ಜೆಡಿಎಸ್​ ಕಾರ್ಯಕರ್ತರ ರೌಡಿಸಂ? ಮಾಜಿ ಶಾಸಕರ ಆರೋಪಕ್ಕೆ ಹಾಲಿ ಶಾಸಕಿ ನೀಡಿದ್ರು ಉತ್ತರ!

Rowdyism of JD(S) workers? The sitting MLA's reply to the former MLA's allegations!

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Rowdyism of JD(S) workers? The sitting MLA's reply to the former MLA's allegations!

KARNATAKA NEWS/ ONLINE / Malenadu today/ May 18, 2023 SHIVAMOGGA NEWS 

ಶಿವಮೊಗ್ಗ/ ನಗರದಲ್ಲಿ ಇವತ್ತು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಶಾರದಾ ಪೂರ್ಯ ನಾಯ್ಕ್​ ಸುದ್ದಿಗೋಷ್ಟಿ ನಡೆಸಿ ಮತದಾರರಿಗೆ ಕೃತಜ್ಞತೆ ತಿಳಿಸಿದ್ದಾರೆ. 

ಜನರ ಪ್ರೀತಿಗೆ ಋಣಿಯಾಗಿದ್ದೇನೆ, ಮತದಾರರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು ಎಂದಿದ್ದಾರೆ.  ಜನರು ನನ್ನನ್ನು 15,000ಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ಅವರ ಪ್ರೀತಿಗೆ, ಅಭಿಮಾನಕ್ಕೆ ನನಗೆ ಹೃದಯ ತುಂಬಿ ಬಂದಿದೆ ಎಂದರು. 

ಇದನ್ನು ಸಹ ಓದಿ: charmadi ghat/ ಘಾಟಿಯಲ್ಲಿ ದುತ್ತೆಂದು ಎದುರಾದ ಒಂಟಿ ಸಲಗ! ಸರ್ಕಾರಿ ಬಸ್​ ಸ್ವಲ್ಪದರಲ್ಲಿಯೇ ಪಾರು!

ಇನ್ನೂ ಇದೇ ವೇಳೇ ,  ಬಿಜೆಪಿ ಅಭ್ಯರ್ಥಿ ಜೆಡಿಎಸ್​ನ ಕಾರ್ಯಕರ್ತರು ರೌಡಿಸಂ ಮಾಡಿದ್ಧಾರೆ ಎಂದು ಆರೋಪಿಸಿದ್ದಕ್ಕೆ ಆಕ್ರೋಶ ಹೊರಹಾಕಿದ ಶಾರದಾ ಪೂರ್ಯಾನಾಯ್ಕ್​,  ಸೋಲಿನ ಹತಾಶೆಯಿಂದ ಹೀಗೆ ಹೇಳುತ್ತಿದ್ದಾರೆ. ಆನವೇರಿಯ ರ್ಯಾಲಿಗೆ ಸಂಬಂಧಿಸಿದಂತೆ ಅವರೇ ಕ್ಯಾತೆ ತೆಗೆದಿದ್ದು ಎಂದಿದ್ಧಾರೆ. 

ಅಲ್ಲದೆ ಜೆಡಿಎಸ್‌-ಕಾಂಗ್ರೆಸ್ ಒಳಒಪ್ಪಂದ ಮಾಡಿ ಕೊಂಡಿದೆ ಎಂಬ ಅವರ ಆರೋಪ ಸರಿಯಲ್ಲ, ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ನನಗೇನೂ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ತಮ್ಮದೇ ಆದ ಸಿದ್ಧಾಂತಗಳು ಇರುತ್ತವೆ. ಅವರು ಚುನಾವಣೆಗೆ ನಿಲ್ಲುವುದು ಹೊಂದಾಣಿಕೆ ಆಗಲಾರದು ಎಂದಿದ್ದಾರೆ. 

 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor