ಕಾರು, ಬೈಕಲ್ಲಿ ಮಕ್ಕಳ ಜಾಲಿ, ಕೋರ್ಟ್‌ ಫೈನ್‌ ಕಟ್ಟಿ ಅಪ್ಪಂದಿರ ಜೇಬು ಖಾಲಿ! ಫೋಟೋ ಸಾಕ್ಷಿ ಕೊಟ್ಟು ಹಾಕಿದ್ರು ₹75 ಸಾವಿರ ದಂಡ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 26, 2025 ‌‌ ‌‌

ಮಕ್ಕಳ ಕೈಗೆ ಟೂ ವಿಲ್ಹರ್‌ ಕೊಟ್ಟು ಮಕ್ಕಳಾಟಿಕೆ ಮಾಡುತ್ತಿರುವ ಪೋಷಕರ ವಿರುದ್ಧ ಸರತಿ ಸಾಲಿನಲ್ಲಿ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ದಂಡ ಹಾಕುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಬರೋಬ್ಬರಿ ಮೂರು ಪ್ರಕರಣಗಳಲ್ಲಿ ಫೋಷಕರಿಗೆ ತಲಾ 25 ಸಾವಿರ ರೂಪಾಯಿ ಕೋರ್ಟ್‌ ಮೂಲಕ ದಂಡ ವಿಧಿಸಲಾಗಿದೆ. ಪ್ರಕರಣಗಳ ವಿವರ ಹೀಗಿದೆ. 

- Advertisement -

ಮೊದಲನೇ ಪ್ರಕರಣದಲ್ಲಿ ಕಳೆದ 6 ನೇ ತಾರೀಖು ಟಿಪ್ಪು ನಗರದ ಎರಡನೇ ಮೇನ್‌ ರೋಡ್‌ನಲ್ಲಿ ಹೋಂಡಾ ಆಕ್ಟೀವಾ ಓಡಿಸುತ್ತಿದ್ದ ಬಾಲಕನ ಬಗ್ಗೆ ಫೋಟೋ ಸಮೇತ ಟ್ರಾಫಿಕ್‌ ಸಿಪಿಐ ಸಂತೋಷ್‌ ಕುಮಾರ್‌ರವರಿಗೆ ದೂರು ಬಂದಿತ್ತು. ಅದನ್ನು ಆಧರಿಸಿ ಪರಿಶೀಲನೆ ನಡೆಸಿದ ಸಂತೋಷ್‌ ಕುಮಾರ್‌, ಆಕ್ಟಿವಾ ಮಾಲೀಕರ ಮೇಲೆ ಚಾರ್ಚ್‌ ಶೀಟ್‌ ಸಲ್ಲಿಸಿದ್ದರು. ಈ ಸಂಬಂಧ ಕೋರ್ಟ್‌ 25 ಸಾವಿರ ಫೈನ್‌ ಹಾಕಿದೆ

ಎರಡನೇ ಪ್ರಕರಣದಲ್ಲಿ ಕಸ್ತೂರಿಬಾ ರಸ್ತೆಯಲ್ಲಿ ಟ್ರಾಫಿಕ್‌ ಸಿಪಿಐ ಸಂತೋಷ್‌ ಕುಮಾರ್‌ ವಾಹನ ತಪಾಸಣೆ ನಡೆಸ್ತಿದ್ದಾಗ, ಅಲ್ಲಿಗೆ Hyundai Station Wagon ಕಾರನ್ನು ಡ್ರೈವ್‌ ಮಾಡಿಕೊಂಡು ಅಪ್ರಾಪ್ತನೊಬ್ಬ ಬಂದಿದ್ದಾನೆ. ವಿಸಿಬಲ್‌ ಅಪೆನ್ಸ್‌ ಸಂಬಂಧ ಕಾರು ತಡೆದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಚಾಲಕ ಅಪ್ರಾಪ್ತ ಎಂಬುದು ಗೊತ್ತಾಗಿದೆ. ಈ ಸಂಬಂಧ ಕೇಸ್‌ ದಾಖಲಿಸಿ  3rd ACJ & JMFC ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು. ಕೋರ್ಟ್‌ ವಾಹನದ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದೆ. 

ಮೂರನೇ ಪ್ರಕರಣದಲ್ಲಿ ಮಿಳಘಟ್ಟದಲ್ಲಿ ಟ್ರಾಫಿಕ್‌ ಪಿಎಸ್‌ಐ ತಿರುಮಲೇಶ್‌ ವಾಹನ ತಪಾಸಣೆ ನಡೆಸ್ತಿದ್ದ ಸಂದರ್ಭದಲ್ಲಿ ಸುಜುಕಿ ವೆಹಿಕಲ್‌ ರೇಡ್‌ ಮಾಡಿಕೊಂಡು ಅಪ್ರಾಪ್ತನೊಬ್ಬ ಅಲ್ಲಿಗೆ ಬಂದಿದ್ದಾನೆ. ಆತನನ್ನು ತಡೆದು ದಾಖಲೆ ಪರಿಶೀಲನೆ ನಡೆಸಿದಾಗ, ಅಪ್ರಾಪ್ತನಿಗೆ ಮೊಪೆಡ್‌ ಚಲಾಯಿಸಲು ಕೊಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಕೇಸ್‌ ದಾಖಲಿಸಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದ್ದು ಕೋರ್ಟ್‌ ವಾಹನದ ಮಾಲೀಕರಿಗೆ 25 ಸಾವಿರ ದಂಡ ವಿಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *