Gun license / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಶಿವಮೊಗ್ಗ ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಗನ್ ಲೈಸೆನ್ಸ್ ನದ್ದೆ ದೊಡ್ಡ ತೆಲೆ ನೋವಿನ ಕೆಲಸ ಈ ಬಗ್ಗೆ ಇವತ್ತು ಸೆಷನ್ನಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ರು. ಗನ್ ಲೈಸೆನ್ಸ್ ತಗೊಳ್ಳೋದು ತುಂಬಾ ಕಷ್ಟವಾಗುತ್ತಿದೆ ಎಂದು ವಿವರಿಸಿದರು.
ಸಾಗರ : ಇಮ್ರಾನ್ ಮತ್ತು ಇಮ್ತಿಯಾಜ್ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್ ತೀರ್ಪು
ಮಲೆನಾಡು ಪ್ರದೇಶದಲ್ಲಿ ಈ ಹಿಂದೆಯೂ ಈ ಮಟ್ಟದ ಕಳ್ಳತನಗಳು ಇರಲಿಲ್ಲ ಮಲೆನಾಡಲ್ಲಿ ಕದ್ದ ಮೇಲೆ ಎಲ್ಲಿಗೆ ಹೋಗಬೇಕು ಎಂದು ಅವರಿಗೆ ದಾರಿ ತಿಳಿಯುವುದಿಲ್ಲ. ಜೊತೆಗೆ, ಈ ಹಿಂದೆ ಮಲೆನಾಡಿನ ಜನರಿಗೆ ವಿಶೇಷವಾಗಿ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದೂಕು ಪರವಾನಗಿಗಳನ್ನು (Gun License) ನೀಡಲಾಗುತ್ತಿತ್ತು. ಬ್ರಿಟಿಷರ ಕಾಲದಿಂದಲೂ ನಮ್ಮ ಭಾಗದಲ್ಲಿ ಬಂದೂಕುಗಳ ಬಳಕೆ ಇದೆ. ಬಂದೂಕು ಇದೆ ಎಂಬ ಭಯದಿಂದಲೇ ಕಳ್ಳರು ಮನೆಗಳ ಹತ್ತಿರ ಸುಳಿಯುತ್ತಿರಲಿಲ್ಲ. ಆದರೆ, ಪ್ರಸ್ತುತ ಪೊಲೀಸ್ ಇಲಾಖೆಯು ರೈತರಿಗೆ ಹೊಸ ಬಂದೂಕು ಪರವಾನಗಿ ನೀಡುವುದನ್ನು ಮತ್ತು ಹಳೆಯ ಪರವಾನಗಿ ನವೀಕರಣವನ್ನು ನಿರಾಕರಿಸುತ್ತಿದೆ. ನಾವು ಬಂದೂಕನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ, ಬಂದೂಕಲ್ಲಿ ಒಂದು ಹಕ್ಕೀನೂ ಹೊಡೆಯಲ್ಲ. ಅದು ನಮ್ಮ ಆತ್ಮರಕ್ಷಣೆಗೆ ಮಾತ್ರ. ದಯವಿಟ್ಟು ಪೊಲೀಸರಿಗೆ ಸೂಚನೆ ನೀಡಿ ನಮಗೆ ಬಂದೂಕು ಲೈಸೆನ್ಸ್ ಒದಗಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಬಂದೂಕು ಪರವಾನಗಿ (Gun License) ಗನ್ ಲೈಸೆನ್ಸ್ ನೀಡುವ ಪ್ರಕ್ರಿಯೆ ಒಂದು ನಿರಂತರ ಮತ್ತು ನಿಯಮಬದ್ಧ ಪ್ರಕ್ರಿಯೆ. ಅರ್ಜಿದಾರರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಜಿಲ್ಲಾಧಿಕಾರಿಗಳು, ಅರ್ಜಿದಾರರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಪರಿಶೀಲಿಸಿ, ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ಪಡೆದ ನಂತರವೇ ಪರವಾನಗಿ ನೀಡುತ್ತಾರೆ. ಕೆಲವೊಮ್ಮೆ, ಜಮೀನು ಒಂದು ಕಡೆ ಇದ್ದು, ಅರ್ಜಿದಾರರು ಬೇರೆ ಊರಿನಲ್ಲಿ ವಾಸವಿದ್ದರೆ, ಅಲ್ಲಿ ಬಂದೂಕು ಇಟ್ಟುಕೊಳ್ಳುವ ಅಗತ್ಯವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಅರ್ಜಿದಾರರು ಸಮಂಜಸವಾದ ವಿವರಣೆ ನೀಡಬೇಕು. ಅರ್ಜಿದಾರರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲದಿದ್ದರೆ ಅಥವಾ ಬಂದೂಕು ಬಳಸುವ ಸಾಮರ್ಥ್ಯ ಹೊಂದಿದ್ದರೆ ಮಾತ್ರ ಪರವಾನಗಿ ನೀಡಲಾಗುತ್ತದೆ. ನಾವು ಪೊಲೀಸರಿಗೆ ಯಾರಿಗೂ ಲೈಸೆನ್ಸ್ ಕೊಡಬೇಡಿ ಎಂದು ಹೇಳಿಲ್ಲ ಎಂದು ಗೃಹ ಸಚಿವರು ಸದನದಲ್ಲಿ ಸ್ಪಷ್ಟಪಡಿಸಿದರು.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.