ಬೆಳೆದ ಬೆಳಗಳ ನಡುವೆ ಶೆಟ್ಟಿಹಳ್ಳಿ ಟಸ್ಕರ್‌ಗಳ ಸರ್ವೆ | ಫಸಲು ಪಡ್ಚಾ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024

ಶಿವಮೊಗ್ಗದಲ್ಲಿ ಮತ್ತೆ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಉಪಟಳ ನೀಡಿವೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಡಾನೆಗಳು ದಾಳಿ ಮಾಡಿವೆ. ಹಗಲು ಹೊತ್ತಿನಲ್ಲಿಯೇ ರೈತರ ಹೊಲಗಳಿಗೆ ನುಗ್ಗಿ ಆನೆಗಳು ಬೆಳೆ ಹಾನಿ ಮಾಡುತ್ತಿರುವ ದೃಶ್ಯವನ್ನು ರೈತರು ಮೊಬೈಲ್‌ಗಳಲ್ಲಿ ಸೆರೆ ಹಿಡಿದ್ದಿದ್ದಾರೆ. 

ನಿನ್ನೆ ರಾತ್ರಿ ಕಾಡಾನೆಗಳು ಈ ಭಾಗದಲ್ಲಿ ನುಗ್ಗಿ ಹಾವಳಿ ಮಾಡಿವೆ. ಆಡಿನಕೊಟ್ಟಿಗೆಯ ಗಿರೀಶ್, ಹೊನ್ನಪ್ಪ, ಸಂತೋಷ್ ಎಂಬುವರ ಜಮೀನಿನಲ್ಲಿ ಆನೆಗಳು ದಾಳಿ ಮಾಡಿದ್ದು, ಬೆಳೆಯನ್ನು ಹಾಳು ಮಾಡಿವೆ. ಈ ಬಗ್ಗೆ ರೈತರು ಅಳಲು ತೋಡಿಕೊಂಡಿದ್ದು ಅರಣ್ಯ ಇಲಾಖೆ ಬೇಜವಾಬ್ದಾರಿತನಕ್ಕೆ ಆಕ್ರೋಶ ಹೊರಹಾಕಿದ್ದಾರೆ. 

ಇತ್ತೀಚೆಗೆ ವೀರಗಾರನ ಬೈರನಕೊಪ್ಪದಲ್ಲಿ ಕಾಡಾನೆಯೊಂದು ತಂತಿಬೇಲಿ ವಿದ್ಯುತ್‌ ತಗುಲಿ ಸಾವನ್ನಪ್ಪಿತ್ತು. ಅದರ ಬಳಿಕ ಕಾಡಾನೆಗಳ ಹಾವಳಿ ಕಡಿಮೆಯಾಗಿದೆ ಎಂದು ನಂಬಲಾಗಿತ್ತು. ಆದರೆ ನಿನ್ನೆಯಿಂದ ಕಾಡಾನೆಗಳ ಗುಂಪು ರೈತರ ಹೊಲಗಳಲ್ಲಿ ಪ್ರತ್ಯಕ್ಷವಾಗಿದೆ. 

SUMMARY | The wild elephants have created havoc in Adinakottige, Koodi, Thammadihalli and Chowdikatte areas of Shettihalli Sanctuary

KEY WORDS | wild elephants created havoc, Adinakottige, Koodi, Thammadihalli ,Chowdikatte areas  Shettihalli Sanctuary

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor