ಕಟ್ಟಡ ಕೆಲಸಕ್ಕೆ ಬಂದ ಸಂದರ್ಭದಲ್ಲಿ ಕರೆಂಟ್ ಶಾಕ್! ಶಿವಮೊಗ್ಗ ನಗರದಲ್ಲಿ ಇಬ್ಬರು ಸಾವು!

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS

ಶಿವಮೊಗ್ಗ / ನಗರದ ಊರುಗಡೂರ್ ಸಮೀಪದ ಅಂಬೇಡ್ಕರ್​ ಭವನದ ಬಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ  ಇಬ್ಬರು ಕರೆಂಟ್ ತಗುಲಿ ಸಾವನ್ನಪ್ಪಿದ್ಧಾರೆ. ಮನೆ ಕಟ್ಟಡಕ್ಕೆ ಬಳಸುವ ತಗಡಿನ ಶೀಟ್​ನ್ನ ಆರ್​ಸಿಸಿ ಮೇಲೆ ಸಾಗಿಸುತ್ತಿದ್ದ ವೇಳೆ ಕರೆಂಟ್ ವಯರ್ ತಗುಲಿ ಇಬ್ಬರಿಗಗೂ ಕರೆಂಟ್ ಹೊಡೆದಿದೆ.  ಘಟನೆಯಲ್ಲಿ  ಓರ್ವರು ಗುಂಟೂರು ಮೂಲದ ಚಲ್ಲಾ ಸೋಮಶೇಖರ್ ಎಂದು ಗೊತ್ತಾಗಿದ್ದು, ಇನ್ನೊಬ್ಬರ ಸುಳಿವು ಸಿಗಬೇಕಿದೆ.

ಘಟನೆಯಲ್ಲಿ ಮರ ಕಡಿಯುತ್ತಿರುವ ಸಂದರ್ಭದಲ್ಲಿ ಮೇನ್​ ಲೇನ್​ ಸಂಪರ್ಕಗೊಂಡಿದ್ದು, ಅದರಿಂದ ಹರಿದ ವಿದ್ಯುತ್ನಿಂದಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ತಕ್ಷಣವೇ ಸ್ಥಳೀಯರು 108 ಗೆ ಕರೆ ಮಾಡಿ ಆ್ಯಂಬುಲೆನ್ಸ್​ನ್ನ ಕರೆಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಇಬ್ಬರನ್ನು ಶಿಫ್ಟ್ ಮಾಡಲಾಗಿದ್ದು, ಅಲ್ಲಿನ ವೈದ್ಯರು ಇಬ್ಬರು ಮೃತಪಟ್ಟಿರುವುದನ್ನ ದೃಡಿಕರಿಸಿದ್ದಾರೆ. ತುಂಗಾ ನಗರ ಪೊಲೀಸ್ ಸ್ಟೇಷನ್​ನಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ. 


 

Leave a Comment