Kingcobra | ಕಾರಿನ ಬ್ಯಾನೆಟ್‌ನಲ್ಲಿ ಅಡಗಿದ್ದ ಕಾಳಿಂಗ ಸರ್ಪ | ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರದ ಟೀಂನ ರೋಚಕ ಕಾರ್ಯಾಚರಣೆ

13

SHIVAMOGGA | MALENADUTODAY NEWS | Aug 11, 2024  ಮಲೆನಾಡು ಟುಡೆ  

ಶಿವಮೊಗ್ಗ ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರದ Field Director ಅಜಯ್‌ ಗಿರಿ ಟೀಂ ಕಾರಿನ ಬ್ಯಾನೆಟ್‌ನಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವೊಂದನ್ನ ರಕ್ಷಣೆ ಮಾಡಿದ್ದಾರೆ. 

- Advertisement -

ಆಗುಂಬೆ ಮಳೆಕಾಡು ಅಧ್ಯಯನ ಕೇಂದ್ರ 

ಈ ಬಗ್ಗೆ ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ  ಬರೆದುಕೊಂಡಿದ್ದಾರೆ.  ಅಜಯ್‌ ಗಿರಿ Field Director at Agumbe Rainforest Research Station (ARRS) ರವರು ಬರೆದುಕೊಂಡಿರುವ ಮಾಹಿತಿಯ ವಿವರ ಹೀಘಿದೆ. 

ಇಲ್ಲಿನ ಪ್ರದೇಶವೊಂದರಲ್ಲಿ  12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತ್ತು. ಅದು ನಾಯಿಗಳಿಗೆ ಹೆದರಿ ಅಲ್ಲಿಯೇ ಇದ್ದ ಮನೆಯೊಂದರ ಕಾರ್‌ ಶೆಡ್‌ನಲ್ಲಿ ಆಶ್ರಯ ಪಡೆದಿತ್ತು. ಆ ಬಳಿಕ ಕೆಲವು ಹೊತ್ತಿನ ನಂತರ ಕಾಳಿಂಗ ಸರ್ಪ ಅಲ್ಲೆಲ್ಲೂ ಕಾಣಿಸಿಕೊಳ್ಳಲಿಲ್ಲ. 

ಕಾರಿನ ಬ್ಯಾನೆಟ್‌ನೊಳಗೆ ಸೇರಿದ್ದ ಕಾಳಿಂಗ ಸರ್ಪ (Kingcobra)

ಇದರಿಂದಾಗಿ ಮನೆಯ ಮಾಲೀಕರಿಗೆ ಸಣ್ಣದೊಂದು ಸಂಶಯ ಬಂದಿತ್ತು. ಕಾಳಿಂಗ ಸರ್ಪ, ಕಾರಿನೊಳಗೆ ಸೇರಿಕೊಂಡಿರಬಹುದೇ ಎಂಬುದು ಅವರ ಅನುಮಾನವಾಗಿತ್ತು. ಹೀಗಾಗಿ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಮೂಲಕ ಎಆರ್‌ಎಸ್‌ನ್ನ ಅವರು ಸಂಪರ್ಕಿಸಿದರು. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ವಿಷಯ ತಿಳಿದು ಎಆರ್‌ಎಸ್‌ಎಸ್‌ ಟೀಂ, ಇಂತಹ ಸನ್ನಿವೇಶದಲ್ಲಿ ಸ್ಥಳೀಯರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ವಿವರಿಸಿ ಸ್ಥಳಕ್ಕೆ ತೆರಳಿತ್ತು. ಅಲ್ಲಿ  ಕಾರಿನ ಬ್ಯಾನೆಟ್‌ಗೆ ಸಣ್ಣ ಹಗ್ಗ ಬಿಗಿದು, ಅದನ್ನ ಒಂದೇ ಬಾರಿಗೆ ತೆರೆಯುವಂತೆ ಮಾಡಿ, ಆ ಬಳಿಕ ಇನ್ನೊಂದು ಬದಿಯಲ್ಲಿ ಹಗ್ಗದ ಮೂಲಕ ಬ್ಯಾನೆಟ್‌ ಡೋರ್‌ ಲಾಕ್‌ ಮಾಡಲಾಯ್ತು. ಆ ಬಳಿಕ ಅಲ್ಲಿಯೇ ಇದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಟೀಂ ಸೆರೆ ಹಿಡಿಯಿತು. 

ಅರಣ್ಯ ಇಲಾಖೆ

ಈ ವೇಳ ತಟ್ಟಿಹಳ್ಳದಿಂದ ಬಂದಿದ್ದ ಅರಣ್ಯ ಸಿಬ್ಬಂದಿಯ ತಂಡ ಎಆರ್‌ಎಸ್‌ಎಸ್‌ ಟೀಂನ ಜೊತೆಗೆ ಕಾಳಿಂಗ ಸರ್ಪದ ರೆಸ್ಕ್ಯೂ ಕಾರ್ಯಾಚರಣೆ ಬಗ್ಗೆ ಪ್ರತ್ಯಕ್ಷವಾಗಿ ಮಾಹಿತಿ ಪಡೆಯಿತು. ಅಂತಿಮವಾಗಿ ಸುರಕ್ಷಿತ ಸ್ಥಳದಲ್ಲಿ ಕಾಳಿಂಗವನ್ನು ಬಿಡಲಾಯ್ತು. 

 



Share This Article
Leave a Comment

Leave a Reply

Your email address will not be published. Required fields are marked *