ಮಲೆನಾಡು ಟುಡೆ ಇ-ಪತ್ರಿಕೆ: ಪರೀಕ್ಷಾ ಅಕ್ರಮ ಆರೋಪ, ಶಿವಮೊಗ್ಗ ದಸರಾ ಅವಘಡದ ತನಿಖೆಗೆ ಆಗ್ರಹದ ಸುದ್ದಿ ಸೇರಿದಂತೆ ಇಂದಿನ ಪ್ರಮುಖ ವರದಿಗಳನ್ನು ಓದಿ!

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper September 13 2026
Malenadu Today E-Paper September 13 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಟುಡೆ ದಿನಪತ್ರಿಕೆಯ ಅಕ್ಟೋಬರ್ 23, 2026ರ ಶುಕ್ರವಾರದ ಇ-ಪತ್ರಿಕೆ ಇಲ್ಲಿ ನೀಡಲಾಗಿದೆ. ಇಂದಿನ ಪ್ರಮುಖ ಸುದ್ದಿಗಳಲ್ಲಿ ಶಿವಮೊಗ್ಗದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯ ಪರೀಕ್ಷಾ ಕೇಂದ್ರದಲ್ಲಿ ಹಣ ಪಡೆದು ಸಾಮೂಹಿಕ ನಕಲು ಮಾಡಲು ಅವಕಾಶ ನೀಡಲಾಗುತ್ತಿದೆ ಎಂಬ ಆರೋಪ ಹಾಗೂ ಈ ಆರೋಪಗಳನ್ನು ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ನಿರಾಕರಿಸಿರುವ ವಿವರವನ್ನ ಲೀಡ್ ಸುದ್ದಿಯಾಗಿ ನೀಡಲಾಗಿದೆ.

ಇನ್ನೂ ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆಯಿಂದ ಸಂಭವಿಸಿದ ಅವಘಡಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂಬ ಆಗ್ರಹದ ವರದಿ ಪ್ರಕಟವಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 94ನೇ ಜನ್ಮದಿನೋತ್ಸವದ ಅಂಗವಾಗಿ ಅಕ್ಟೋಬರ್ 26ರಂದು ಸೊರಬದ ಬಂಗಾರಧಾಮದಲ್ಲಿ ಆಯೋಜಿಸಿರುವ ಬಂಗಾರ ಪ್ರಶಸ್ತಿ ಪ್ರದಾನ ಸಮಾರಂಭದ ಕುರಿತು ವಿಶೇಷ ವರದಿ ಪ್ರಕಟವಾಗಿದೆ.

ಮಹನೀಯರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸದೆ ಶಾಲಾ-ಕಾಲೇಜುಗಳಲ್ಲಿ ಆಚರಿಸುವ ಮೂಲಕ ಯುವಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿರುವ ಸುದ್ದಿ ಮೊದಲ ಪುಟದಲ್ಲಿದೆ.

‘ಕೊರಿಯರ್ ಬಂದಿದೆ’ ಎಂದು ಕರೆ ಮಾಡಿ ಮೊಬೈಲ್‌ನಲ್ಲಿ ಕಾಲ್ ಫಾರ್ವರ್ಡ್ ಕೋಡ್ ಒತ್ತಿಸುವ ಮೂಲಕ ಬ್ಯಾಂಕ್ ಖಾತೆಯ ಹಣ ದೋಚಲು ಯತ್ನಿಸುವ ಸೈಬರ್ ವಂಚನೆಯ ಕುರಿತು ಎಚ್ಚರಿಕೆಯ ವರದಿ ಪ್ರಕಟವಾಗಿದೆ.

ಇದರೊಂದಿಗೆ ಬೆಂಗಳೂರಿನ 2 ಫ್ಲ್ಯಾಟ್‌ಗಳಲ್ಲಿ 320 ಸಿಮ್ ಸಂಪರ್ಕಗಳ ಸಾಮರ್ಥ್ಯ ಹೊಂದಿದ್ದ ಶಂಕಿತ ಸೈಬರ್ ವಂಚನೆ ಜಾಲವನ್ನು ಪತ್ತೆಹಚ್ಚಿರುವ ಕುರಿತು ವಿವರವಾದ ಸುದ್ದಿ ಪ್ರಕಟವಾಗಿದೆ.

ಹೊನ್ನಾಳಿಯಲ್ಲಿ ಅಮಿತ್ ಮೂಲೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಮಣಿಕಂಠ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿರುವ ಸುದ್ದಿ ನಾಲ್ಕನೇ ಪುಟದಲ್ಲಿದೆ.

ಜೊತೆಯಲ್ಲಿ ‘ಶಂಕರಾಭರಣ’ ಸಿನಿಮಾ ಪ್ರಚಾರಕ್ಕಾಗಿ ಬಸ್ ಚಾಲನೆ ಮಾಡಿಕೊಂಡು ಶಿವಮೊಗ್ಗಕ್ಕೆ ಆಗಮಿಸಿರುವ ನಟ ಶೈನ್ ಶೆಟ್ಟಿ ಅವರ ವಿಶೇಷ ಪ್ರಯಾಣ, ಶಿವಮೊಗ್ಗ ಅಕ್ಕಪಡೆಯ 3 ತಿಂಗಳ ಕಾರ್ಯಾಚರಣೆಯ ಸಾಧನೆ ಹಾಗೂ ಆರ್‌ಎಸ್‌ಎಸ್ ಪಥಸಂಚಲನದ ಕುರಿತು ಶಿವಮೊಗ್ಗ ವಿಭಾಗದ ಸಹಕಾರ್ಯವಾಹ ಮಧುಕರ್ ನೀಡಿರುವ ಹೇಳಿಕೆಗಳೂ ಇಂದಿನ ಸಂಚಿಕೆಯಲ್ಲಿವೆ.

ಇಂದಿನ ಮಲೆನಾಡು ಟುಡೆ ಇ-ಪತ್ರಿಕೆ ಓದಿ, PDF ಡೌನ್‌ಲೋಡ್ ಮಾಡಿಕೊಳ್ಳಿ

ಮಲೆನಾಡು ಟುಡೆ ದಿನಪತ್ರಿಕೆಯ ಇಂದಿನ ಸಂಪೂರ್ಣ ಸಂಚಿಕೆಯನ್ನು ಓದುಗರು PDF ರೂಪದಲ್ಲಿ ಓದಬಹುದು. ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇ-ಪತ್ರಿಕೆಯನ್ನು ತೆರೆಯಬಹುದು. ಇಂದಿನ ಇ-ಪತ್ರಿಕೆಯನ್ನು ಓದಲು ಕೆಳಗಿನ PDF ಲಿಂಕ್ ತೆರೆಯಿರಿ. ಪತ್ರಿಕೆಯನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಉಳಿಸಿಕೊಳ್ಳಲು Download ಆಯ್ಕೆಯನ್ನು ಬಳಸಿ.

ಮಲೆನಾಡು ಮತ್ತು ಶಿವಮೊಗ್ಗ ಜಿಲ್ಲೆಯ ಸುದ್ದಿಗಳನ್ನು ಒಂದೇ ಸಂಚಿಕೆಯಲ್ಲಿ ಓದಲು ಮಲೆನಾಡು ಟುಡೆ ಇ-ಪತ್ರಿಕೆ ಲಭ್ಯವಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor