KARNATAKA NEWS/ ONLINE / Malenadu today/ Jun 14, 2023 SHIVAMOGGA NEWS
ಶಿವಮೊಗ್ಗ / ಮೆಸ್ಕಾಂ ವಿಭಾಗದ ಎದುರು ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ವಿದ್ಯುತ್ ದರ (Power Price Hike) ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಿದರು. ಮೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಕಾರ್ಯಕರ್ತರು, ಸರ್ಕಾಋದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಮಧ್ಯೆ ಕೆಲವು ಕಾರ್ಯಕರ್ತರು ಮೆಸ್ಕಾಂ ಕಚೇರಿಯ ಮೇಲೆ ಕಲ್ಲು ತೂರಿದರು. ತೂರಿದ ಕಲ್ಲುಗಳು ಮೆಸ್ಕಾಂ ಕಚೇರಿಯ ಕಿಟಕಿ ಹಾಗು ನೋಟಿಸ್ ಬೋರ್ಡ್ಗೆ ತಗುಲಿತು. ಇನ್ನೂ ಇದೇ ವೇಳೆ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು,
ಸರ್ಕಾರ ರಚನೆಯಾಗಿ ತಿಂಗಳಲ್ಲಿಯೇ ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಲು ಕಾಂಗ್ರೆಸ್ ಪಕ್ಷವೆ ಹೊಣೆ ಎಂದು ಆರೋಪಿಸಿದರು. ಈ ಮಧ್ಯೆ ಪ್ರತಿಭಟನೆಯಲ್ಲಿ ಮಾತನಾಡಿದ ಎಂಎಲ್ಎ ಚನ್ನಬಸಪ್ಪರವರು, ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆಗಳಿಗೆ ತೊಂದರೆಯಾಗಲಿದೆ ಎಂದರು. ಅಲ್ಲದೆ, 200 ಯುನಿಟ್ ವಿದ್ಯುತ್ ಪ್ರೀ ಎಂದವರು ಕಂಡೀಷನ್ಗಳನ್ನು ಹಾಕುತ್ತಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ಬಳಸದಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ಇನ್ನೊಂದೆಡೆ ಮೆಸ್ಕಾಂ ಕಚೇರಿ ಅಧಿಕಾರಿಗಳು , ಕಲ್ಲು ಹೊಡೆದ ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದು ಈ ಸಂಬಂಧ ದೂರು ನೀಡುವುದಾಗಿ ತಿಳಿಸಿದ್ದಾರೆ