ಕಾಲಿಗೆ ಪೆಟ್ಟುಮಾಡಿಕೊಂಡು 2 ದಿನಗಳಿಂದ ಒಂದೇ ಜಾಗದಲ್ಲಿ ನಿಂತು ನರಳುತ್ತಿರುವ ಕಾಡುಕೋಣ!

ಹಂಚಿಕೊಳ್ಳಿ
WhatsApp Facebook X Telegram
Injured Gaur Struggles for Two Days in Kalasa, Chikkamagaluru
Injured Gaur Struggles for Two Days in Kalasa, Chikkamagaluru

ಮಲೆನಾಡು ಟುಡೆ ಸುದ್ದಿ / ಕಳಸ / ಆಗಾಗ ಕಾಡುಪ್ರಾಣಿಗಳು ಪೆಟ್ಟುಮಾಡಿಕೊಂಡು ನಾಗರಿಕರ ಸಹಾಯ ಕೋರುವಂತೆ ಕಾಣಿಸಿಕೊಳ್ಳುವುದು ನಡೆಯುತ್ತಿರುತ್ತದೆ. ಸದ್ಯ ಅದೇ ರೀತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಲಕ್ಕಿ ಸಮೀಪದ ಕುಕ್ಕೋಡು ಎಸ್ಟೇಟ್‌ನಲ್ಲಿ ಕಾಡುಕೋಣವೊಂದು ಕಾಲಿಗೆ ಪೆಟ್ಟುಮಾಡಿಕೊಂಡು ನಿಂತಲ್ಲೆ ನಿಂತು ಬಿಟ್ಟಿದೆ. ಕಳೆದ 2 ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತು ನರಳುತ್ತಿರುವ ಕಾಟಿಗೆ ಚಿಕಿತ್ಸೆ ಕೊಡಿಸಿ ಅಂತಾ ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಇಲ್ಲಿನ ಕುಕ್ಕೋಡು ಎಸ್ಟೇಟ್‌ನಲ್ಲಿ ಕಾಣಿಸಿಕೊಂಡಿರುವ ಕಾಡುಕೋಣದ ಮುಂದಿನ ಬಲಗಾಲಿಗೆ ಗಂಭೀರ ಗಾಯವಾಗಿರುವ ಶಂಕೆ ವ್ಯಕ್ತವಾಗಿದೆ. ಕಾಲಿನ ನೋವಿನಿಂದಾಗಿ ಸರಿಯಾಗಿ ನಡೆಯಲು ಸಾಧ್ಯವಾಗದೆ ಒಂದೇ ಸ್ಥಳದಲ್ಲಿ ನಿಂತಿರುವ ವನ್ಯಜೀವಿ ಕಳೆದ 2 ದಿನಗಳಿಂದ ಸಂಕಷ್ಟ ಅನುಭವಿಸುತ್ತಿದೆ. ಪರಿಸ್ಥಿತಿಯನ್ನು ಅರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗಾಯಗೊಂಡಿರುವ ಶಂಕೆಯಿರುವ ಪ್ರಾಣಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಾಣಿಯ ಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor