ಅಮಿರ್​ ಅಹಮದ್ ಸರ್ಕಲ್​ನಲ್ಲಿ ಹಲ್ಲೆ/ ಬಸ್​ಗೆ ಲಾರಿ ಡಿಕ್ಕಿ/ ನಾಯಿಗೆ ಗುದ್ದಿದ್ದಕ್ಕೆ ಮಾಲೀಕನ ಕಿರಿಕ್!/ ಎದುರುಮನೆಯವನ ಕಾಟ! ಶಿವಮೊಗ್ಗ TODAY CRIME @ NEWS

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS

ಖಾಸಗಿ ಬಸ್​ಗೆ ಲಾರಿ ಡಿಕ್ಕಿ

ತುಂಗಾನಗರ ಠಾಣಾ ವ್ಯಾಪ್ತಿಯ ನಂದನ ಕಾಲೇಜು ಬಳಿ ಲಾರಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಖಾಸಗಿ ಬಸ್​ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಳಗಾಗಿಲ್ಲ.  Shivamogga Malenadu Today

ನಾಯಿಗೆ ಕಾರು ಡಿಕ್ಕಿ/ ಮಾಲೀಕನಿಂದ ಗಲಾಟೆ

ಭದ್ರಾವತಿಯ ಭದ್ರಾಕಾಲೋನಿಯಲ್ಲಿ ಕಳೆದ 11 ರಂದು ನಾಯಿಯೊಂದಕ್ಕೆ ಕಾರೊಂದು ಡಿಕ್ಕಿಯಾದ ಘಟನೆ ಪರಸ್ಪರ ಗಲಾಟೆಗೆ ತಿರುಗಿತ್ತು. ನಾಯಿಗೆ ಡಿಕ್ಕಿ ಹೊಡೆದಿದ್ದನ್ನ ಪ್ರಶ್ನಿಸಿದ ನಾಯಿ ಮಾಲೀಕರು ಹಾಗೂ ಕಾರು ಮಾಲೀಕರ ನಡುವೆ ಜಗಳವಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರಿಗೂ ಕಾನೂನಿನ ಮೂಲಕ ಕ್ರಮ ಕೈಗೊಳ್ಳುವಂತೆ ತಿಳಿಸಿ, ಜಗಳ ಬಿಡಿಸಿದ್ದಾರೆ. 

Shivamogga Malenadu Today

ಎದುರುಮನೆಯವರ ಕಾಟ

ಶಿವಮೊಗ್ಗದ ತುಂಗಾನ ನಗರ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಎದುರು ಮನೆಯವರು ಕೆಟ್ಟ ಶಬ್ಧಗಳಿಂಧ ನಿಂಧಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ ಘಟನೆ ನಡೆದಿದೆ. ಈ ಸಂಬಂಧ ದೂರು ಬರುತ್ತಲೇ ಸ್ಥಳಕ್ಕೆ ಬಂದ ಪೊಲೀಸರು, ನಿಂದಿಸಿದ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿ ತೆರಳಿದ್ಧಾರೆ. 

ಬಸ್‌ ಮರಕ್ಕೆ ಡಿಕ್ಕಿ: ಐವರಿಗೆ ಗಾಯ

ಕೊಪ್ಪದಿಂದ ಶೃಂಗೇರಿ ಕಡೆ ಹೊರಟಿದ್ದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಹರಿಹರಪುರ ಠಾಣಾ ವ್ಯಾಪ್ತಿಯ ಸೂರ್ಳಿಯಲ್ಲಿ ಮಂಗಳವಾರ ನಡೆದಿದೆ. ಸೂರ್ಳಿ ಗಣಪತಿ ಕಟ್ಟೆ ಮಾರ್ಗವಾಗಿ ಎಸ್‌ಕೆಎಂಎಸ್‌ ಖಾಸಗಿ ಬಸ್ ಚಲಿಸುವಾಗ ಲಾರಿ ಅಡ್ಡ ಬಂದಾಗ ಈ ದುರ್ಗಟನೆ ನಡೆದಿದೆ. ನಿರ್ವಾಹಕ ಸೇರಿದಂತೆ ಇವರಿಗೆ ಗಾಯಗಳಾಗಿದ್ದು, ಆಕ ದಾಖಲಿಸಲಾಗಿದೆ.

Shivamogga Malenadu Today

ತನ್ನ ಸಹವಾಸ ಮಾಡುತ್ತಿಲ್ಲ ಎಂದು ಹಲ್ಲೆ

ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್​ನಲ್ಲಿ ಗಲಾಟೆಯೊಂದು ನಡೆದಿದೆ. ಇಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದ ಲಷ್ಕರ್ ಮೊಹಲ್ಲಾದ ನಿವಾಸಿ ಸಯ್ಯದ್ ಎಂಬಾತನ ಮೇಳೆ ಫೈಸಲ್ ಎಂಬಾತ ಹಲ್ಲೆ ಮಾಡಿದ್ಧಾನೆ. ಫೈಸಲ್​ ನ ಸಹವಾಸ ಬೇಡ ಎಂದು ಸಯ್ಯದ್ ಆತನಿಂದ ದೂರವಿದ್ದನಂತೆ. ಇದೇ ಕಾರಣಕ್ಕೆ ನೀನು ನನ್ನ ಸಹವಾಸ ಏಕೆ ಮಾಡುತ್ತಿಲ್ಲ. ಒಳ್ಳೇಯವನಾಗಲು ಹೊರಟಿದ್ದೀಯಾ ಎಂದು ಫೈಸಲ್ ಹಲ್ಲೆ ಮಾಡಿದ್ದಾನೆ ಎಂದು ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರಲಾಗಿದೆ. 

 

Shivamogga Malenadu Today

ಗ್ಯಾರಂಟಿ ಬೆನ್ನಲ್ಲೆ, ಬಿಜೆಪಿ ವಿರುದ್ಧ ಶುರುವಾಗಲಿದೆ ಕಾಂಗ್ರೆಸ್ ಅಭಿಯಾನ! ಏನದು?


 

Leave a Comment