ಶಿವಮೊಗ್ಗ :  7 ತಿಂಗಳು 21 ದಿನಗಳಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಮಗು :  ಪುಟ್ಟ ಮಗು ಮಾಡಿದ ಸಾಧನೆ ಏನು ಗೊತ್ತಾ ? 

ಹಂಚಿಕೊಳ್ಳಿ
WhatsApp Facebook X Telegram
Bhadravati Infant Mithusha Creates Book of World Records
Bhadravati Infant Mithusha Creates Book of World Records

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ/ಭದ್ರಾವತಿ: ಕೇವಲ 7 ತಿಂಗಳು 21 ದಿನಗಳ ವಯಸ್ಸಿನಲ್ಲೇ ಎರಡೂ ಕೈಗಳಿಂದ ತೂಕವನ್ನು ಎತ್ತಿ ಹಿಡಿಯುವ ವಿಶಿಷ್ಟ ಸಾಮರ್ಥ್ಯ ಪ್ರದರ್ಶಿಸಿದ ಭದ್ರಾವತಿಯ ಪುಟ್ಟ ಕಂದಮ್ಮ ಮಿಥುಷಾ ಎಸ್.ಎಂ. Book of World Recordsನಲ್ಲಿ ವಿಶ್ವ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾಳೆ.

ಚಾನಲ್ ಏರಿಯಾ, ಹಳೆನಗರ, ಭದ್ರಾವತಿ ನಿವಾಸಿ ಮಧುರಾ ಕೆ. ಹಾಗೂ ವಿನೋಬನಗರ, ಶಿವಮೊಗ್ಗ ನಿವಾಸಿ ಆರ್. ಶಿವಕುಮಾರ್ ದಂಪತಿಯ ಪುತ್ರಿಯಾದ ಮಿಥುಷಾಳ ಈ ಸಾಧನೆಯನ್ನು “Youngest Infant to Demonstrate Two-Handed Weight-Lifting Ability ಎಂಬ ಹೆಸರಿನಲ್ಲಿ ಗುರುತಿಸಲಾಗಿದೆ. 2026ರ ಸೆಪ್ಟೆಂಬರ್ 24ರಂದು ಈ ಸಾಧನೆ ಅಧಿಕೃತವಾಗಿ ದಾಖಲಾಗಿದ್ದು, BWR/IND/2026/001394 ಎಂಬ ದಾಖಲಾತಿ ಸಂಖ್ಯೆಯೊಂದಿಗೆ ಪ್ರಮಾಣಪತ್ರ, ಪದಕ ಹಾಗೂ ಸ್ಮರಣಿಕೆಯನ್ನು ನೀಡಲಾಗಿದೆ.

ಮಿಥುಷಾಳಲ್ಲಿರುವ ಸ್ವಾಭಾವಿಕ ತೂಕ ಎತ್ತಿ ಹಿಡಿಯುವ ಸಾಮರ್ಥ್ಯವನ್ನು ಗುರುತಿಸಿದ ಕುಟುಂಬದ ಹಿರಿಯರಾದ ರವಿ ಶಂಕರ್, ಸುಮತಿ, ಕುಮಾರಸ್ವಾಮಿ ಎಂ. ಹಾಗೂ ವಾಣಿ ವಿ. ಅವರು ಪುಟ್ಟ ಕಂದಮ್ಮನಿಗೆ ಪ್ರೋತ್ಸಾಹ ನೀಡಿದ್ದಾರೆ. ಮಿಥುಷಾಳ ತಂದೆಯ ಸಹೋದರ ಆರ್. ಅರುಣ್ ಕುಮಾರ್ ಹಾಗೂ ತಾಯಿ ಮಧುರಾ ಕೆ. ಅವರ ಸಹೋದರಿ ಸಂಚಿತಾ ಕೆ. ಅವರ ಸಹಕಾರ ಮತ್ತು ಪ್ರೇರಣೆಯೂ ಈ ಸಾಧನೆಗೆ ಬೆಂಬಲವಾಗಿದೆ.

ತಾಯಿ ಮಧುರಾ ಕೆ. ಅವರು ಮಿಥುಷಾಳ ಸ್ವಾಭಾವಿಕ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಎರಡೂ ಕೈಗಳಿಂದ ತೂಕವನ್ನು ಎತ್ತಿ ಹಿಡಿಯುವ ಸಾಮರ್ಥ್ಯ ಪ್ರದರ್ಶಿಸಿರುವುದು ಮಿಥುಷಾಳ ಸಾಧನೆಯ ವಿಶೇಷತೆಯಾಗಿದೆ.

ಈ ಸಾಧನೆಯನ್ನು ಗುರುತಿಸಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್, ಭದ್ರಾವತಿ ತಹಶೀಲ್ದಾರ್ ಹಾಗೂ ಗಣೇಶ್ ಅವರು ಮಿಥುಷಾಳನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ.ಪುಟ್ಟ ವಯಸ್ಸಿನಲ್ಲೇ ತನ್ನ ವಿಶಿಷ್ಟ ಸಾಮರ್ಥ್ಯದ ಮೂಲಕ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವ ಮಿಥುಷಾಳ ಸಾಧನೆ ಕುಟುಂಬದವರಲ್ಲಿ ಸಂತಸ ಮೂಡಿಸಿದ್ದು, ಭದ್ರಾವತಿ ಹಾಗೂ ಶಿವಮೊಗ್ಗದ ಜನರ ಗಮನವನ್ನೂ ಸೆಳೆದಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor