kobbari kaddi recipe ಕೊಬ್ಬರಿ ಕಡ್ಡಿ : ಸಂಜೆ ಮಕ್ಕಳ ಸ್ನ್ಯಾಕ್ಸ್ ಗೆ ಪೇಟೆಯಿಂದ ತರುವ ಕುರುಕಲು ತಿಂಡಿ ತಿನ್ನುವ ಬದಲು ಇದನ್ನು ಟ್ರೈ ಮಾಡಿ. ಮಲೆನಾಡು ಭಾಗದಲ್ಲಿ ತೆಂಗಿನಕಾಯಿ ಇಲ್ಲದೆ ಅಡುಗೆ ಇಲ್ಲ. ಅದೇ ತೆಂಗಿನಕಾಯಿ ಜಾಸ್ತಿ ಇದ್ರೆ ತೆಂಗಿನಕಾಯಿಯ. ಕಾಯಿ ಹೋಳಿಗೆ ಮಾಡೋದು ಎಲ್ಲರಿಗೂ ಗೊತ್ತು. ಇವತ್ತು ಸ್ವಲ್ಪ ಖಾರ ಖಾರ ಇರೋ ಕೊಬ್ಬರಿ ತಿನಿಸು ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
kobbari kaddi recipe ಕೊಬ್ಬರಿ ಕಡ್ಡಿ
ಬೇಕಾಗುವ ಸಾಮಗ್ರಿಗಳು
ಕಾಯಿ ತುರಿ -1 ಬಟ್ಟಲು

ಅಕ್ಕಿ ಹಿಟ್ಟು -1/2 ಬಟ್ಟಲು
ಕರಿಬೇವು -5-6ಎಸಳು
ಜೀರಿಗೆ, ಅಜವನ ಸ್ವಲ್ಪ
ಉಪ್ಪು , ಅರಿಶಿನ , ಖಾರದ ಪುಡಿ ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ
ಮಾಡುವ ವಿಧಾನ
ತೆಂಗಿನ ಕಾಯಿಯನ್ನು ತುರಿದು ಅಕ್ಕಿ ಹಿಟ್ಟಿನ ಜೊತೆ ಒಂದು ಬೌಲ್ಗೆ ಹಾಕಿಕೊಳ್ಳಿ
ಅದಕ್ಕೆ ಕರಿಬೇವು , ಅರಿಶಿನ , ಉಪ್ಪು, ಖಾರದಪುಡಿ, ಜೀರಿಗೆ ,ಅಜ್ವಾನ , ಕಸ್ತೂರಿ ಮೇತಿ ಪುಡಿ . ಸ್ವಲ್ಪ ಎಣ್ಣೆ ಹಾಕಿ ಹದವಾಗಿ ಕಲೆಸಿಕೊಳ್ಳಿ. ನೀರು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಕೊಬ್ಬರಿ ತುರಿಯಲ್ಲಿ ಸಾಕಷ್ಟು ನೀರಿನ ಅಂಶ ಇರುತ್ತದೆ. ಕಾಯಿ ಸ್ವಲ್ಪ ಒಣಗಿದ್ದರೆ ನೀರನ್ನು ಸೇರಿಸಿಕೊಂಡು ಹದವಾಗಿ ಕಲಸಿ .
ಒಂದು ಬಾಣಲಿಯಲ್ಲಿ ಎಣ್ಣೆ ಕಾಯಲು ಇಡಿ..
ಎಣ್ಣೆ ಕಾದಾಗ ಕಲಸಿಟ್ಟ ಹಿಟ್ಟನ್ನು ಕಡ್ಡಿಯ ಆಕಾರಕ್ಕೆ ಕೈಯಲ್ಲಿ ಉಜ್ಜಿ ಎಣ್ಣೆಗೆ ಬಿಟ್ಟು ಕೆಂಪಗೆ ಕರೆದರೆ
ಕೊಬ್ಬರಿ ಕಡ್ಡಿ ಸವಿಯಲು ಸಿದ್ಧ..
@ಅಡುಗೆ ಮಾಹಿತಿ ಒದಗಿಸಿದ ಓದುಗರು : ಗಾಯತ್ರಿ ಎಸ್ ಸ್ವಾಮಿ,