glenn Maxwell : Odi ಕ್ರಿಕೆಟ್ಗೆ ನಿವೃತ್ತಿ ಘೊಷಿಸಿದ ಗ್ಲೆನ್ ಮ್ಯಾಕ್ಸ್ವೆಲ್
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮಾಕ್ಸ್ವೆಲ್ ಏಕದಿನ ಕ್ರಿಕೆಟ್ ಪಂದ್ಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮ್ಯಾಕ್ಸ್ವೆಲ್ ಕೊನೆಯ ಬಾರಿಗೆ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದರು.ಒಡಿಐನಲ್ಲಿ ಇದುವರೆಗೂ 14 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್ವೆಲ್ 33.81 ಸರಾಸರಿಯಲ್ಲಿ ನಾಲ್ಕು ಶತಕಗಳು ಮತ್ತು 23 ಅರ್ಧಶತಕಗಳೊಂದಿಗೆ 3990 ರನ್ಗಳನ್ನು ಗಳಿಸಿದ್ದಾರೆ. 36 ವರ್ಷದ ಆಟಗಾರ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್, ಬಿಗ್ ಬ್ಯಾಷ್ ಲೀಗ್ಗಾಗಿ ಸಿದ್ದತೆ ನಡೆಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

glenn Maxwell : 2015 ಮತ್ತು 2023 ರ ವಿಶ್ವಕಪ್ ಗೆಲುವಿನಲ್ಲಿ ಮ್ಯಾಕ್ಸ್ವೆಲ್ ಪ್ರಮುಖ ಪಾತ್ರ ವಹಿಸಿದ್ದರು. ಕಾಲು ನೋವಿನ ನಡುವೆಯೂ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2023 ರ ಏಕದಿನ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಅವರು ಸಿಡಿಸಿದ ಅದ್ಭುತ ದ್ವಿಶತಕ ಮ್ಯಾಕ್ಸ್ವೆಲ್ರನ್ನು ಎಲ್ಲರೂ ನದಾ ನೆನಪಿನಲ್ಲಿಡುವಂತೆ ಮಾಡಿತು. ತಮ್ಮ ನಿರ್ಧಾರದ ಬಗ್ಗೆ ಮಾತನಾಡಿದ ಮ್ಯಾಕ್ಸ್ವೆಲ್, ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್ ಬೈಲಿ ಅವರೊಂದಿಗೆ ಮಾತನಾಡಿದ್ದೇನೆ. ಆಗ 2027 ರ ಏಕದಿನ ವಿಶ್ವಕಪ್ ನಾವು ಚರ್ಚಿಸಿದ್ದೆವು. ಅವರು ನನ್ನನ್ನು 2027ರವರೆಗೆ ತಂಡದಲ್ಲಿ ಮುಂದುವರೆಸುತ್ತಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದ್ದರಿಂದ ಬೇರೆ ಆಟಗಾರರನ್ನು ಆಯ್ಕೆಮಾಡಲು ಇದು ಸೂಕ್ತ ಸಮಯ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
