ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ದಾವಣಗೆರೆಯ ನಿವಾಸಿಗಳಾಗಿದ್ದು, ಅಲ್ಲಿನ ಪ್ರತಿಷ್ಟಿತ ಕಾಲೇಜಿನಲ್ಲಿ ಓದುತ್ತಿದ್ದಾರೆ. ಫಸ್ಟ್ ಹಾಗೂ ಸೆಕಂಡ್ ಇಯರ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ಬಂದಿದ್ದರು.
ಶಿವಮೊಗ್ಗದಲ್ಲಿ ಸ್ನೇಹಿತರೊಬ್ಬನನ್ನ ಭೇಟಿಯಾಗಿ ದಾವಣಗೆರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸೇರಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ಧಾರೆ. ಮೂವರು ವಿದ್ಯಾರ್ಥಿಗಳು ಸಹ 20 -25 ವಯಸ್ಸಿನವರು. ಇವರೆಲ್ಲರು ಗಾಯಾಳು ರುದ್ರೇಶ್ ಜೊತೆಗೆ ಶಿವಮೊಗ್ಗಕ್ಕೆ ಫ್ರೆಂಡ್ನ್ನ ಮೀಟ್ ಮಾಡೋದಕ್ಕೆ ಅಂತಾ ಬಂದಿದ್ದರು.
ಇದನ್ನು ಸಹ ಓದಿ : SHIMOGA BREAKING | ಕಲ್ಲಾಪುರದಲ್ಲಿ ಭೀಕರ ಆಕ್ಸಿಡೆಂಟ್’ | ಸ್ಥಳದಲ್ಲಿಯೇ ಮೂವರ ದುರ್ಮರಣ
ಬೆಳಗಿನ ಜಾವ ನಡೆದಿದ್ದು ಏನು?
ಮೂಲಗಳ ಪ್ರಕಾರ, ಬೆಳಗ್ಗಿನ ಜಾವ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎದುರಿನಿಂದ ಗೂಡ್ಸ್ ಲಾರಿ ಬರುತ್ತಿದೆ. ಲಾರಿ ಆಕ್ಸಿಡೆಂಟ್ ಆಗಿ ನಿಂತ ಸ್ಥಳವೂ ಎಡಬದಿಯಲ್ಲಿಯೇ ಇದೆ. ಇನ್ನೂ ಎದುರಿಗೆ ಬರುತ್ತಿದ್ದ ಲಾರಿಯನ್ನು ಗಮನಿಸದ ವಿದ್ಯಾರ್ಥಿಗಳು, ತಮ್ಮ ಮುಂದೆ ಸಾಗುತ್ತಿದ್ದ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಾಹನದ ಒಂದು ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಬಹುತೇಕ ನುಜ್ಜುಗುಜ್ಜಾಗಿದೆ. ನಿದ್ರೆಯಲ್ಲಿದ್ದ ರುದ್ರೇಶ್ ಪಾಟೀಲ್ ಮಾತ್ರ ಬದುಕುಳಿದಿದ್ದು, ಘಟನೆಯಿಂದ ಆತ ಬೆಚ್ಚಿಬಿದ್ದಿದ್ದಾನೆ.
ಗಾಯಗೊಂಡವರು : ರುದ್ರೇಶ್ ಪಾಟೀಲ್ S/o ಲಿಂಗರಾಜ್ , ವಯಸ್ಸು 20 , ಮೊದಲ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ, ದಾವಣಗೆರೆಯ ಜಯನಗರ, ಬಿ ಬ್ಲಾಕ್ ನಿವಾಸಿ
ಮೃತರು :
- ವಿವೇಕ್ , (25) ದಾವಣಗೆರೆ ನಿವಾಸಿ, ವಿದ್ಯಾರ್ಥಿ
- ಕಾರ್ತಿಕ್ (ಡ್ರೈವರ್) (21) ಬಿಐಇಟಿ ಕಾಲೇಜ್ ವಿದ್ಯಾರ್ಥಿ ದಾವಣಗೆರೆ
- ಮೋಹನ (21) ಬಿಇಇಟಿ ಕಾಲೇಜಿನ ವಿದ್ಯಾರ್ಥಿ ಬಿಸಿಎ ಸೆಕೆಂಡ್ ಇಯರ್
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link