ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರತಿನಿತ್ಯ ಅಡಿಕೆ ದರದಲ್ಲಿ ಏರಿಳಿತ ಕಾಣಿಸುತ್ತಲೇ ಇದೆ. ಕಳೆದ 2 ತಿಂಗಳುಗಳ ಹಿಂದೆ 50 ಸಾವಿರದ ಮೇಲಿರುತ್ತಿದ್ದ ರಾಶಿಇಡಿ ಅಡಿಕೆಯ ರೇಟು ಇದೀಗ 48 ಮತ್ತು 49 ರ ಆಸುಪಾಸಿನಲ್ಲಿದೆ. ಕಳೆದ 2 ದಿನಗಳ ರಜೆಯ ನಂತರ ಇವತ್ತು ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ದರ ಹೇಗಿದೆ? ವಿವಿಧ ವೆರೈಟಿಗಳ ಅಡಿಕೆ ದರ ಎಷ್ಟಿದೆ ಎಂಬುದನ್ನು ನೋಡಿ.
ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಇವತ್ತು ಅಂದರೆ (22-10-2026) ಬೆಟ್ಟೆ, ಗೊರಬಲು, ರಾಶಿಇಡಿ ಸೇರಿದಂತೆ ವಿವಿಧ ವೆರೈಟಿಗಳ ಇಂದಿನ ಧಾರಣೆ ವಿವರ ಇಲ್ಲಿದೆ
| ಹುಟ್ಟುಬಳಿಗಳ ವಿಧಗಳು | ಆವಕ (ಕ್ವಿಂ) | ಕನಿಷ್ಠ (ಕ್ವಿಂ) | ಗರಿಷ್ಠ (ಕ್ವಿಂ) | ಮಾದರಿ (ಕ್ವಿಂ) |
| ಸರಕು/ಹಸನ | 55 | 51000 | 70809 | 68599 |
| ಬೆಟ್ಟೆ | 43 | 48219 | 57600 | 56829 |
| ರಾಶಿಇಡಿ | 3035 | 40009 | 49399 | 48089 |
| ಗೊರಬಲು | 291 | 19000 | 38678 | 35699 |
| ಹೊಸರಾಶಿಇಡಿ | 185 | 44029 | 48969 |
