shivamogga traffic police 17-06-25 :  ಕ್ಯಾಮರಾ ಕಣ್ಣಲ್ಲೇ ಕಾಣುತ್ತಾರೆ ಪೊಲೀಸ್ | ವೈರಲ್​ ಆಗ್ತಿದೆ ಎಸ್​ಪಿ ಹಂಚಿಕೊಂಡ ವಿಡಿಯೋ

prathapa thirthahalli
Prathapa thirthahalli - content producer

shivamogga traffic police :  ಕ್ಯಾಮರಾ ಕಣ್ಣಲ್ಲೇ ಕಾಣುತ್ತಾರೆ ಪೊಲೀಸ್ | ವೈರಲ್​ ಆಗ್ತಿದೆ ಎಸ್​ಪಿ ಹಂಚಿಕೊಂಡ ವಿಡಿಯೋ

shivamogga traffic police :  ಶಿವಮೊಗ್ಗ:   ಇತ್ತೀಚೆಗೆ ಕಾರವಾರದಲ್ಲಿ ಶಿರೂರು ಹೆದ್ದಾರಿ ಸಮೀಪದ ಗಂಗಾವಳಿ ಸೇತುವೆ ಮೇಲೆ ಮಗುವಿನೊಂದಿಗೆ ನಿಂತಿದ್ದ ಪ್ರವಾಸಿಗ ದಂಪತಿಗಳನ್ನು ಸಿಸಿಟಿವಿ ಕ್ಯಾಮರಾದಲ್ಲಿ ಗಮನಿಸಿದ್ದ ಅಲ್ಲಿನ ಪೊಲೀಸರು, ಅವರಿಗೆ ಎಚ್ಚರಿಕೆ ನೀಡಿದ್ದರು. ಇದರ ವಿಡಿಯೋ ಉತ್ತರ ಕನ್ನಡದ ಎಸ್​ಪಿಯವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಹಂಚಿಕೊಂಡು, ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರವಹಿಸುವಂತೆ ಮನವಿ ಮಾಡಿದ್ದರು. ಇದೀಗ ಇದೇ ರೀತಿ ಶಿವಮೊಗ್ಗ ಪೊಲೀಸರು ಟ್ರಾಫಿಕ್​ ರೂಲ್ಸ್​ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 

ಪೂರಕವೆಂಬಂತೆ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್​ ಎಸ್​ಐ ತಿರುಮಲೇಶ್​ ರವರು ಟ್ರಾಫಿಕ್ ಕಂಟ್ರೋಲ್​ ರೂಂನಲ್ಲಿ ಕುಳಿತುಕೊಂಡು ಮಹಾವೀರ ಸರ್ಕಲ್​ನಲ್ಲಿ ದಂಪತಿಯೊಬ್ಬರು ಹೆಲ್ಮೆಟ್ ಇಲ್ಲದೆ ಬೈಕ್​ನಲ್ಲಿ ಬರುತ್ತಿರುವುದನ್ನು ಗಮನಿಸಿ ಅವರಿಗೆ ಹೆಲ್ಮೆಟ್ ಧರಿಸಿಕೊಂಡು ಬೈಕ್​ ಚಲಾಯಿಸುವಂತೆ ಮನವಿ ಮಾಡಿದರು, ಅಲ್ಲದೆ ಹೆಲ್ಮೆಟ್​ ಧರಿಸುವುದನ್ನು ಅಗತ್ಯ ಮತ್ತು ಅನಿವಾರ್ಯತೆಯನ್ನು ವಿವರಿಸಿದರು. ಕೊನೆಗೆ ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ, ಅವರಿಗೆ ಐನೂರು ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದ ತಿರುಮಲೇಶ್​ ದಂಡದ ರಶೀದಿ ಬೈಕ್​ ನಂಬರನ್ನು ಆಧರಿಸಿ ಮನೆಗೆ ಕಳುಹಿಸುವುದಾಗಿ ತಿಳಿಸಿದರು. 

shivamogga traffic police :  ಈ ದೃಶ್ಯವನ್ನು ಕನ್ನಡ ಮೀಡಿಯಮ್​ ಚಾನಲ್​ ನ ಪ್ರತಿನಿಧಿಗಳು ಶೂಟ್​ ಮಾಡಿದ್ದು, ಪೊಲೀಸರ ಕಾರ್ಯ ವೈಖರಿ ಬಗ್ಗೆ ತಮ್ಮ ವಾಹಿನಿಯಲ್ಲಿ ವರದಿ ಮಾಡಿದ್ದರು. ಸದ್ಯ ಈ ವರದಿ ಶಿವಮೊಗ್ಗದ ಎಲ್ಲೆಡೆ ವೈರಲ್ ಆಗುತ್ತಿದೆ. ಸ್ವತಃ ಎಸ್​ಪಿ ಮಿಥುನ್ ಕುಮಾರ್​ ರವರು ವಾಹಿನಿಯ ಕ್ಲಿಪ್ಪಿಂಗ್​ ಹಂಚಿಕೊಂಡಿದ್ದಾರೆ. ಇದು ಸಹ ವೈರಲ್ ಆಗುತ್ತಿದ್ದು, ಪೊಲೀಸರ ಕ್ರಮ ಶಿವಮೊಗ್ಗದ ಮಟ್ಟಿಗೆ ವಿಶೇಷವಾದ ಮಾತುಗಳಿಗೆ ಸಾಕ್ಷಿಯಾಗುತ್ತಿದೆ.

 

Share This Article