ಸಬ್​ ಟೀಕ್ ಹೇ! … ಬಿಎಸ್​​ವೈ ಮನೆಯ ಕಿಚನ್​ನಿಂದ ಅಮಿತ್​ ಶಾಗೆ ಬ್ರೇಕ್​ ಫಾಸ್ಟ್ / 20 ಸೆಕೆಂಡ್​ನಲ್ಲಿ ವಿಜಯೇಂದ್ರರಿಗೆ ಕೊಟ್ಟರು ಕ್ಲಿಯರೆನ್ಸ್​?

ರಾಜ್ಯ ವಿಧಾನಸಭಾ ಚುನಾವಣೆ ಈಗಾಗಲೇ ಸಾಕಷ್ಟು ಕಾವು ಪಡೆದುಕೊಳ್ತಿದೆ. ಅದಕ್ಕಿಂತಲೂ ಹೆಚ್ಚಾಗಿ ಬಿಜೆಪಿ ಹಾಗೂ ಬಿಎಸ್​ವೈ ನಡುವೆ ಪಕ್ಷ ಮತ್ತು ಚುನಾವಣಾ ವಿಚಾರ ಭಿನ್ನಸ್ವರದ ಹಾಡಾಗಿ ಕೇಳಿಬರುತ್ತಿತ್ತು. ಆದರೆ, ಇವತ್ತು ಕೇಂದ್ರ ಗೃಹಮಂತ್ರಿ ಅಮಿತ್ ಶಾ ರಾಜ್ಯ ನಾಯಕರ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದಾರೆ. 

ಇವತ್ತು ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ, ಬಿಎಸ್​ವೈರವರ ನಿವಾಸಕ್ಕೆ ಭೇಟಿಕೊಟ್ಟಿದ್ದು, ಅಲ್ಲಿಯೇ ಬೆಳಗ್ಗಿನ ಉಪಹಾರ ಸೇವಿಸಿದ್ದಾರೆ. ವಿಶೇಷ ಅಂದರೆ, ಈ ವೇಳೆ ಅಮಿತ್ ಶಾ ತೋರಿದ ರಾಜನೀತಿಯನ್ನು ರಾಜ್ಯ ಮಾಧ್ಯಮಗಳ ಕ್ಯಾಮರಾವನ್ನು ವಿಶೇಷವಾಗಿ ಸೆರೆಹಿಡಿದಿದೆ. 

Malenadu Today Shivamogga

ಇಸ್ಕೋ ದೇದೋ? …ಅವರ ಕೈಗೆ ಕೊಡಿ

ಉಪಹಾರಕ್ಕಾಗಿ ಆಗಮಿಸುತ್ತಿದ್ದ ಅಮಿತ್ ಶಾರನ್ನ ಸ್ವಾಗತಿಸಲು ಮಾಜಿ ಸಿಎಂ ಬಿಎಸ್​ ಕೆಂಪುಗುಲಾಬಿಗಳ ಹೂಗುಚ್ಚವನ್ನು ಹಿಡಿದು ನಿಂತಿದ್ದರು. ಆದರೆ ಅಮಿತ್​ ಶಾ ಕಾರಿನಿಂದ ಇಳಿಯುತ್ತಲೇ ಬಿಎಸ್​​ವೈರನ್ನ ನೋಡಿ ನಿಮ್ಮ ಕೈಯಲ್ಲಿರುವ ಹೂಗುಚ್ಚವನ್ನು ವಿಜಯೇಂದ್ರರವರಿಗೆ ನೀಡಿ ಎಂದರು, ಬಿಎಸ್​​ವೈರಿಗೆ ಮೊದಲು ಇದು ಅರ್ಥವಾಗಲಿಲ್ಲ. ಆನಂತರ ತಮ್ಮ ಮಗನ ಕಡೆಗೆ ನೋಡಿದರು, ವಿಜಯೇಂದ್ರವರು ಹೂಗುಚ್ಚ ನನಗೆ ಕೊಡಬೇಕಂತೆ ಎಂದರು, ತಕ್ಷಣವೇ ನಗುತ್ತಾ ಬಿಎಸ್ ಯಡಿಯೂರಪ್ಪನವರು ಹೂಗುಚ್ಚ ವನ್ನು ಬಿವೈ ವಿಜಯೇಂದ್ರರ ಕೈಗಿಟ್ಟರು. ವಿಜಯೇಂದ್ರರವರು, ಅದನ್ನ ಅಮಿತ್ ಶಾರಿಗೆ ನೀಡಿ ನಮಸ್ತೆ ಎನ್ನುತ್ತಲ್ಲೇ ಗೃಹಸಚಿವರು ವಿಜಯೇಂದ್ರ ಬೆನ್ನತಟ್ಟಿ, ಅವರ ಹೆಗಲಿಗೆ ಕೈ ಚಾಚಿ ಮಾಧ್ಯಮಗಳಿಗೆ ಪೋಸ್​ ಕೊಟ್ಟರು. 

Malenadu Today Shivamogga

bs yediyurappa/ ಒಳ್ಳೆಯ ಮಾತನಾಡ್ತಾ, ಅಪಪ್ರಚಾರ ಮಾಡ್ತಿರೋರಿಗೆ ಬಿಎಸ್​ವೈ ಕಿವಿಮಾತು/ ಹಿಂದೂ ಮುಸ್ಲಿಮ್​ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದ್ರು ಮಾಜಿ ಸಿಎಂ

Malenadu Today Shivamogga

ಕಿಚನ್ ಪಾಲಿಟಿಕ್ಸ್!?

ಇತ್ತೀಚೆಗೆ ಬಿಜೆಪಿ ಮುಖಂಡ ಸಿಟಿ ರವಿ, ಕಿಚನ್​ ಪಾಲಿಟಿಕ್ಸ್​ಗೆ ಅವಕಾಶ ಇಲ್ಲ ಎಂದಿದ್ದರು. ಸದ್ಯ ಇದೇ ಟೀಕೆಯನ್ನು ಬಿಎಸ್​ವೈ ಅಭಿಮಾನಿಗಳು ಇವತ್ತು ಬಿಎಸ್​​ವೈರ ಕಿಚನ್​ನಲ್ಲಿಯೆ ಅಮಿತ್ ಶಾ ಬ್ರೇಕ್​ ಫಾಸ್ಟ್ ನಡೆಯುತ್ತಿದೆ ಎಂದು ಸೋಶಿಯಲ್​ ಮೀಡಿಯಾ ಸಂದೇಶಗಳನ್ನು ಹರಿಬಿಟ್ಟಿದ್ದರು. ಇದರ ಬೆನ್ನಲ್ಲೆ ಅಮಿತ್ ಶಾ ಬಿಎಸ್​ವೈ ಹಾಗೂ ಬಿವೈಆರ್​ಗೆ ಬಹುಪರಾಕ್ ಹೇಳಿದ್ದಾರೆ. 

Malenadu Today Shivamogga

ಬಿಎಸ್​ವೈ ಮಾತೇ ಶಾಸನವಾಯ್ತಾ?

ರಾಜ್ಯ ವಿಧಾನಸಭಾ ಚುನಾವಣೆ ತಯಾರಿಯಲ್ಲಿ ಬಿಜೆಪಿಗೆ ಬಿಎಸ್​​ವೈ ಅನಿವಾರ್ಯವಾಗಿದ್ದಾರೆ. ಅದಕ್ಕಿಂತಲೂ ವಿಶೇಷ ಅಂದರೆ, ಬಿಎಸ್​ವೈ ಆಪ್ತರೇ ಕೈ ಹಿಡಿಯುವ ಒಲವು ತೋರುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಬಿಎಸ್​ವೈರಿಂದಷ್ಟೆ ಸಾಧ್ಯ. ಈ ರಿಪೋರ್ಟ್​ ಅಮಿತ್ ಶಾ ಮನಸ್ಸನ್ನ ತಲುಪಿದ್ದು, ಇವತ್ತಿನ ಬ್ರೇಕ್ ಫಾಸ್ಟ್ ಭೇಟಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ ಎನ್ನಲಾಗುತ್ತಿದೆ. 

Malenadu Today Shivamogga

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News   , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು, ಅಜ್ಜಿ ಮರ್ಡರ್​ ಕೇಸ್, ಅನೈತಿಕ ಸಂಬಂಧ ಆರೋಪ, ಮೈದುನನ ಹೆಂಡತಿಯಿಂದ ಕೊಲೆ, Shivamogga Crime News, Shivamogga Crime News, Shivamogga Crime Report, Shivamogga Police, Shivamogga SP, Shivamogga Rural Police Station, Shivamogga Kunsi Police, Grandmother Murder Case, Allegations of Adultery, Murder by Brother-in-Law’s Wife, BS YEDIYURAPPA, BS Yediyurappa’s advice, BSY’s negligence, Narendra Modi, Prime Minister Narendra Modi, Hindu, Muslim, caste, Veerashaiva, Hindu politics, Ayanur Manjunath, CM’s post, BSY’s criticism, BS YEDIYURAPPA , ಬಿಎಸ್​ ಯಡಿಯೂರಪ್ಪ ಸಲಹೆ, ಬಿಎಸ್​ವೈ ನಿರ್ಲಕ್ಷ್ಯ, ನರೇಂದ್ರ ಮೋದಿ, ಪ್ರಧಾನಿ ನರೇಂದ್ರ ಮೋದಿ, ಹಿಂದೂ, ಮುಸ್ಲಿಮ್​, ಜಾತಿ, ವೀರಶೈವ, ಹಿಂದೂ ಪಾಲಿಟಿಕ್ಸ್​, ಆಯನೂರು ಮಂಜುನಾಥ್, ಸಿಎಂ ಸ್ಥಾನ, ಬಿಎಸ್​ವೈ ಟೀಕೆ, 

Leave a Comment