ಭದ್ರಾವತಿ: ಅಡಿಕೆ ಮರ ಸಾಗಿಸುತ್ತಿದ್ದ ವೇಳೆ ಎತ್ತಿನ ಗಾಡಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವು

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಭದ್ರಾವತಿ: ಅಡಿಕೆ ಮರವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಎತ್ತಿನ ಗಾಡಿಯಿಂದ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭದ್ರಾವತಿಯಲ್ಲಿ ಜರುಗಿದೆ. ತಾಲ್ಲೂಕಿನ ಶರವಣ (53) ಎಂಬುವವರೇ ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡ ದುರ್ದೈವಿ.

ಭದ್ರಾವತಿ ಶಿವಮೊಗ್ಗ ಸಾಗರ, ಇವತ್ತಿನ ಕ್ರೈಂ ಸುದ್ದಿ!

ಮಾರ್ಚ್ 1ರ ಭಾನುವಾರದಂದು ಬೆಳಿಗ್ಗೆ ಶರವಣ ಅವರು ಸುಮಾರು 20 ಅಡಿ ಉದ್ದದ ಅಡಿಕೆ ಮರವನ್ನು ಕಡಿದು, ಅದನ್ನು ತಮ್ಮ ಎತ್ತಿನ ಗಾಡಿಯಲ್ಲಿ ಲೋಡ್ ಮಾಡಿಕೊಂಡು ಸಾಗಿಸುತ್ತಿದ್ದರು. ಗಾಡಿಯ ಮೇಲೆ ಕುಳಿತು ಬರುತ್ತಿದ್ದ ವೇಳೆ, ಜೇಡಿಕಟ್ಟೆಯ ವಿನಾಯಕ ಇಂಡಸ್ಟ್ರೀಸ್ ಸಮೀಪ ತಲುಪುತ್ತಿದ್ದಂತೆ ಹಠಾತ್ತನೆ ಆಯತಪ್ಪಿ ಗಾಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. 

ಘಟನೆ ಸಂಭವಿಸಿದ ತಕ್ಷಣ ಮೃತದೇಹವನ್ನು ಹೆಚ್ಚಿನ ತಪಾಸಣೆ ಹಾಗೂ ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣವೇನು ಎಂಬುದು  ತಿಳಿದುಬರಲಿದೆ. ಸದ್ಯ ಈ ಸಂಬಂಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Laborer Dies After Falling from Bullock Cart

Laborer Dies Shivamogga Court Bhadravati Court Unidentified Man Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Laborer Dies
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor