KARNATAKA NEWS/ ONLINE / Malenadu today/ Jul 21, 2023 SHIVAMOGGA NEWS
ಶಿವಮೊಗ್ಗದಲ್ಲಿ ನಡೆದ ಸ್ಪಾ ರೇಡ್ಗಳನ್ನ ತಾನೆ ಮಾಡಿಸ್ತಿರುವುದಾಗಿ ಹೇಳಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದ ಪತ್ರಕರ್ತನ ವಿರುದ್ಧ ವಿನೋಬನಗರ ನಿವಾಸಿ ಶಿವಮೊಗ್ಗ ಜಯನಗರ ಪೊಲೀಸ್ ಸ್ಟೇಷನ್ನಲ್ಲಿ ದೂರು ಕೊಟ್ಟಿದ್ದರು. ಈ ಸಂಬಂಧ ಐಪಿಸ 384, 506 ಅಡಿಯಲ್ಲಿ ಕೇಸ್ ಕೂಡ ದಾಖಲಾಗಿದೆ. ಇದರ ಬೆನ್ನಲ್ಲೆ ಆರೋಪಿತ ಪತ್ರಕರ್ತ ಹಾಗೂ ಆತನ ಸಹಚರರ ವಿರುದ್ಧ ದೂರು ಕೊಡದಂತೆ, ಪ್ರೆಸ್ ಮೀಟ್ ಮಾಡದಂತೆ ಜೀವ ಬೆದರಿಕೆ ಹಾಕಿದ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ IPC 1860 (Uls-341,504,506,34) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ
ಆರೋಪಿತ ಪತ್ರಕರ್ತನ ಕಾರಣದಿಂದಲೇ ಪೊಲೀಸ್ ರೇಡ್ಗೆ ಒಳಗಾಗಿದ್ದ ರಾಯಲ್ ಆರ್ಚ್ ಸ್ಪಾದ ಮಾಲೀಕ ದಂಪತಿ ಗುಡ್ಡೆಕಲ್ ದೇವಾಲಯದ ಬಳಿ ಬರುವಾಗ, ಅವರನ್ನ ಅಡ್ಡಹಾಕಿದ ಬೈಕ್ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿದ್ದಾರೆ. ಈಗಾಗಲೇ ದಾಖಲಾಗಿರುವ ಎಫ್ಐಆರ್ಗೆ ಸಂಬಂಧಿಸಿದಂತೆ ದೂರುದಾರರ ಜೊತೆ ಪ್ರೆಸ್ ಮೀಟ್ ಮಾಡಿದರೇ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ ದುಷ್ಕರ್ಮಿಗಳು ಈಗ ಆಗಿದ್ದು ಕಡಿಮೆ, ಆರೋಪಿತ ಪತ್ರಕರ್ತ ಸುಭಾಷ್ ಶೆಟ್ಟಿ ವಿರುದ್ಧ ಹೇಳಿಕೆ ಕೊಟ್ಟರೇ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ಧಾರೆ ಎನ್ನಲಾಗಿದೆ.
ಪತ್ರಕರ್ತನಿಗಾಗಿ ಸರ್ಚಿಂಗ್!
ಶಿವಮೊಗ್ಗದ ಪೊಲೀಸರು ಪತ್ರಕರ್ತನಿಗಾಗಿ ಹುಡುಕಾಟ ಆರಂಭಿಸಿದ್ದು, ಈತನ ವಿರುದ್ಧ ಈ ಹಿಂದೆ ಮಹಿಳೆಯೊಬ್ಬರ ಮನೆಗೆ ನುಗ್ಗಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೆ ಇದೀಗ ಎರಡು ಕೇಸ್ಗಳು ಪತ್ರಕರ್ತನ ವಿರುದ್ಧ ದಾಖಲಾಗಿದೆ.ಇದರ ನಡುವೆ ಪತ್ರಕರ್ತನ ವಿಡಿಯೋ ಸಹ ಒಂದು ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ರಾಯಲ್ ಆರ್ಚ್ನಲ್ಲಿ ರೇಡ್ ಮಾಡಿಸಿದ್ದು ನಾನೇ ಎಂದು ಆತ ಹೇಳಿಕೊಳ್ಳುತ್ತಿರುವ ಮಾತುಗಳು ರೆಕಾರ್ಡ್ ಆಗಿದೆ.
24 ಗಂಟೆಯಲ್ಲಿ 323.90 MM ಮಳೆ! ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ? ವರದಿ ಇಲ್ಲಿದೆ
ಮಗ ಬೈಕ್ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?
ಶಿವಮೊಗ್ಗ ನಾಗರಿಕರ ಗಮನಕ್ಕೆ! ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್!
ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!