ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್.ಎನ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ: ಸಿಇಎನ್ ಠಾಣೆಯಲ್ಲಿ ಪ್ರಕರಣ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್.ಎನ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು Fake WhatsApp Account Created in the Name of Shivamogga ZP CEO Hemant.N
ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್.ಎನ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು Fake WhatsApp Account Created in the Name of Shivamogga ZP CEO Hemant.N

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹೇಮಂತ್.ಎನ್‌ ಐಎಎಸ್‌ ಅವರ ಫೋಟೋ ಹಾಗೂ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವಾಟ್ಸಾಪ್ ಅಕೌಂಟ್​ ಕ್ರಿಯೆಟ್ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ರೀತಿ ಅಕೌಂಟ್​ ಕ್ರಿಯೆಟ್ ಮಾಡಿ ಜನರಿಗೆ ವಂಚಿಸುವ ಉದ್ದೇಶ, ಕೃತ್ಯದ ಹಿಂದಿತ್ತು ಎನ್ನಲಾಗಿದೆ. ಇನ್ನೂ ಕುರಿತಾಗಿ ಸ್ವತಃ ಸಿಇಒ ಹೇಮಂತ್.ಎನ್ ಅವರು ಶಿವಮೊಗ್ಗ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ನಕಲಿ ವಾಟ್ಸಾಪ್ ಖಾತೆ: ಸಿಇಎನ್ ಠಾಣೆಯಲ್ಲಿ ಪ್ರಕರಣ

ಕೋಡ್ ಹೊಂದಿರುವ ಅಪರಿಚಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಈ ನಕಲಿ whatsapp ಖಾತೆಯನ್ನು ತೆರೆಯಲಾಗಿದೆ. ಮೇಲಾಗಿ ವಾಟ್ಸಾಪ್​ ಡಿಪಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರ ಭಾವಚಿತ್ರವನ್ನು ಅಳವಡಿಸಿದ್ದಾರೆ. ತದನಂತರ ಇದೇ ನಕಲಿ ಖಾತೆಯನ್ನು ಬಳಸಿಕೊಂಡು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ಹೀಗಾಗಿ ಇದು ವಂಚನೆಯ ಜಾಲ ಎಂದು ಗೊತ್ತಾಗಿ ತಕ್ಷಣವೇ ಸಿಇಒ ಸೈಬರ್​ ಠಾಣೆಗೆ ಕಂಪ್ಲೆಂಟ್ ಮಾಡಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

ತಮ್ಮ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿರುವ ಹಾಗೂ ತಮ್ಮ ಅಧಿಕೃತ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಪರಿಚಿತ ವಂಚಕರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಮಂತ್.ಎನ್‌ ದೂರಿನಲ್ಲಿ ಮನವಿ ಮಾಡಿದ್ದಾರೆ. ಹಿರಿಯ ಅಧಿಕಾರಿ ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಸಿಇಎನ್ ಠಾಣೆಯ ಪೊಲೀಸರು, ನಕಲಿ ಖಾತೆ ಸೃಷ್ಟಿಸಿದ ಸೈಬರ್ ವಂಚಕರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್.ಎನ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು Fake WhatsApp Account Created in the Name of Shivamogga ZP CEO Hemant.N
ಶಿವಮೊಗ್ಗ ಜಿ.ಪಂ ಸಿಇಒ ಹೇಮಂತ್.ಎನ್ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ: ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು Fake WhatsApp Account Created in the Name of Shivamogga ZP CEO Hemant.N
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor