ಶಿವಮೊಗ್ಗ: ಸಿಮ್ ಪೋರ್ಟ್ ಮಾಡಿದರೆ ನೆಕ್ ಬ್ಯಾಂಡ್ ಕೊಡ್ತೀವಿ ಎಂದ ಯುವಕರು: ನಂಬಿದ ಇಂಜಿನಿಯರ್ ಗೆ ಆಗಿದ್ದೇನು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ನಾವು ಏರ್ಟೆಲ್ ಹಾಗೂ ಜಿಯೋ ಸಿಮ್ ಏಜೆಂಟ್ ಗಳೆಂದು ಹೇಳಿಕೊಂಡು, ವ್ಯಕ್ತಿಯೊಬ್ಬರ ದಾಖಲೆಗಳನ್ನು ಬಳಸಿ ಸಿಮ್​ ತೆಗೆದುಕೊಂಡು ಅದನ್ನು ಸೈಬರ್ ಅಪರಾಧಕ್ಕೆ ಬಳಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ದೂರುದಾರರಾದ ಶಿವಮೊಗ್ಗದ ಇಂಜಿನಿಯರ್ ವ್ಯಕ್ತಿ ತಾವು ಅಂಗಡಿಯಲ್ಲಿ ಇದ್ದಾಗ ಇಬ್ಬರು ಹುಡುಗರು ಅಂಗಡಿಗೆ ಬಂದಿದ್ದಾರೆ. ಬಂದವರು ನಾವು ಜಿಯೋ ಹಾಗೂ ಏರ್ಟೆಲ್ ಕಂಪನಿಗಳ ಏಜೆಂಟ್ ಗಳು, ನಿಮ್ಮ ಬಳಿ ಇರುವ ಸಿಮ್ ಅನ್ನು ಪೋರ್ಟ್ ಮಾಡಿಕೊಡುತ್ತೇವೆ, ಇದರ ಜೊತೆಗೆ ನಿಮಗೆ ನೆಕ್ ಬ್ಯಾಂಡ್ ಅನ್ನು ಉಡುಗೊರೆಯಾಗಿ ನೀಡುತ್ತೇವೆ ಎಂದು ನಂಬಿಸಿದ್ದಾರೆ.

ಇದನ್ನು ನಂಬಿದ ವ್ಯಕ್ತಿ ನಂಬರ್ ಅನ್ನು ಪೋರ್ಟ್ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ದಾಖಲೆಗಳನ್ನು ಹಾಗೆಯೇ ತಮ್ಮ ಫೋನ್ ನಂಬರ್ ಅನ್ನು ನೀಡಿದ್ದಾರೆ. ಇದನ್ನೇ ದಾಳವಾಗಿ ಬಳಸಿಕೊಂಡ ವಂಚಕರು, ದೂರುದಾರರ ದಾಖಲಾತಿಯನ್ನು ಬಳಸಿಕೊಂಡು ಅವರ ಹೆಸರಿನಲ್ಲಿ ಹೊಸದಾದ ಸಿಮ್ ಅನ್ನು ತೆಗೆದುಕೊಂಡು ಸೈಬರ್ ವಂಚನೆಗೆ ಬಳಸಿಕೊಂಡಿದ್ದಾರೆ. ಸೈಬರ್ ಪೊಲೀಸ್ ಠಾಣೆಯ ಪೊಲೀಸ್ ಒಬ್ಬರಿಂದ ದೂರುದಾರರಿಗೆ, ತಮ್ಮ ಹೆಸರಿನಲ್ಲಿ ದಾಖಲೆಗಳನ್ನು ಬಳಸಿ ನಂಬರ್ ತೆಗೆದುಕೊಂಡಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ವಂಚಕರನ್ನು ಪತ್ತೆಹಚ್ಚುವಂತೆ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor