ಶಿವಮೊಗ್ಗ : ಶಾಲೆಯ ಪಕ್ಕದಲ್ಲಿದ್ದ ಪೊದೆಯೊಳಗೆ ಅಡಗಿತ್ತು 8 ಅಡಿ ಉದ್ದದ ಬೃಹತ್ ಗಾತ್ರದ ಹಾವು; ಸೆರೆ ಹಿಡಿಯುವ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
8-Foot Giant Python Rescued Near School in Srirampura
8-Foot Giant Python Rescued Near School in Srirampura

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಶ್ರೀರಾಂಪುರದ ಶಾಲೆಯ ಪಕ್ಕದಲ್ಲಿದ್ದ ಪೊದೆಯೊಂದರಲ್ಲಿ ಅಡಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಿಸಿದ್ದಾರೆ.

ತಮ್ಮೂರಿನ ಶಾಲೆಯ ಪಕ್ಕದ ಪೊದೆಯೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವು ಬಂದಿದೆ ಎಂಬ ವಿಚಾರವನ್ನು ಸ್ಥಳೀಯರು ಸ್ನೇಕ್ ಕಿರಣ್ ಅವರಿಗೆ ತಿಳಿಸಿದರು. ವಿಷಯ ತಿಳಿದ ಕೂಡಲೇ ಸ್ನೇಕ್ ಕಿರಣ್ ಸ್ಥಳಕ್ಕೆ ಆಗಮಿಸಿದರು. ರಾತ್ರಿಯಾಗಿದ್ದರಿಂದ ಹಾವನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಅವರಿಗೆ ಸವಾಲಾಗಿಯೇ ಇತ್ತು.

ಆದರೂ ಸಹ ಸ್ಥಳೀಯರ ನೆರವು ಪಡೆದುಕೊಂಡ ಸ್ನೇಕ್ ಕಿರಣ್, ಟಾರ್ಚ್‌ನ ಸಹಾಯದಿಂದ ಸರಿಸುಮಾರು 10 ಅಡಿ ಎತ್ತರವಿದ್ದ ಪೊದೆಯನ್ನು ಜಾಲಾಡಿದರು. ಸತತ ಹುಡುಕಾಟದ ನಂತರ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಕೊನೆಗೂ ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಹಾವಿನ ಅಳತೆ ಮಾಡಿದಾಗ ಅದು 8 ಅಡಿ ಉದ್ದವಿತ್ತು. ಬಳಿಕ ಹಾವನ್ನು ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor