಧಿಕಾರಿಗಳ ತಂಡ . ಆನಂದಪುರ ಸಮೀಪ ಭೀಕರ ರಸ್ತೆ ಅಪಘಾತ ಅಪಘಾತ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನಡೆದ ಪ್ರಮುಖ ಘಟನೆಗಳ ವಿವರ

Malenadu Morning Bulletin: ಹಸಿರುಮಕ್ಕಿ ಲಾಂಚ್ ಸ್ಥಗಿತ

ಹಿನ್ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮುಪ್ಪಾನೆ ಲಾಂಚ್​ ನಂತೆ , ಸಾಗರ ತಾಲೂಕಿನ ಹಸಿರುಮಕ್ಕಿ ಲಾಂಚ್ ಸೇವೆಯನ್ನು ಜೂನ್ 08 ರಿಂದ ಅಂದರೆ ನಿನ್ನೆಯಿಂದ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಸಾಗರ ಹಾಗೂ ಕೊಲ್ಲೂರು ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಈ ಮಾರ್ಗ ಹೊಸನಗರ ತಾಲೂಕಿನ ಅನೇಕ ಗ್ರಾಮಗಳಿಗೆ ತೆರಳಲು ಅನುಕೂಲಕರವಾಗಿತ್ತು. ಪ್ರಸ್ತುತ ಲಾಂಚ್ ಸೇವೆ ಇರದ ಕಾರಣ, ಸಾರ್ವಜನಿಕರು ಹೊಸನಗರ, ನಗರ ಹಾಗೂ ನಿಟ್ಟೂರು ಮಾರ್ಗವನ್ನು ಬಳಸಿಕೊಂಡು ತಮ್ಮ ದೈನಂದಿನ ಓಡಾಟವನ್ನು ಮುಂದುವರಿಸಬೇಕಾಗಿದೆ.

ನಿದಿ ಆಸೆ ದುಡ್ಡು ಕಳೆದಕೊಂಡ್ರು

ಸಾಗರ ತಾಲೂಕಿನ ಜೋಗಿನಗದ್ದೆ ಗ್ರಾಮದಲ್ಲಿ ನಿಧಿ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು 9.60 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೈಸೂರಿನ ಕೆ.ಆರ್. ಪುರ ನಿವಾಸಿ ಜೆ. ಜಗದೀಶ್ (41) ಎಂಬುವವರನ್ನು ಅಪರಿಚಿತರು , ಬಂಗಾರದ ನಾಣ್ಯಗಳನ್ನ ಮಾರುವುದಾಗಿ ನಂಬಿಸಿದ್ದರು. ಒಂದರೆಡು ಸ್ಯಾಂಪಲ್ ನಾಣ್ಯ ಕೊಟ್ಟು ಬಳಿಕ ಆನಂದಪುರದ ಸಮೀಪ ಜೋಗಿನಗದ್ದೆ ಬಳಿ ಪೂರ್ತಿ ಡೀಲ್​ಗೆ ಮಾತುಕತೆ ನಡೆಸಿದ್ದರು. 10 ಲಕ್ಷಕ್ಕೆ ಅರ್ಧ ಕೆಜಿ ಚಿನ್ನ ನೀಡುವ ಬಗ್ಗೆ ವ್ಯವಹಾರ ಆಗಿತ್ತು. ಅದರಂತೆ ಜೋಗಿನಗದ್ದೆಯಲ್ಲಿ ಮಾತುಕತೆ ನಡೆಸಿದ್ದಾಗ ಹೈಡ್ರಾಮಾ ನಡೆದಿದೆ, ಸ್ಥಳೀಯರಂತೆ ಬಂದ ಅಪರಿಚಿತರು ಮೈಸೂರಿನ ಮಂದಿಯನ್ನ ಬೆದರಿಸಿದ್ದಾರೆ. ಇದೇ ವೇಳೆ ಚಿನ್ನದ ನಾಣ್ಯದ ಡೀಲ್​ ಮಾಡಿದವರು, ಮೈಸೂರಿನ ಸಂತ್ರಸ್ತರ ಬಳಿಯಿದ್ದ ಮನಿ ಬ್ಯಾಗ್​ನ್ನ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಸದ್ಯ ಈ ಸಂಬಂಧ ಆನಂದಪುರ ಪೊಲೀಸರು ತನಿಖೆ ಮಾಡ್ತಿದ್ದಾರೆ.

 Malenadu Morning Bulletin: ಮೇಗರವಳ್ಳಿ ಕಳ್ತನ ಕೇಸ್

ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಅಣ್ಣುವಳ್ಳಿ ಗ್ರಾಮದ ಫಾರ್ಮ್ ಹೌಸ್ ಒಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಆಗುಂಬೆ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲೂಕು ಹೊಸಮನೆ ನಿವಾಸಿಗಳಾದ ಬಾಲರಾಜ್ (34) ಹಾಗೂ ಹರ್ಷ (34) ಎಂಬಿಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 1 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.

Malenadu Morning Bulletin : ಅಡಿಕೆ ಮೂಟೆ ಕಳ್ಳರ ಬಂಧನ

ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆಯ ಅಡಿಕೆ ವ್ಯಾಪಾರಿ ಅಶ್ರಫ್ ಎಂಬುವವರ ಮನೆಯಲ್ಲಿದ್ದ ಅಡಿಕೆ ಮೂಟೆಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಜೂನ್ 04 ರಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ವಿಜಯಪುರ ಮೂಲದ ಮೆಹಬೂಬ್ ಸಾಬ್ ಹಾಗೂ ಕಾಸಿಂ ಸಾಬ್ ಬೇಪಾರಿಎಂಬಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 4,50,000 ರೂಪಾಯಿ ಮೌಲ್ಯದ 9 ಕ್ವಿಂಟಾಲ್ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ 6,00,000 ರೂಪಾಯಿ ಮೌಲ್ಯದ ಅಶೋಕ್ ಲೇಲ್ಯಾಂಡ್ ವಾಹನ ಸೇರಿದಂತೆ ಒಟ್ಟು 10,50,000 ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ.

ಟ್ರ್ಯಾಕ್ಟರ್ ಕಾರು ಡಿಕ್ಕಿ

ರಾಷ್ಟ್ರೀಯ ಹೆದ್ದಾರಿ 69 ರ ಆನಂದಪುರ ಮತ್ತು ಸಾಗರ ಮಾರ್ಗದ ಜಂಬೆಕೊಪ್ಪದ ಸಮೀಪ ಜೂನ್ 08 ರ ಸೋಮವಾರದಂದು ಕಾರು ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರ್ಮಿಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಕಾರ್ಮಿಕರು ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಆನಂದಪುರ ಕಡೆಯಿಂದ ಸಾಗರದ ಕಡೆಗೆ ಪ್ರಯಾಣಿಸುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಘಟನೆಯ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Malenadu Morning Bulletin Whatsapp 

https://chat.whatsapp.com/JrsZ8He4nN600n0r3tJItz

Malenadu Morning Bulletin